ಬೆಂಗಳೂರು | ಎರಡು ದಿನ ಶಿವಮೊಗ್ಗಕ್ಕೆ ಸಂಚರಿಸಲಿವೆ 130 ಬಿಎಂಟಿಸಿ ಬಸ್‌ ! ಏನಿದು ವಿಶೇಷ

Bangalore | 130 BMTC buses will travel to Shimoga for two days! What's Special, Bangalore Metropolitan Transport Corporation, BMTC, Tumkur, Shirur, Hiriyur, Davangere, Shimoga, Majestic Kempegowda Bus Stand, Jalahalli Cross, Tin Factory, Mysore Road KSRTC Bus Stand

ಬೆಂಗಳೂರು | ಎರಡು ದಿನ ಶಿವಮೊಗ್ಗಕ್ಕೆ ಸಂಚರಿಸಲಿವೆ  130 ಬಿಎಂಟಿಸಿ ಬಸ್‌ ! ಏನಿದು ವಿಶೇಷ
Bangalore Metropolitan Transport Corporation, BMTC, Tumkur, Shirur, Hiriyur, Davangere, Shimoga, Majestic Kempegowda Bus Stand, Jalahalli Cross, Tin Factory, Mysore Road KSRTC Bus Stand

SHIVAMOGGA | MALENADUTODAY NEWS | Apr 26, 2024     

ಲೋಕಸಭಾ ಚುನಾವಣೆ 2024 ರ ಹಿನ್ನೆಲೆಯಲ್ಲಿ ದಕ್ಷಿಣ ಕರ್ನಾಟಕದ 14 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬಿಎಂಟಿಸಿಯಿಂದ ಹೊರಜಿಲ್ಲೆಗಳಿಗೂ ಹೆಚ್ಚುವರಿ ಬಸ್‌ ಬಿಡಲಾಗುತ್ತಿದೆ. ವಿಶೇಷ ಅಂದರೆ ಈ ಪೈಕಿ ಶಿವಮೊಗ್ಗಕ್ಕೂ ಎರಡು ದಿನ ಹೆಚ್ಚುವರಿ ಬಿಎಂಟಿಸಿ ಬಸ್‌ಗಳು ಸಂಚಾರ ನಡೆಸಲಿವೆ. ಅದರ ವಿವರ ಹೀಗಿದೆ. 

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ಗಳನ್ನು ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ತುಮಕೂರು, ಚಿತ್ರದುರ್ಗ, ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಗಳಿಗೆ ಏ.26 ಬೆಳಗ್ಗೆಯಿಂದ ರಾತ್ರಿವರೆಗೆ 465 ಹೆಚ್ಚುವರಿ ಬಿಎಂಟಿಸಿ ಬಸ್‌ಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ. ಈ ಪೈಕಿ ತುಮಕೂರು, ಶಿರೂರು, ಹಿರಿಯೂರು, ದಾವಣಗೆರೆ, ಶಿವಮೊಗ್ಗ  ಮಾರ್ಗವಾಗಿ 130 ಹೆಚ್ಚುವರಿ ಬಸ್‌ಗಳನ್ನ ಬಿಡಲಾಗಿದೆ. ಈ ಬಸ್‌ಗಳು  ಮೆಜೆಸ್ಟಿಕ್ ಕೆಂಪೇಗೌಡ ಬಸ್ ನಿಲ್ದಾಣ

ಜಾಲಹಳ್ಳಿ ಕ್ರಾಸ್,  ಟಿನ್ ಪ್ಯಾಕ್ಟರಿ, ಮೈಸೂರು ರೋಡ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ (ಸ್ಯಾಟಲೈಟ್)ನಿಂದ ಹೊರಡಲಿದೆ.