ಶೋಷಿತರ ಜಾಗೃತಿಗಾಗಿ ಇಂದು ರಾಜ್ಯ ಸಮಾವೇಶ

State conference for awareness of the downtrodden today

ಶೋಷಿತರ ಜಾಗೃತಿಗಾಗಿ ಇಂದು ರಾಜ್ಯ ಸಮಾವೇಶ
State conference for awareness of the downtrodden today

bangalore news today |  Jan 28, 2024  |ಶೋಷಿತರ ಜಾಗೃತಿಗಾಗಿ ರಾಜ್ಯ ಸಮಾವೇಶ ಹತ್ತು ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ. ಈ ವೇಳೆ  ಕಾಂತ್ ರಾಜ್ ವರದಿ ಜಾರಿಗೆ ಆಗ್ರಹಿಸಲಾಗುವುದು ಎಂದು ಎಂ.ಎಲ್.ಸಿ ಪ್ರಸನ್ನ ಕುಮಾರ್ ಹೇಳಿದ್ದಾರೆ. ಶಿವಮೊಗ್ಗದ ಪ್ರೆಸ್ ಟ್ರಸ,ಟ್ ಭವನದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಮತ್ತು ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಮುಖಂಡರುಗಳು ಶೋಷಿತರ ಜಾಗೃತಿಗಾಗಿ ರಾಜ್ಯ ಸಮಾವೇಶವನ್ನು ದಿನಾಂಕ 28-01-24 ಪಂದು ಚಿತ್ರದುರ್ಗದಲ್ಲಿ ಹಮ್ಮಿಕೊಂಡಿರುವುದಾಗಿ ತಿಳಿಸಿದ್ರು. 

 

ಹಲವು ವೈವಿದ್ಯತೆಗಳ ದೇಶವಾಗಿದ್ದರೂ, ಪುರೋಹಿತ ಶಾಹಿಯ ಕುತಂತ್ರದಿಂದಾಗಿ ದೇಶದ ಸಂಪತ್ತು ಸಮಾನವಾಗಿ ಹಂಚಿಕೆಯಾಗದೆ. ಶೇಖಡಾ 97 ರಷ್ಟು ತಳ ಸಮುದಾಯಗಳು ಸಾವಿರಾರು ವರ್ಷಗಳಿಂದ ಸಂಘರ್ಷ ಅನುಭವಿಸಿಕೊಂಡು ಬರುತ್ತಿವೆ. ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಸಂವಿಧಾನ ಆಶಯದಂತೆ ಎಲ್ಲಾ ಜಾತಿ ಧರ್ಮಗಳಿಗೂ ಸರಿಯಾದ ನ್ಯಾಯ ಸಿಗಬೇಕು. 

ಪ್ರಸ್ಥುತ ಕಾಂತ್ ರಾಜ್ ವರದಿ ಜಾರಿಗೆ ಮೇಲ್ಜಾತಿಯ ಸಮುಧಾಯದ ಮುಖಡರು ಕಾರಣವಿಲ್ಲದೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಕಾರಣಕ್ಕಾಗಿ ವರದಿ ಜಾರಿಯಾಗುವುದು ಬೇಡ ಎಂದು ಒಬ್ಬರಾದ್ರೂ ನಿರ್ಧಿಷ್ಠ ಕಾರಣವನ್ನು ಈವರೆಗೂ ನೀಡಿಲ್ಲ. 

ಹೀಗಾಗಿ ತಳ ಸಮುದಾಗಳೆಲ್ಲಾ ಸೇರಿಕೊಂಡು ಒಕ್ಕೂಟ ರಚನೆ ಮಾಡಿಕೊಂಡು ಚಿತ್ರದುರ್ಗದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದೇವೆ ಎಂದು ಪ್ರಸನ್ನ ಕುಮಾರ್ ಹೇಳಿದ್ದಾರೆ. ಈ ಸಮಾವೇಶಕ್ಕೆ ರಾಜ್ಯದ ಮೂಲೆಮೂಲೆಗಳಿಂದ ಸುಮಾರು ಹತ್ತು ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮಕ್ಕೆ ಬರುವ ಜನರಿಗಾಗಿ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ತಳ ಸಮುದಾಯದ ಶಾಸಕರುಗಳು ಸಚಿವರು ಹೆಚ್ಚಿನ ಸಂಖ್ಯೆಯಲ್ಲಿ ಸೇರಲಿದ್ದಾರೆ ಎಂದು ಆರ್ ಪ್ರಸನ್ನ ಕುಮಾರ್ ಹೇಳಿದ್ದಾರೆ. ಹಕ್ಕೊತ್ತಾಯಗಳು 

ನಾಳೆ ನಡೆಯಲಿರುವ ಸಮಾವೇಶದಲ್ಲಿ ಕಾಂತ್ ರಾಜ್ ವರದಿಯನ್ನು ಸರ್ಕಾರ ಕೂಡಲೇ ಸ್ವೀಕರಿಸಿ ಸಾರ್ವಜನಿಕ ಚರ್ಚೆಗೆ ಬಿಟ್ಟು ವರದಿಯನ್ನು ಅಂಗೀಪಿಸಿ ಜಾರಿಗೊಳಿಸಬೇಕು 

ಕೇಂದ್ರ ಸರ್ಕಾರವೂ ಜಾತಿವಾರು ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸಮೀಕ್ಷೆಗಳನ್ನು ಮಾಡಿಸಬೇಕು

ಇ ಡಬ್ಲು ಎಸ್ ಮೀಸಲಾತಿಯನ್ನು ರದ್ದು ಪಡಿಸಬೇಕು

ಮಹಿಳಾ ಮೀಸಲಾತಿ ಕಾಯ್ದೆಯನ್ನು ಕೂಡಲೇ ಜಾರಿ ಮಾಡಬೇಕು. ರಾಜಕೀಯ ಕ್ಷದಲ್ಲೂ ಎಸ್ಸಿ ಎಸ್ಟಿ ಮತ್ತು ಅಲ್ಪಸಂಖ್ಯಾತ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಬೇಕು.

ಎಸ್ಸ ಎಸ್ಟಿ ಒಬಿಸಿ ಮತ್ತು ಅಲ್ಪಸಂಖ್ಯಾತರ ಜನಸಂಖ್ಯೆಗೆ ಅನುಗುಣವಾಗಿ ಶೇಕಡಾವಾರು ಪ್ರಮಾಣದಲ್ಲಿ ಮೀಸಲಾತಿ ಹೆಚ್ಚಿನಬೇಕು. ಖಾಸಗಿ ಕ್ಷೇತ್ರಕ್ಕೂ ಮೀಸಲಾತಿ ವಿಸ್ತರಿಸಬೇಕು

ಮುಸ್ಲಿಂ ಸಮುದಾಯದ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಸಬಲೀಕರಣಕ್ಕಾಗಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂಂರ್ತಿ ರಾಜೇಂದ್ರ ಸಾಚಾರ್ ರವರು ಸಲ್ಲಿಸಿರುವ ವರದಿಯನ್ನು ಕೂಡಲೇ ಅನುಷ್ಠಾನಕ್ಕೆ ತರಬೇಕು ಎಂದು ಹಕ್ಕೊತ್ತಾಯ ಮಾಡಲೂ ಒಕ್ಕೂಟ ನಿರ್ಧರಿಸಿದೆ