ವೋಟಿಗೆ 500, 1000, 2000 | ವಾರ್ಡ್‌ಗೆ 10 ಲಕ್ಷ | ಎಲೆಕ್ಷನ್‌ನಲ್ಲಿ ಜಗಮಗಿಸಿತಾ ಐನೂರರ ಕಂತೆ...ಕಂತೆ ನೋಟು

Voters have talked about distribution of money to voters in Shimoga Lok Sabha elections

ವೋಟಿಗೆ 500, 1000, 2000 | ವಾರ್ಡ್‌ಗೆ 10 ಲಕ್ಷ |  ಎಲೆಕ್ಷನ್‌ನಲ್ಲಿ  ಜಗಮಗಿಸಿತಾ ಐನೂರರ ಕಂತೆ...ಕಂತೆ  ನೋಟು
Shimoga Lok Sabha elections

SHIVAMOGGA | MALENADUTODAY NEWS | May 7, 2024  

 

ಶಿವಮೊಗ್ಗ ಲೋಕಸಭಾ ಚುನಾವಣೆಯ ಮತದಾನ ಸುಗಮವಾಗಿ ಸಾಗುತ್ತಿದೆ. ಇದರ ನಡುವೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಹಂಚಿಕೆಯಾಗಿದೆ ಎನ್ನಲಾದ ನೋಟುಗಳ ಬಗ್ಗೆಯು ಸಾಕಷ್ಟು ಚರ್ಚೆಯಾಗುತ್ತಿದೆ. ಪಕ್ಷಾತೀತವಾಗಿ ದುಡ್ಡು ಹಂಚಿಕೆಯಾಗಿರುವ ಬಗ್ಗೆ ಚರ್ಚೆಯಾಗುತ್ತಿದ್ದು ಪೊಲೀಂಗ್‌ ಬೂತ್‌ಗಳಲ್ಲಿಯು ನಿಮಗೆ ಬಂದಿತ್ತಾ? ನಿಮಗೆ ತಲುಪಿತ್ತಾ? ನಮ್‌ ವಾರ್ಡ್‌ಗೆ ಬಂದಿದ್ರಾ? ಕೇರಿಗೆ ಹಂಚಿದ್ರಾ? ಎಂಬ ಕತೂಹಲಕಾರಿ ಚರ್ಚೆಗಳು ವ್ಯಾಪಕವಾಗಿ ನಡೆಯುತ್ತಿದೆ. 

 

ಬಿಗಿ ಭದ್ರತೆಯ ನಡುವೆ ಕೋಟಿ ಕೋಟಿ ಸೋರಿಕೆ?

 

ಅಕ್ರಮವಾಗಿ ಅಥವಾ ದಾಖಲೆ ಇಲ್ಲದೆ ಹಣ ವಸ್ತು ಇತ್ಯಾದಿಗಳನ್ನು .ಸಾಗಿಸುವಂತಿಲ್ಲ ಎಂದು ನೀತಿ ಸಂಹಿತೆ ಹೇಳುತ್ತದೆ. ಮೇಲಾಗಿ ಇಂತಹ ಅಕ್ರಮ ಮೇಲೆ ಕಣ್ಣಿಡಲು ಚುನಾವಣೆ ಆಯೋಗ ತನ್ನದೇ ವ್ಯವಸ್ಥೆಯನ್ನು ಮಾಡಿಕೊಂಡಿತ್ತಷ್ಟೆ ಅಲ್ಲದೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ. ಚೆಕ್‌ ಪೋಸ್ಟ್‌ಗಳಲ್ಲಿ ಪ್ರತಿ ವಾಹನಗಳನ್ನ ತಪಾಸಣೆ ಮಾಡಲಾಗುತ್ತಿದೆ. ಚೆಕ್‌ಪೋಸ್ಟ್‌ ಚಟುವಟಿಕೆಗಳನ್ನ ನೇರವಾಗಿ ಆನ್‌ಲೈನ್‌ನಲ್ಲಿ ಕುಳಿತು ಪರಿಶೀಲಿಸಲಾಗಿದೆ. ಹೀಗಿದ್ದೂ ಹಣ ಹಂಚಿಕೆಯಾಗಿದೆ ಎಂದರೇ ಅರ್ಥೈಸುವುದು ಕಷ್ಟವಾಗುತ್ತಿದೆ. 

 

ಮತದಾರ ಹೇಳಿದ ಸತ್ಯ?

