ವಧು ಇದ್ದರೇ ತಿಳಿಸಿಕೊಡಿ, ಎಂದು ಶಿವಮೊಗ್ಗ ಎಸ್​ಪಿಗೆ ಪತ್ರ ಬರೆದ ವರ ಮಹಾಶಯ

ವಧು ಇದ್ದರೇ ತಿಳಿಸಿಕೊಡಿ, ಎಂದು ಶಿವಮೊಗ್ಗ ಎಸ್​ಪಿಗೆ ಪತ್ರ ಬರೆದ ವರ ಮಹಾಶಯ
Shivamogga sp mithun kumar
ವಧು ಇದ್ದರೇ ತಿಳಿಸಿಕೊಡಿ, ಎಂದು ಶಿವಮೊಗ್ಗ ಎಸ್​ಪಿಗೆ ಪತ್ರ ಬರೆದ ವರ ಮಹಾಶಯ

ವ್ಯಕ್ತಿಯೊಬ್ಬ ಶಿವಮೊಗ್ಗ ಎಸ್​ಪಿಯವರಿಗೆ ವಧು ಇದ್ದಲ್ಲಿ ತಿಳಿಸಿ ಎಂದು ಕೊಟ್ಟ ಮನವಿ ಪತ್ರವೊಂದು ಇದೀಗ ಸಖತ್ ವೈರಲ್​ ಆಗಿದೆ.  ಶಿವಮೊಗ್ಗ ಎಸ್​ಪಿಯವರೆಗೆ ಅಡ್ರೆಸ್​ ಮಾಡಿರುವ ಪತ್ರದಲ್ಲಿ ವಿಚಾರ ಹೀಗಿದೆ

ಮಾನ್ಯರೇ,

ವಿಷಯ: ವಿವಾಹ ಮಾಡಿಕೊಳ್ಳುವ ಸಲುವಾಗಿ ವಧು ಇದ್ದಲ್ಲಿ ತಿಳಿಸುವ ಬಗ್ಗೆ.

ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ನಾನು ಭದ್ರಾವತಿ ನಗರದಲ್ಲಿ ಜನಿಸಿರುತ್ತೇನೆ. ನಾನು ಯಾದವ ಗೊಲ್ಲ ಜಾತಿಗೆ ಸೇರಿದವನಾಗಿರುತ್ತೇನೆ. ನನ್ನ ತಂದೆ ಕಡೆಯವರು. ಆಂಧ್ರಪ್ರದೇಶ ರಾಜ್ಯ ಶ್ರೀ ಸತ್ಯಸಾಯಿ ಜಿಲ್ಲೆಯವರಾಗಿರುತ್ತಾರೆ. ನಮ್ಮ ತಂದೆಯವರು ರಿಟೈಡ್ ಡೈಪೋಟಿ ಡೈರಕ್ಟರ್ (ತೋಟಗಾರಿಕೆ ಇಲಾಖೆ)ಯಲ್ಲಿ ನಿವೃತ್ತರಾಗಿರುತ್ತಾರೆ. ಹಾಲಿ ನಮ್ಮ ತಂದೆ ಮರಣ ಹೊಂದಿರುತ್ತಾರೆ. ನನ್ನ ತಾಯಿಯವರು ಇರುತ್ತಾರೆ. ಹಾಗೂ ನನ್ನ ಅಣ್ಣ ಇದ್ದು ಅವರು ಮದುವೆಯಾಗಿರುತ್ತಾರೆ. ಈ ಹಿಂದೆ ನಾನು ಸಾಫ್ಟ್‌ವೇರ್ ಕಂಪನಿಯಲ್ಲಿ ಅದ್ಯಾಪಕನಾಗಿ ಮತ್ತು ಎಂ.ಸಿ.ಐ ಚಿಟ್ಸ್ ಕಂಪನಿ ಬೆಂಗಳೂರು ಇಲ್ಲಿ ಕೆಲಸ ಮಾಡಿರುತ್ತೇನೆ.

ಭದ್ರಾವತಿಯಲ್ಲಿರುವ ನಮ್ಮ ಸ್ವಂತ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿರುತ್ತೇನೆ. ವಧು ಅನ್ವೇಷಣೆಯಲ್ಲಿ ಯಾವುದು ಸರಿಹೋಗದ ಕಾರಣ ನಮ್ಮ ಮೇಲ್ಕಂಡ ಜಾತಿಯವರಾಗಿದ್ದು ತಮ್ಮ ಅಧೀನದಲ್ಲಿ ಯಾರಾದರೂ ಒಂದು ವಧು ಕ೦ಡು ಬಂದಲ್ಲಿ ನನಗೆ ತಿಳಿಸುವುದರ ಮೂಲಕ ನಾನು ವಿವಾಹ ಮಾಡಿಕೊಳ್ಳಲು ಸಹಾಯ ಮಾಡಬೇಕಾಗಿ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ನನಗೆ ಪರಿಚಯ ವ್ಯಕ್ತಿಗಳು, ಶ್ರೀ ವಿಕದರೇಶ್ ಪರಸಭೆ ಸದಸ್ಯರು ಮತ್ತು ಚಂದ್ರ ನಾಯಕ್ ಗ್ರಾಮ ಪಂಚಾಯತ್ ಸದಸ್ಯರು

ಈ ಅರ್ಜಿಯನ್ನು ಪೋಲಿಸರಿಂದ ಪರಿಶೀಲಿಸಿ ಹಾಗೂ ನನ್ನ ಆಧಾರ್ ಕಾರ್ಡ್, ಬ್ಯಾಂಕ್‌ ಪಾಸ್‌ ಬುಕ್ ಜೆರಾಕ್ಸ್‌ ಪ್ರತಿಗಳನ್ನು ಲಗತ್ತಿಸಿರುತ್ತೇನೆ.

ಇಂತಿ ನಿಮ್ಮ ವಿಶ್ವಾಸಿ 

ಈ ರೀತಿಯಾಗಿ ಬರೆದ ಪತ್ರವನ್ನು ಎಸ್​ಪಿ ಕಚೇರಿಯಲ್ಲಿ ಸ್ವೀಕೃತ ಮಾಡಲಾಗಿದ್ದು, ಅದಕ್ಕೆ ಸೀಲು ಸಿಗ್ನೇಚರ್ ಹಾಕಿ ಕೊಡಲಾಗಿದೆ. ಎಸ್​ಪಿಯವರಿಗೆ ಸಾಮಾನ್ಯವಾಗಿ ನಾನಾ ಮನವಿಗಳು ಬರುತ್ತಿರುತ್ತವೇ, ಆದರೆ ಇಂತಹದ್ದೊಂದು ಮನವಿ ಬಂದಿರೋದು ಇತ್ತೀಚೆಗೆ ಅಪರೂಪ. ಈ ಬಗ್ಗೆ ಎಸ್​ಪಿ ಮಿಥುನ್​ ಕುಮಾರ್, ಯಾವ ರೀತಿ ಕ್ರಮ ಕೈಗೊಂಡಿದ್ದಾರೆ ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ.