Rameshwaram Cafe Blast Accused | ತೀರ್ಥಹಳ್ಳಿಯಲ್ಲಿ NIA ಮಿಂಚಿನ ಸಂಚಾರ | ಬಿಜೆಪಿ ಮುಖಂಡ ವಶಕ್ಕೆ? | ಕಾರಣವೇನು? ಇನ್ನಿಬ್ಬರು ಲಾಕ್?
Rameshwaram Cafe Blast Accused | BJP leader detained by NIA in Thirthahalli | What is the reason? Two more locked?
Shivamogga Apr 5, 2024 ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕುನಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ರಾಮೇಶ್ವರಂ ಕಫೆ ಸ್ಫೋಟ rameshwaram cafe blast accused ಪ್ರಕರಣದ ಸಂಬಂಧ ರಾಷ್ಟ್ರೀಯ ತನಿಖಾ ದಳ ಬಿಜೆಪಿ ಮುಖಂಡರೊಬ್ಬರನ್ನ ವಶಕ್ಕೆ ಪಡೆದುಕೊಂಡು ಬೆಂಗಳೂರಿಗೆ ಕರೆದೊಯ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬಿಜೆಪಿ ನಗರ ವಿಭಾಗದಲ್ಲಿ ಮುಖಂಡರಾಗಿರುವ ಓರ್ವರನ್ನ ಎನ್‌ಐಎ ವಶಕ್ಕೆ ಪಡೆದಿರುವುದು ಪ್ರಕರಣದಲ್ಲಿ ದೊಡ್ಡ ಬ್ರೇಕ್ ಆಗಿದೆ ಎಂದು ಬೆಂಗಳೂರು ಮೂಲಗಳು ವರದಿ ಮಾಡಿವೆ. ರಾಷ್ಟ್ರೀಯ ಹಾಗು ರಾಜ್ಯ ಮಾಧ್ಯಮಗಳ ವರದಿಯ ಪ್ರಕಾರ ನೋಡುವುದಾದರೆ, ರಾಮೇಶ್ವರಂ ಕಫೆ ಸ್ಫೋಟ ಪ್ರಕರಣದಲ್ಲಿ ಯುವಕನೊಬ್ಬನನ್ನ ಎನ್‌ಐಎ ವಶಕ್ಕೆ ಪಡೆದಿತ್ತು. ಆ ಯುವಕ ಹಾಗೂ ಆರೋಪಿ ಜೊತೆಗೆ ಹತ್ತಿರದ ಸಂಪರ್ಕ ಹೊಂದಿದ್ದರು ಎಂಬ ಕಾರಣಕ್ಕೆ ಬಿಜೆಪಿ ಮುಖಂಡನೋರ್ವನನ್ನ ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ ಇಷ್ಟೆ ಅಲ್ಲದೆ ಇನ್ನೋರ್ವ ವ್ಯಕ್ತಿಯನ್ನು ಸಹ ವಶಕ್ಕೆ ಪಡೆದಿರುವ ಬಗ್ಗೆ ಮಾಹಿತಿ ಇದೆಯಾದರೂ ಮೂಲಗಳು ಈ ಸಂಬಂಧ ಖಚಿತ ವರ್ತಮಾನವಿಲ್ಲ ಎಂದು ವರದಿ ಮಾಡಿವೆ..ಇನ್ನೂ ಇಡೀ ವಿಚಾರದ ಬಗ್ಗೆ ಇದುವರೆಗೂ ಎನ್ಐಎ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.
