ಮುಂಬೈ ಸ್ಫೋಟ ಪ್ರಕರಣದಲ್ಲಿ ಗಾಯಗೊಂಡ ವ್ಯಕ್ತಿಗಾಗಿ ಶಿವಮೊಗ್ಗದಲ್ಲಿ ಹುಡುಕಾಟ! ಕಾರಣವೇನು ಗೊತ್ತಾ?

Search in Shimoga for the person injured in the Mumbai blast case Do you know the reason?

ಮುಂಬೈ ಸ್ಫೋಟ ಪ್ರಕರಣದಲ್ಲಿ  ಗಾಯಗೊಂಡ ವ್ಯಕ್ತಿಗಾಗಿ ಶಿವಮೊಗ್ಗದಲ್ಲಿ ಹುಡುಕಾಟ! ಕಾರಣವೇನು ಗೊತ್ತಾ?
Mumbai blast case, shivamogga

Shivamogga Feb 15, 2024 |   ಮುಂಬೈನಲ್ಲಿ ನಡೆದ ದೊಂಬಿ-ಬಾಂಬ್ ಸ್ಪೋಟದಲ್ಲಿ   ಗಾಯಗೊಂಡ ವ್ಯಕ್ತಿಯನ್ನು ಶಿವಮೊಗ್ಗದಲ್ಲಿ ಹುಡುಕಾಡಲಾಗುತ್ತಿದೆ. ಇದಕ್ಕೆ ಕಾರಣವೂ ಇದೆ. ಮುಂಬೈ ಸ್ಫೋಟ  ಪ್ರಕರಣದಲ್ಲಿ ಗಾಯಗೊಂಡಿರುವ ವ್ಯಕ್ತಿಗೆ ಪರಿಹಾರ ನೀಡುವಂತೆ ಕೋರ್ಟ್ ಆದೇಶ ನೀಡಿದೆ. ಆದರೆ ಪರಿಹಾರ ಪಡೆದುಕೊಳ್ಳಬೇಕಾದ ವ್ಯಕ್ತಿಯು ಆತ ನೀಡಿದ್ದ ವಿಳಾಸದಲ್ಲಿ ಪತ್ತೆಯಾಗಿಲ್ಲ. ಹೀಗಾಗಿ ಈ ಕುರಿತಾಗಿ ಪ್ರಕಟಣೆಯನ್ನು ವಾರ್ತಾ ಇಲಾಖೆ ಮೂಲಕ ನೀಡಲಾಗಿದೆ. 

ಪ್ರಕಟಣೆಯಲ್ಲಿ ಏನಿದೆ : ಪರಿಹಾರಕ್ಕೆ ಅರ್ಹ ವ್ಯಕ್ತಿ ವಿಳಾಸದಲ್ಲಿ ಲಭ್ಯವಿಲ್ಲ: ವಾರಸುದಾರರು ಪಡೆಯಲು ಸೂಚನೆ

ಮುಂಬೈನಲ್ಲಿ ನಡೆದ ದೊಂಬಿ-ಬಾಂಬ್ ಸ್ಪೋಟದಲ್ಲಿ ಗಾಯಗೊಂಡ/ಮೃತಪಟ್ಟ ವ್ಯಕ್ತಿಗಳ ವಾರಸುದಾರರಿಗೆ ಪರಿಹಾರ ಪಾವತಿಸಲು ಸರ್ವೋಚ್ಚ ನ್ಯಾಯಾಲಯದ ಆದೇಶವಾಗಿದ್ದು, ಚಿಕ್ಕಲ್ ಗ್ರಾಮದ ಮುಕ್ತಾರ್ ಬಾನೋ ಬಾದ್ ಷಾ ಶೇಕ್ ಎಂಬುವರು ಪರಿಹಾರಕ್ಕೆ ಅರ್ಹರಾಗಿರುತ್ತಾರೆ. ಆದರೆ ಸದರಿ ವಿಳಾಸದಲ್ಲಿ ಅವರು ಪತ್ತೆ ಆಗಿರುವುದಿಲ್ಲ.

ಮಾನ್ಯ ಸರ್ವೋಚ್ಚ ನ್ಯಾಯಾಲಯವರು ಸಿವಿಲ್ ರಿಟ್ ಪಿಟಿಶನ್ ಸಂಖ್ಯೆ: 182/2001 ರಲ್ಲಿ 1992/93ನೇ ಸಾಲಿನಲ್ಲಿ ಮುಂಬೈನಲ್ಲಿ ನಡೆದ ದೊಂಬಿ ಬಾಂಬ್ ಬ್ಲಾಸ್ಟ್‍ನಲ್ಲಿ ಗಾಯಗೊಂಡ/ಮೃತಪಟ್ಟ ವ್ಯಕ್ತಿಗಳ ವಾರಸುದಾರರಗಿಎ ಪರಿಹಾವನ್ನು ಪಾವತಿಸುವಂತೆ ಆದೇಶ ಮಾಡಿರುತ್ತದೆ.

 ಈ ಸಂಬಂಧ ಸಕ್ಷಮ ಪ್ರಾಧಿಕಾರವು ಸದರಿ ಘಟನೆಯಲ್ಲಿ ಗಾಯಗೊಂಡ/ಮೃತಪಟ್ಟ ವ್ಯಕ್ತಿಗಳನ್ನು ಗುರುತಿಸಿರುತ್ತಾರೆ. ಆ ಪೈಕಿ ಮುಕ್ತಾರ್ ಬಾನೋ ಬಾದ್ ಷಾ ಶೇಕ್, ಚಿಕ್ಕಲ್ ಗ್ರಾಮದ ವಾಸಿ ಇವರು ಕೂಡ ಪರಿಹಾರಕ್ಕೆ ಅರ್ಹರೆಂದು ಗುರುತಿಸಲಾಗಿದ್ದು ಈಗ ಅವರು ಈ ವಿಳಾಸದಲ್ಲಿ ಪತ್ತೆ ಆಗಿರುವುದಿಲ್ಲ. ಆದ್ದರಿಂದ ಅವರ ವಾರಸುದಾರರು ಈ ಕೂಡಲೇ ಪರಿಹಾರ ಪಡೆಯುವ ಸಲುವಾಗಿ ಮಹಾರಾಷ್ಟ್ರದ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸುವುದು. 

ಹೆಚ್ಚಿನ ಮಾಹಿತಿಗಾಗಿ ಹಾಗೂ ಸಹಾಯಕ್ಕಾಗಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಅಥವಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಶಿವಮೊಗ್ಗ ಇವರನ್ನು ಸಂಪರ್ಕಿಸಬಹುದೆಂದು ಹಿರಿಯ ವ್ಯವಹಾರ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎನ್.ಚಂದನ್ ತಿಳಿಸಿದ್ದಾರೆ.