ಬೆಂಗಳೂರು ಯುವತಿ ಮೇಲೆ ಗಂಗಾವತಿಯಲ್ಲಿ ಅತ್ಯಾಚಾರ ! ಆರು ಮಂದಿ ಅರೆಸ್ಟ್ !

 Shivamogga Feb 12, 2024 | ಗಂಡನನ್ನ ಹುಡುಕಿಕೊಂಡು ಗಂಗಾವತಿಗೆ ಹೋಗಿದ್ದ ಬೆಂಗಳೂರು ಮೂಲದ ಯುವತಿ ಮೇಲೆ ಅತ್ಯಾಚಾರವೆಸಗಿರುವ ಘಟನೆಯೊಂದರ ಬಗ್ಗೆ ವರದಿಯಾಗಿದೆ. 

ಗಂಗಾವತಿ ಬಸ್​ ನಿಲ್ಧಾಣದಲ್ಲಿ ಗಂಡನನ್ನು ಭೇಟಿಯಾದ ಯುವತಿ ಕೌಟುಂಬಿಕ ವಿಚಾರದ ಬಗ್ಗೆ ಮಾತನಾಡುತ್ತಿದ್ದರು. ಈ ವೇಳೆ ಅವರ ನಡುವೆ ಜಗಳವಾಗಿದೆ. ಜಗಳ ಬಿಡಿಸುವ ನೆಪದಲ್ಲಿ ಬಂದಿದ್ದ ಯುವಕರ ಗುಂಪು ಯುವತಿಯ ಪತಿ ಮೇಲೆ ಹಲ್ಲೆ ಮಾಡಿ ಯುವತಿಯ ಮೈ ಕೈ ಮುಟ್ಟಿದ್ದಾರೆ.  ಗಂಡ ಹೆಂಡತಿ ನಡುವಿನ ಸಮಸ್ಯೆ ಮಧ್ಯ ಬರಬೇಡಿ ಎಂದರು ಬಿಡದೆ ಯುವಕರ ಗುಂಪು ಹಲ್ಲೆ ಮಾಡಿದೆ. ಈ ವೇಳೆ ರಕ್ಷಣೆಗಾಗಿ ಅಲ್ಲಿಯೇ ಇದ್ದ ಉದ್ಯಾನವನದಲ್ಲಿ ಯುವತಿ ಅಡಗಿ ಕುಳಿತಿದ್ದಾಳೆ. ಆದರೂ ಆಕೆಯನ್ನ ಬೆಂಬಿಡದ ದುಷ್ಕರ್ಮಿಯೊಬ್ಬ ಅಲ್ಲಿಯೇ ಆಕೆ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ದೂರಲಾಗಿದೆ.  ಈ ಸಂಬಂಧ ಆರು ಮಂದಿಯನ್ನ ಗಂಗಾವತಿ ಪೊಲೀಸರು ಬಂಧಿಸಿದ್ದಾರೆ. 

ಘಟನೆಯಲ್ಲಿ ಸಂತ್ರಸ್ತೆ ನೇರವಾಗಿ ಠಾಣೆಗೆ ಬಂದು ದೂರು ನೀಡಿದ್ದಾರೆ. ಬೆಂಗಳೂರು ನಲ್ಲಿ ಕೆಲಸ ಮಾಡಿಕೊಂಡಿದ್ದ ಯುವತಿ ಮೂರು ತಿಂಗಳ ಹಿಂದಷ್ಟೆ ಮದುವೆಯಾಗಿದ್ದರು. ಈ ನಡುವೆ ನಿರಂತರ ಜಗಳದಿಂದ ಪತಿ ಗಂಗಾವತಿಗೆ ವಾಪಸ್ ಆಗಿದ್ದ. ಗಂಡನನ್ನ ಹುಡುಕಿಕೊಂಡು ಯುವತಿ ಸಹ ಬಂದಿದ್ದಾಳೆ. ಕಳೆದ ಫೆಬ್ರವರಿ 8 ರಂದು ರಾತ್ರಿ ಗಂಗಾವತಿಗೆ ಬಂದಿಳಿದ ಯುವತಿ ತನ್ನ ಪತಿಯ ಜೊತೆ ಕೌಟುಂಬಿಕ ವಿಚಾರದಲ್ಲಿ ಮಾತನಾಡ್ತಿದ್ದಳು. ಈ ವೇಳೆ ಘಟನೆ ನಡೆದಿದ್ದು ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.   

Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು