Rameswaram cafe blast case | ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣ! ತೀರ್ಥಹಳ್ಳಿ ಮಾಜ್ ಮುನೀರ್ NIA ಕಸ್ಟಡಿಗೆ!
tirthahalli Maz Muneer arrested by NIA in Bangalore Rameswaram cafe blast case

shivamogga Mar 15, 2024 : ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳ ಎನ್ಐಎ ಮತ್ತೊಬ್ಬ ಸಸ್ಪೆಕ್ಟ್ನ್ನು ವಿಚಾರಣೆಗೆ ಪಡೆದಿದೆ. ಈ ಸಲ ತೀರ್ಥಹಳ್ಳಿಯ ಮಾಜ್ ಮುನೀರ್ನನ್ನ ವಶಕ್ಕೆ ಪಡೆದು ಎನ್ಐಎ ವಿಚಾರಣೆ ನಡೆಸ್ತಿದೆ.
Bengaluru Rameshwaram Cafe blast case ನಲ್ಲಿ ಈಗಾಗಲೇ ಬಳ್ಳಾರಿಯಲ್ಲಿ ಶಂಕಿತನೊಬ್ಬನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸ್ತಿರುವ ರಾಷ್ಟ್ರೀಯ ತನಿಖಾ ದಳ ಇದೀಗ ತೀರ್ಥಹಳ್ಳಿ ಮೂಲದ ಮಾಜ್ ಮುನೀರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದೆ.
2022 ಸೆಪ್ಟೆಂಬರ್ನಿಂದ ಮಾಜ್ ಮುನೀರ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಕೇಸ್ ಹಾಗೂ ಮಂಗಳೂರು ಗೋಡೆ ಬರಹ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮಾಜ್ ಮುನೀರ್ನ ಎನ್ಐಎ ಮತ್ತೆ ಅನುಮಾನದ ಮೇರೆಗೆ ತನ್ನ ವಶಕ್ಕೆ ಬಾಡಿ ವಾರಂಟ್ ಮೇಲೆ ಪಡೆದಿದೆ.
ಏಳುದಿನಗಳ ಕಾಲ ವಿಚಾರಣೆಗಾಗಿ ಬಾಡಿ ವಾರಂಟ್ ಮೇಲೆ ಪಡೆದಿರುವ ಎನ್ಐಎ ಅಧಿಕಾರಿಗಳು ಈ ಸಂಬಂಧ ತನಿಖೆ ತೀವ್ರಗೊಳಿಸಿದ್ದಾರೆ. ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಎನ್ಐಎಗೆ ದೊಡ್ಡ ಲೀಡ್ ಸಿಕ್ಕಿದೆ ಎನ್ನಲಾಗಿದೆ. ಕೆರಳ ಮೂಲದ ಐಸಿಸಿ ಮಾಡ್ಯುಲ್ನ ಸಪೋರ್ಟ್ ಪಡೆದು ಶಿವಮೊಗ್ಗ ಐಸಿಸ್ ಮಾಡ್ಯುಲ್ನ ಆರೋಪಿಗಳು ದಕ್ಷಿಣ ಭಾರತದಲ್ಲಿ ಶಂಕಿತ ಚಟುವಟಿಕೆಗಳನ್ನು ನಡೆಸ್ತಿದ್ದರು. ಶಿವಮೊಗ್ಗ ಟ್ರಯಲ್ ಬ್ಲಾಸ್ಟ್, ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣ ಹಾಗೂ ಬೆಂಗಳೂರು ರಾಮೇಶ್ವರಂ ಕೆಫೆ ಬ್ಲಾಸ್ಟ್ ಕೇಸ್ಗೂ ಇಂಟರ್ ಲಿಂಕ್ ಇದೆ ಎಂಬ ಅನುಮಾನ ಎನ್ಐಎದ್ದಾಗಿದೆ.
ಈಗಾಗಲೇ ಡಿಎನ್ಎ ಹಾಗೂ ಸ್ಫೋಟಕದ ಮಾದರಿಗಳನ್ನ ಪರೀಕ್ಷೆಗೆ ಒಳಪಡಿಸಿರುವ ಎನ್ಐಎ ಬಳ್ಳಾರಿಯಲ್ಲಿ ಪ್ರಕರಣದ ಆರೋಪಿಯು ಭೇಟಿಯಾಗಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದಿದೆ. ಅದೆ ನಿಟ್ಟಿನಲ್ಲಿ ರಾಮೇಶ್ವರಂ ಕೆಫೆ ಪ್ರಕರಣದಲ್ಲಿ ಎನ್ಐಎ ಎರಡನೇ ವ್ಯಕ್ತಿಯಾಗಿ ಮಾಜ್ ಮುನೀರ್ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದೆ ಎಂದು ಬೆಂಗಳೂರು ನ್ಯೂಸ್ ಮೂಲಗಳು ತಿಳಿಸಿವೆ.