ಚುನಾವಣೆ ಪ್ರಚಾರದ ನಡುವೆ ಹೈಕೋರ್ಟ್‌ ಮೆಟ್ಟಿಲೇರಿದ ಸಂಸದ ಬಿವೈ ರಾಘವೇಂದ್ರ ! ಕಾರಣವೇನು?

Mp BY Raghavendra moves HC amid election campaign What's the reason

ಚುನಾವಣೆ ಪ್ರಚಾರದ ನಡುವೆ ಹೈಕೋರ್ಟ್‌ ಮೆಟ್ಟಿಲೇರಿದ ಸಂಸದ ಬಿವೈ ರಾಘವೇಂದ್ರ ! ಕಾರಣವೇನು?
Mp BY Raghavendra

Shivamogga  Apr 6, 2024   ಲೋಕಸಭೆ ಚುನಾವಣೆ 2024 ರ ಅಡಿಯಲ್ಲಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಅಭ್ಯರ್ಥಿಗಳನ್ನು ಗಂಭೀರವಾಗಿ ಕಾಡುತ್ತಿವೆ. ಇದಕ್ಕೆ ಪೂರಕವಾಗಿ ಲೋಕಸಭಾ ಚುನಾವಣೆ -2024 ಬಿ.ವೈ.ರಾಘವೇಂದ್ರ ವಿರುದ್ದ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ FIR ದಾಖಲಾಗಿತ್ತು. ಚಿತ್ರದುರ್ಗದ ಭೋವಿ ಗುರುಪೀಠಕ್ಕೆ ಭೇಟಿ ನೀಡಿದ್ದ  ಸಂಸದ ಬಿವೈ ರಾಘವೇಂದ್ರರವರು ಬಿಜೆಪಿ ಪರ ಪ್ರಚಾರ ನಡೆಸಿದ್ದು ಧಾರ್ಮಿಕ ಸ್ಥಳವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪದಡಿ ಕೇಸ್‌ ದಾಖಲಾಗಿತ್ತು. ಧಾರ್ಮಿಕ ಸಂಸ್ಥೆಗಳ ದುರ್ಬಳಕೆ ತಡೆ ಕಾಯ್ದೆ-1988, ಜನಪ್ರತಿನಿಧಿಗಳ ಕಾಯ್ದೆ-1951 ಮತ್ತು ಭಾರತೀಯ ದಂಡ ಸಂಹಿತೆ–1860ರ (ಐಪಿಸಿ) ಕಲಂ 171 ಎಫ್‌ (ಚುನಾವಣೆಯಲ್ಲಿ ಅನಪೇಕ್ಷಿತ ಪ್ರಭಾವ ಬೀರಿದ) ಅಡಿಯಲ್ಲಿ ಎಫ್‌ಐಆರ್‌ ಆಗಿತ್ತು. 

ಹೈಕೋರ್ಟ್‌ ಮೆಟ್ಟಿಲೇರಿದ ಸಂಸದ 

 

ಸದ್ಯ ಈ ಕೇಸ್‌ನ ಸಂಬಂಧ ಸಂಸದ ಬಿವೈ ರಾಘವೇಂದ್ರರವರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ ಎಂದು ಬೆಂಗಳೂರು ಸುದ್ದಿ ಹೇಳುತ್ತಿದೆ. ಅಲ್ಲಿನ ವರ್ತಮಾನದ ಪ್ರಕಾರ, ನೀತಿ ಸಂಹಿತೆ ಉಲ್ಲಂಘನೆ ಕೇಸ್‌ ಸಂಬಂಧ  ಅರ್ಜಿಯನ್ನು ತುರ್ತು ವಿಚಾರಣೆ ಕೈಗೊಳ್ಳುವಂತೆ  ರಾಘವೇಂದ್ರ ಪರ ವಕೀಲರು ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಪೀಠದ ಮುಂದೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಕೈಗೆತ್ತಿಕೊಂಡ ಕೋರ್ಟ್‌ ಮುಂದಿನ ವಾರದಲ್ಲಿ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲಾಗುವುದು ಎಂದಿದೆ.