ಅಪಾಯ ಅನಿರೀಕ್ಷಿತ! ಸಾವು ಜಸ್ಟ್‌ ಮಿಸ್!‌ ಬೆಂಗಳೂರಲ್ಲಿ ನಡೆಯಿತು ನಿಗೂಢ ಘಟನೆ! ಸಿಸಿ ಟಿವಿ ದೃಶ್ಯ ವೈರಲ್‌!

After the hit by the bull, the man fell on the road and narrowly escaped being run over by a truck coming from the opposite direction. The entire incident was caught on CCTV camera.

ಅಪಾಯ ಅನಿರೀಕ್ಷಿತ! ಸಾವು ಜಸ್ಟ್‌ ಮಿಸ್!‌ ಬೆಂಗಳೂರಲ್ಲಿ ನಡೆಯಿತು ನಿಗೂಢ ಘಟನೆ! ಸಿಸಿ ಟಿವಿ ದೃಶ್ಯ ವೈರಲ್‌!
CCTV camera,kolebasava

Shivamogga  Apr 5, 2024  ಜೀವನದಲ್ಲಿ ಯಾವ ಕ್ಷಣ ಏನಾಗುತ್ತೋ ಹೇಳೋದಕ್ಕೆ ಆಗಲ್ಲ. ಯಾವ ಹೊತ್ತಿನಲ್ಲಿ ಯಾರು ಜೀವಕ್ಕೆ ಅಪಾಯ ತಂದಿಡುತ್ತಾರೋ, ಆಪತ್ತು ಹೇಗೆ ಬರುತ್ತೋ ಭಗವಂತನೇ ಬಲ್ಲ. ಆದರೆ ಬೀಸುವ ದೊಣ್ಣೆಯಿಂದ ಪಾರದಂತಹ ಅನುಭವ ಕ್ಷಣ ಮಾತ್ರದಲ್ಲಿ ಕಳೆದುಹೋಗುವಾಗ ನಿಜಕ್ಕೂ ದೇವರಿದ್ದಾನೆ ಗುರು ಎಂದೆನಿಸುತ್ತದೆ. ಇದಕ್ಕೆ ಸಾಕ್ಷಿ ಎಂಬಂತಹ ಘಟನೆಯೊಂದು ಬೆಂಗಳೂರು ಮಹಾಲಕ್ಷ್ಮೀ ಲೇಔಟ್‌ನಲ್ಲಿ ನಡೆದಿದೆ. 

ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್‌ ಡ್ರೈವರ್‌ ಒಬ್ಬ ತನ್ನ ಸಾವಿನಿಂದ ಸೆಕೆಂಡ್‌ನಲ್ಲಿ ಬಚಾವ್‌ ಆದ ಘಟನೆಯೊಂದು ಇಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ ಮತ್ತು ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.  ಇಲ್ಲಿನ ಸ್ವಿಮ್ಮಿಂಗ್‌ ಪೂಲ್‌ ಜಂಕ್ಷನ್‌ ಬಳಿ ಮಹಿಳೆಯೊಬ್ಬರು ಕೋಲೆ ಬಸವನನ್ನ ಆಡಿಸಿಕೊಂಡು ಬರುತ್ತಿರುತ್ತಾರೆ. ಇದಕ್ಕೆ ಎದುರಾಗಿ ಬೈಕ್‌ ಸವಾರನೊಬ್ಬ ಬರುತ್ತಾನೆ. ಆ ಕೋಲೆ ಬಸನನಿಗೆ ಏನಾಗುತ್ತೋ ಗೊತ್ತಿಲ್ಲ. ಇದ್ದಕ್ಕಿದ್ದ ಚೊಂಗು ನೆಗೆದು ಸ್ಕೂಟರ್‌ನಲ್ಲಿ ಬರ್ತಿದ್ದವನಿಗೆ ಗುದ್ದಿ ಬಿಡುತ್ತದೆ. ಬಸವನ ದಾಳಿಗೆ ಹೆದರಿದ ಮಹಿಳೆ ಅದರ ಮೂಗುದಾರವನ್ನ ಸಹ ಬಿಟ್ಟು ಬಿಡುತ್ತಾಳೆ. ನಡೆದಿದ್ದು ಇಷ್ಟೆ ಕ್ಷಣ ಮಾತ್ರದಲ್ಲಿ ಬೈಕ್‌ಗೆ ಗುದ್ದಿದ ಕೋಲೆ ಬಸವ ಅಲ್ಲಿಂದ ಚಿಮ್ಮನೆ ನೆಗೆದು ಓಡುತ್ತೆ. ಆದರೆ ಇಲ್ಲಿ ಯಾಮಾರಿದ್ದರೆ ಬೈಕ್‌ ಸವಾರ ಪ್ರಾಣ ಹೋಗುತ್ತಿತ್ತು. ಇದಕ್ಕೆ ಕಾರಣ ಕೋಲೆಬಸವ ಬರುವಾಗಲೇ ಅದೇ ಹಾದಿಯಲ್ಲಿ ಟ್ರಕ್‌ವೊಂದು ಬರುತ್ತಿತ್ತು. ಅದೃಷ್ಟಕ್ಕೆ ಅದರ ಚಾಲಕನ ಸಮಯಪ್ರಜ್ಞೆ ತುಂಬಾನೇ ಚೆನ್ನಾಗಿತ್ತು. ಚೂರು ಮುಂದಕ್ಕೆ ಸಾಗಿದ ಆತ ಹಿಂದೇನೋ ಸದ್ದಾಯ್ತು ಎಂದು ಗೊತ್ತಾಗುತ್ತಲೇ ಬ್ರೇಕ್‌ ಒತ್ತಿ ಟ್ರಕ್‌ನ್ನ ನಿಂತಲ್ಲೆ ನಿಲ್ಲಿಸಿದ್ದ. ಹಾಗಾಗಿ ಟ್ರಕ್‌ ಕೆಳಕ್ಕೆ ಬಿದ್ದರೂ ಬೈಕ್‌ ಸವಾರ ಟ್ರಕ್‌ನ ಹಿಂಬದಿ ಟೈರ್‌ ಆತನ ಮೇಲೆ ಹರಿಯುವುದರಿಂದ ತಪ್ಪಿಸಿಕೊಂಡಿದ್ದ. 

ಬದುಕು ಒಡ್ಡಿದ ಸವಾಲುಗಳನ್ನ ಯೋಚಿಸ್ತಿದ್ದ ಬರುತ್ತಿದ್ದ ಬೈಕ್‌ ರೈಡರ್‌ಗೆ ಕೋಲೆ ಬಸವ ಸಾವಿನ ಯಮನಾಗಿ ಕಾಣಿಸಿದ್ದ. ಆದರೆ ಯಾವ ತಾಯಿ ಮಾಡಿದ ಪುಣ್ಯವೋ ಏನೋ ಬೈಕ್‌ ಸವಾರನ ಜೀವ ಉಳಿದಿತ್ತು. ವಿಡಿಯೋವನ್ನ ಸಾಕ್ಷಿ ಕರಿಸಿದ ಸಿಟಿ ಕ್ಯಾಮರಾ ಇದೀಗ ಸೋಶಿಯಲ್‌ ಮೀಡಿಯಾಗಳಲ್ಲಿ ದೇವರ ಚರ್ಚೆ ಹುಟ್ಟುಹಾಕಿದೆ.