ಬೈಂದೂರುನಲ್ಲಿ ಶಿವರಾಜ್‌ ಕುಮಾರ್‌ ದಂಪತಿ | ಇವತ್ತು ಎಲ್ಲೆಲ್ಲಾ ಪ್ರಚಾರ ಮಾಡಿದ್ರು? | ಹೇಗಿತ್ತು ಜೋಶ್?

Shivraj Kumar couple in Byndur today Where did he campaign? | how was josh

ಬೈಂದೂರುನಲ್ಲಿ ಶಿವರಾಜ್‌ ಕುಮಾರ್‌  ದಂಪತಿ | ಇವತ್ತು ಎಲ್ಲೆಲ್ಲಾ ಪ್ರಚಾರ ಮಾಡಿದ್ರು? | ಹೇಗಿತ್ತು ಜೋಶ್?
Shivraj Kumar couple

SHIVAMOGGA | MALENADUTODAY NEWS |  Apr 20, 2024  

ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಗೀತಾ ಶಿವರಾಜ್‌ ಕುಮಾರ್‌ ಇಂದು ಬೈಂದೂರು ಭಾಗದಲ್ಲಿ ಪ್ರಚಾರ ನಡೆಸಿದ್ರು. ಇಲ್ಲಿನ ಗೋಳಿಹೊಳೆ, ಬೈಂದೂರು ಪೇಟೆ, ಹೆಮ್ಮಾಡಿ, ಕಟ್ಟಿ ಬೆಲ್ಲೂರು, ಕೊಲ್ಲೂರು, ಜಡ್ಕಲ್‌, ಮತ್ತು ಮುದೂರು, ಕಿರಿಮಂಜೇಶ್ವರ, ಹೇರೂರು, ಮರವಂತೆಯಲ್ಲಿ ಗೀತಾ ಶಿವರಾಜ್‌ಕುಮಾರ್‌ರವರ ಪ್ರಚಾರ ಸಭೆ ನಿಕ್ಕಿಯಾಗಿತ್ತು. 

ಸಾರ್ವಜನಿಕ ಸಭೆ, ಕಾರ್ಯಕರ್ತರ ಮೀಟಿಂಗ್‌ನಲ್ಲಿ  ಪಾಲ್ಗೊಂಡ ಗೀತಾಶಿವರಾಜ್‌ ಕುಮಾರ್‌ ಹಾಗೂ ಶಿವರಾಜ್‌ ಕುಮಾರ್‌ ಮತಯಾಚನೆ ಮಾಡಿದರು.

ಇನ್ನೂ ಗೋಳಿಹೊಳೆಯಲ್ಲಿ ಸಭೆ ನಡೆಸಿ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್‌ ಬಿಜೆಪಿಯಿಂದ ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ ಪರಿಶಿಷ್ಟ ಸಮುದಾಯದಿಂದ ಒಂದೇ ಒಂದು ಸ್ಥಾನ ಗೆಲ್ಲಲು ಸಾಧ್ಯವಾಗಲಿಲ್ಲ. ಅದಕ್ಕೆ ಕಾರಣ ಬಿಜೆಪಿಯ ಸುಳ್ಳು ಭರವಸೆಯ ಆಡಳಿತ. ಆದ್ದರಿಂದ, ಈ ಭಾರಿ ನನಗೆ ಅವಕಾಶ ಕಲ್ಪಿಸಿಕೊಡಿ, ನನ್ನ ತಂದೆಯ ಹಾದಿಯಲ್ಲಿ ಸಾಗಿ, ಜನ ಸಮಾನ್ಯರಿಗೆ ಪೂರಕವಾದ ಆಡಳಿತ ನಡೆಸುತ್ತೇನೆ ಎಂದರು.