 

ಮತದಾರರ ಮಾತುಗಳನ್ನೆ ಗಮಿಸಿದರೆ, ಶಿವಮೊಗ್ಗ ಸಿಟಿಯೊಂದರಲ್ಲಿಯೇ ವಾರ್ಡ್‌, ಬೂತ್‌, ಮನೆ  ಮತ್ತು ವೋಟ್‌ ಲೆಕ್ಕದಲ್ಲಿ ಹಣ ಹಂಚಲಾಗಿದೆ ಎನ್ನಲಾಗುತ್ತಿದೆ. ಕಳೆದ 48 ಗಂಟೆಗಳಲ್ಲಿ ಹಣ ಹಂಚಿಕೆ ನಡೆದಿದೆ. ಕೆಲವೆಡೆ ವೋಟಿಗೆ ಐನೂರು ರೂಪಾಯಿ ನೀಡಲಾಗಿದೆ, ಇನ್ನು ಕೆಲವೆಡೆ ಮನೆಗೆ ಐನೂರು ರೂಪಾಯಿ ನೀಡಲಾಗಿದೆಯಂತೆ. ಇನ್ನೊಂದು ಪಕ್ಷದವರು ಮನೆಗೆ ಸಾವಿರ ರೂಪಾಯಿ ನಿಕ್ಕಿ ಮಾಡಿದ್ದಾರಂತೆ. ಅಲ್ಲದೆ ತಮ್ಮದೇ ಪಕ್ಷದ ಮತದಾರರಿಗೆ 2 ಸಾವಿರ ರೂಪಾಯಿ ಕೊಟ್ಟಿದ್ದಾರಂತೆ. ಮತ್ತೊಂದು ಪಕ್ಷದವರೂ ತಡವಾಗಿ ಹಣ ಹಂಚಲು ಆರಂಭಿಸಿದ್ದಾರೆ ಎನ್ನಲಾಗ್ತಿದೆಯಾದರೂ 500-600 ಗರಿಷ್ಟ 1000 ರೂಪಾಯಿವರೆಗೂ ಹಂಚಿದ್ದಾರೆ ಎಂಬುದು ಮತದಾರನ ಮಾತಾಗಿದೆ. 

 

ಯಾರಿಗೂ ಹೇಳಬೇಡಿ

 

ದುಡ್ಡು ಕೊಟ್ಟು ಯಾರಿಗೂ ಹೇಳಬೇಡಿ, ಇರೋ ವೋಟಲ್ಲಿ ಅರ್ಧದಷ್ಟು ವೋಟು ನಮಗೆ ಹಾಕಿ, ಮರಿಬೇಡಿ, ಅಂತಾ ಮನೆ ಬಾಗಿಲಿಗೆ ಬಂದು ಹೇಳಿ ಹೋಗಿದ್ದಾರೆ. ಬೂತ್‌ ಚೀಟಿಯನ್ನ ಕೊಡುವ ನೆಪದಲ್ಲಿ ಬಂದಿರಬಹುದು ಅಂತಾ ಕೆಲವರು ಹೇಳಿದರೆ, ಇನ್ನೂ ಕೆಲವು ಮಾಹಿತಿ ಪ್ರಕಾರ ಬೆಂಗಳೂರು ಕಡೆಯಿಂದ ಬಂದ ಹುಡುಗರು ಹಣ ಹಂಚಿದ್ದಾರೆ ಎಂದು ಒಂದಿಷ್ಟು ಮಂದಿ ಹೇಳುತ್ತಿದ್ದಾರೆ. ಒಂದು ಏರಿಯಾಕ್ಕೆ ಕೊಟ್ಟು ಹೋಗಿದ್ದಾರೆ. ನಮ್ಮ ಏರಿಯಾಕ್ಕೆ ಕೊಡಲಿಲ್ಲ, ಜವಾಬ್ದಾರಿ ವಹಿಸಿಕೊಂಡರವರೇ ತಿಂದಿರಬೇಕು ಅಂತಾ ಮತ್ತೊಂದಿಷ್ಟು ಮಂದಿಯ ದೂರಾಗಿದೆ. 

 

ವಾರ್ಡ್‌ಗೆ 10 ಲಕ್ಷ ರೂಪಾಯಿ

 

ಬೂತ್‌ಗೆ ಒಂದು ಲಕ್ಷ, ವಾರ್ಡ್‌ಗೆ 10 ಲಕ್ಷ , ವೋಟಿಗೆ 2000 ರೂಪಾಯಿವರೆಗೂ ಹಂಚಲಾಗಿದೆ. ಒಟ್ಟಾರೆ, ಮತದಾನದ ಹಬ್ಬಕ್ಕೆ ದುಡ್ಡಿನ ಬಾಡೂಟ ಕೊಟ್ಟಿರುವ ಸುದ್ದಿ ಕಣ್ಕಟ್ಟಿನಂತೆ ಗೊತ್ತಾಗಿಯು ಅರಿವಿಗಿಲ್ಲದಂತೆ ಹರಿದಾಡುತ್ತಿದೆ. ಎಲ್ಲದರ ನಡುವೆ  ಇಷ್ಟೊಂದು ದುಡ್ಡು ಸಾಗಾಣಿಕೆ ಆಗಿದ್ದು ಹೇಗೆ? ಒಂದು ಕಡೆಯಿಂದ ಇನ್ನೊಂದು ಕಡೆಗೆ ಹಣ ಹರಿದಾಡಿದ್ದಾದರೂ ಹೇಗೆ? ಎಂಬ ಪ್ರಶ್ನೆಯು ಸಹಜವಾಗಿಯೇ ಕೇಳಿಬರುತ್ತದೆ.