ಸಹೋದ್ಯೋಗಿ ಸಹವಾಸ , ಗಂಡ, ಗೆಳೆಯನ ಬ್ಲ್ಯಾಕ್​ಮೇಲ್​ , ಜೈಲಿಗಟ್ಟಿದ ಯುವತಿ, ರಿಲೀಸ್ ಆದ್ಮೇಲೆ ಗೆದ್ದ ಯುವಕ!

Bengaluru: A youth has lodged a complaint against three persons, including a woman, at Rajarajeshwari Nagar police station limits in Bengaluru bangalore news today

ಸಹೋದ್ಯೋಗಿ ಸಹವಾಸ , ಗಂಡ, ಗೆಳೆಯನ ಬ್ಲ್ಯಾಕ್​ಮೇಲ್​ , ಜೈಲಿಗಟ್ಟಿದ ಯುವತಿ, ರಿಲೀಸ್ ಆದ್ಮೇಲೆ ಗೆದ್ದ ಯುವಕ!
complaint against three persons, including a woman, at Rajarajeshwari Nagar police station limits in Bengaluru

bangalore news today |  Jan 28, 2024  | ತನ್ನನ್ನು  ಸುಳ್ಳು ಆರೋಪ ಮಾಡಿ ಜೈಲಿಗೆ ಕಳುಹಿಸಿದ್ದ ಮಾಜಿ ಪ್ರೇಯಸಿ ವಿರುದ್ಧ ಯುವಕನೊಬ್ಬ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆಯು ಇವತ್ತಿನ bangalore news today ವರದಿ. 

ಬೆಂಗಳೂರಿನ. ಆರ್.ಆರ್. ನಗರ ನಿವಾಸಿ ಶರವನ್​ (ಹೆಸರು ಬದಲಾಯಿಸಲಾಗಿದೆ) ಎಂಬಾತ ನೀಡಿದ ದೂರಿನ ಮೇರೆಗೆ ಕೋಣನಕುಂಟೆ ನಿವಾಸಿ ಸಿಂದಮ್ಮ (ಹೆಸರು ಬದಲಾಯಿಸಲಾಗಿದೆ) ಹಾಗೂ ಆಕೆಯ ಪತಿ ಮತ್ತು, ಸ್ನೇಹಿತನ ವಿರುದ್ಧ ರಾಜರಾಜೇಶ್ವರಿನಗರ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. 

ರಾಜರಾಜೇಶ್ವರಿ ನಗರ ಪೊಲೀಸ್ ಸ್ಟೇಷನ್ 

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಶೆರವನ್​ಗೆ  ಒಂದೂವರೆ ವರ್ಷದ ಹಿಂದೆ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುವ ಟೆಕ್ಕಿ  ಪರಿಚಯವಾಗಿದ್ದು ಪರಸ್ಪರ ಸಲುಗೆಯಿಂದ ಇದ್ದರು. ಕೆಲ ದಿನಗಳ ಹಿಂದೆ ಯುವತಿ 20 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಶರವನ್​ ಅಂತರ ಕಾಯ್ದುಕೊಂಡಿದ್ದಾನೆ. ಆಗ ಯುವತಿ ನಮ್ಮಿಬ್ಬರ ವಿಚಾರವನ್ನು ನಿಮ್ಮ ಮನೆಯವರಿಗೆ ಹೇಳುತ್ತೇನೆ. ಸುಳ್ಳು ಪ್ರಕರಣ ದಾಖಲಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಳಂತೆ. 

ಅಲ್ಲದೆ   ಆಕೆಯ ಸ್ನೇಹಿತ  ಮತ್ತು ಪತಿ ಕೂಡ ಈತನನ್ನ ಬ್ಲಾಕ್​ಮೇಲ್​ ಮಾಡಿದ್ದರಂತೆ. ಈ ಹಿನ್ನೆಲೆಯಲ್ಲಿ ಸುಮಾರು 2 ಲಕ್ಷ ರೂಪಾಯಿ ವಸೂಲಿ ಮಾಡಿರುವ ಆರೋಪಿಗಳು  18 ಲಕ್ಷ ರೂ. ಕೊಡಬೇಕು ಎಂದು ಮನೆಗೆ ನುಗ್ಗಿ ಧಮ್ಮಿ ಹಾಕಿದ್ದರು ಎಂದು ದೂರಲಾಗಿದೆ. 

ಇಷ್ಟೆ ಅಲ್ಲದೆ  ಕೋಣನಕುಂಟೆ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಿ, ಜೈಲಿಗೆ ಕಳುಹಿಸಿದ್ದರು. ಜೈಲಿನಿಂದ ಬಿಡುಗಡೆಯಾಗಿ ಬಂದ ಮೇಲೂ ತೊಂದರೆ ಕೊಡಲು ಆರಂಭಿಸಿದ್ದರಿಂದ ಬೇಸತ್ತ ಯುವಕ ಪೊಲೀಸರ ಮೊರೆಹೋಗಿದ್ದಾನೆ.