ಉಚ್ಚಾಟನೆ ಪತ್ರ ಇನ್ನೂ ತಲುಪಿಲ್ಲ | ಏನಿದೆ ಕೆಎಸ್‌ ಈಶ್ವರಪ್ಪನವರ ಮುಂದಿನ ಟಾರ್ಗೆಟ್?‌

The eviction letter has not yet arrived What is KS Eshwarappa's next target?

ಉಚ್ಚಾಟನೆ ಪತ್ರ ಇನ್ನೂ ತಲುಪಿಲ್ಲ | ಏನಿದೆ ಕೆಎಸ್‌ ಈಶ್ವರಪ್ಪನವರ ಮುಂದಿನ ಟಾರ್ಗೆಟ್?‌
KS Eshwarappa expelled from BJP

SHIVAMOGGA | MALENADUTODAY NEWS | Apr 23, 2024  | KS Eshwarappa expelled from BJP 

 

ಲೋಕಸಭಾ ಚುನಾವಣೆಯಲ್ಲಿ ತಮ್ಮ ಉಮೇದುವಾರಿಕೆಯನ್ನು ಹಿಂಪಡೆಯದ ಕೆಎಸ್‌ ಈಶ್ವರಪ್ಪ ವನ್ನು ಬಿಜೆಪಿ ಪಕ್ಷ ಆರು ವರ್ಷಗಳ ಕಾಲ ಉಚ್ಚಾಟಿಸಿದೆ. ಈ ಸಂಬಂಧ ಶಿವಮೊಗ್ಗದಲ್ಲಿ ಫಸ್ಟ್‌ ರಿಯಾಕ್ಷನ್‌ ನೀಡಿದ ಕೆಎಸ್‌ ಈಶ್ವರಪ್ಪ  ಉಚ್ಚಾಟನೆಯ ಆದೇಶ ನನಗೆ ಇನ್ನೂ ತಲುಪಿಲ್ಲ. ಮಾಧ್ಯಮಗಳಿಂದ ಗೊತ್ತಾಗಿದೆ ಎಂದಿದ್ದಾರೆ. 

 

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ತಮ್ಮ ಮಾತು ಮುಂದುವರಿಸುತ್ತಾ, ಚುನಾವಣೆಗೆ ಸ್ಪರ್ಧಿಸುವುದು ಶತಃಸಿದ್ಧ. ಗೆಲ್ಲುವುದು ನಿಶ್ಚಿತ. ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಲು ಕೈ ಎತ್ತುವೆ ಎಂದು ಹೇಳಿದ್ದೆ. ಅದರಂತೆ ನಾಮಪತ್ರ ಹಿಂತೆಗೆದುಕೊಳ್ಳದೇ ಕಣದಲ್ಲಿಯೇ ಉಳಿದಿದ್ದೇನೆ. ಆದರೆ ನನ್ನ ವಿರುದ್ಧ ಅಪಪ್ರಚಾರ ಮಾಡಿದರು ಎಂಧು ದೂರಿದರು. 

 

ನಾಳೆಯಿಂದ ಇನ್ನಷ್ಟು ಬಿರುಸಾಗಿ ಪ್ರಚಾರದಲ್ಲಿ ತೊಡಗಿಕೊಳ್ಳುವೆ ಎಂದ ಅವರು ನಾನು ನಾಮಪತ್ರ ಹಿಂಪಡೆದಿಲ್ಲ ಅಂತ ಇವತ್ತು ಎಲ್ಲರಿಗೂ ಗೊತ್ತಾಗಿದೆ. ಎಲ್ಲರಿಗೂ ಪಕ್ಷೇತರ ಸ್ಪರ್ಧೆ ಮಾಡುತ್ತೇನೆ ಅಂತ ಗೊತ್ತಾಗಿದೆ. ನಾಮಿನೇಷನ್‌ ವಾಪಸ್‌ ತಗೆದುಕೊಳ್ಳದಿರೋದು ಸಂತೋಷ ಆಗಿದೆ ಅಂತ ಜನ ಹೇಳುತ್ತಿದ್ದಾರೆ ಎಂದಿದ್ದಾರೆ. ನಾನು ಸಹ ಉಚ್ಚಾಟನೆ ಬಯಸುತ್ತಿದ್ದೆ ಎಂದ ಕೆಎಸ್‌ಇ, ನಾನು ಯಾವ ಉಚ್ಚಾಟನೆಗೂ ಹೆದರುವುದಿಲ್ಲ ನಾನು ಗೆದ್ದು ನರೇಂದ್ರ ಮೋದಿಯವರ ಕೈ ಹಿಡಿಯುತ್ತೇನೆ. ನನಗೆ ರೈತರ ಚಿಹ್ನೆ ಸಿಕ್ಕಿರುವುದು ಸಂತಸ ತಂದಿದೆ. ರೈತನ ಹೆಸರಿನಲ್ಲಿ ವೋಟ್ ಕೋಡಿ ಎನ್ನಲು ಸಂತೋಷ ಆಗುತ್ತದೆ ಎಂಧರು.  

 

ಎಲ್ಲಾ ಹಿಂದೂತ್ವವಾದಿ ಗಳನ್ನು ಯಡಿಯೂರಪ್ಪರವರು ಹಿಂದೆ ಸರಿಸಿದ್ದಾರೆ ಎಂದು ಆರೋಪಿಸಿದ ಕೆಎಸ್‌ ಈ‍ಶ್ವರಪ್ಪರವರು ಬಿಜೆಪಿ ಶುದ್ದೀಕರಣ ಮಾಡಲು ಹೊರಟಿರುವುದೆ ನನಗೆ ಸಂತೋಷದ ವಿಚಾರ. ಇದಕ್ಕಾಗಿ ಇಡೀ ರಾಜ್ಯದ ಜನ ನನಗೆ ಬೆಂಬಲ ಕೊಡುತ್ತಿದ್ದಾರೆ. ಕಮಲ ಚಿಹ್ನೆ ಇಲ್ಲದೆ ಸ್ಪರ್ಧೆ ಮಾಡುತ್ತಿರುವುದು ಕೇವಲ ತಾತ್ಕಾಲಿಕ, ಐದು ಭಾರಿ ಬಿಜೆಪಿಯಿಂದ ಗೆದ್ದಿದ್ದೇನೆ. ಆಣೆ ಮಾಡಿ ಜನರೇ ಹೇಳುತ್ತಿದ್ದಾರೆ ನಿಮಗೆ ವೋಟ್ ಮಾಡುತ್ತೇವೆ ಎನ್ನುತ್ತಿದ್ದಾರೆ. ಈ ಸಲ ನನ್ನ ಗೆಲುವು ನಿಶ್ಚಿತ ಎಂದಿದ್ದಾರೆ.