rameshwaram cafe blast case
ರಾಮೇಶ್ವರಂ ಕಫೆ ಸ್ಫೋಟ ಪ್ರಕರಣದಲ್ಲಿ ಎನ್‌ಐಎ ತಂಡಕ್ಕೆ ಇತ್ತೀಚೆಗೆ ಬಿಗ್ ಲೀಡ್ ಸಿಕ್ಕಿತ್ತು,.ಆರೋಪಿಗಳು ಶಿವಮೊಗ್ಗ ಐಎಸ್‌ಐಎಸ್ ಮಾಡ್ಯುಲ್‌ನ ಸದಸ್ಯರಾಗಿದ್ದು ತೀರ್ಥಹಳ್ಳಿಯವರು ಎಂದು ಗೊತ್ತಾದ ಬೆನ್ನಲ್ಲೆ ಎನ್‌ಐಎ ತೀರ್ಥಹಳ್ಳಿಯಲ್ಲಿ ರೇಡ್ ನಡೆಸಿತ್ತು. ಈ ರೇಡ್ ಬಳಿಕ ಪ್ರಕರಣದ ರೂವಾರಿಗೆ ಸಾಮಗ್ರಿಗಳನ್ನ ಸಪ್ಲೆ ಮಾಡಿದ ಆರೋಪ ಸಂಬಂಧ ಯುವಕನೊಬ್ಬನನ್ನ ಬಂಧಿಸಿತ್ತು. ಸದ್ಯ ಇದೇ ಪ್ರಕರಣದಲ್ಲಿ ಎನ್‌ಐಎ ಹಲವರನ್ನ ವಿಚಾರಣೆ ನಡೆಸ್ತಿದ್ದು, ಕೆಲವರನ್ನ ವಶಕ್ಕೆ ಪಡೆದಿದೆ ಸ್ಟೇಟ್ ಮೀಡಿಯಾಗಳು ವರದಿ ಮಾಡಿವೆ..ಇದೆ ವೇಳೆ ಅವರನ್ನ ವಿಚಾರಣೆ ನಡೆಸಲಾಗುತ್ತಿದೆ ಎಂದು ಸಹ ಹೇಳಲಾಗಿದೆ..
ಮುಜಾಮೀಲ್ ಷರೀಫ್
ಇನ್ನೂ ಪ್ರಕರಣ ಸಂಬಂಧ ಬಂಧಿತನಾಗಿರುವ ಮುಜಾಮಿಲ್ ಷರೀಫ್‌ನನ್ನ ಎನ್‌ಐಎ ವಿಶೇಷ ನ್ಯಾಯಾಲಯ 30 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಮುಜಾಮೀಲ್ ಷರೀಫ್ ನನ್ನ ಎನ್‌ಐಎ ಅಧಿಕಾರಿಗಳು ಮಾರ್ಚ್ 28 ರಂದು ಬಂಧಿಸಿದ್ದರು ಮತ್ತು ನಂತರ ಬೆಂಗಳೂರು ಸೆಷನ್ಸ್ ನ್ಯಾಯಾಲಯದ ಆವರಣದಲ್ಲಿರುವ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆ ಬಳಿಕ ಆತನನ್ನ ಕೋರ್ಟ್ 7 ದಿನಗಳ ಕಾಲ ಎನ್‌ಐಎ ಕಸ್ಟಡಿಗೆ ನೀಡಿತ್ತು. ಅದಾದ ಬಳಿಕ ವಿಡಿಯೋ ಕಾನ್ಸರೆನ್ಸ್ ಮೂಲಕ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಈ ವೇಳೆ ಕೋರ್ಟ್ ಷರೀಫ್‌ನನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಆಪಾದಿತ ಮಾಸ್ಟರ್ ಬಾಂಬರ್ ಮುಸಾವಿರ್ ಹುಸೇನ್ ಶಬೀಬ್ ಮತ್ತು ಮಾಸ್ಟರ್ ಮೈಂಡ್ ಅಬ್ದುಲ್ ಮತೀನ್ ತಾಹಾ ಅವರ ಸೂಚನೆಯ ಮೇರೆಗೆ ಷರೀಫ್ ಸ್ಫೋಟಕ್ಕೆ ಬಳಸಿದ ವಸ್ತುಗಳನ್ನು ಒದಗಿಸಿದ್ದ ಎಂಬುದು ವಿಚಾರಣೆಯ ವೇಳೆ ಬಹಿರಂಗವಾಗಿದೆ.ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಸ್ಥಳಗಳನ್ನು ಗುರಿಯಾಗಿಸಿಕೊಂಡು ಅಬ್ದುಲ್ ಮತೀನ್ ತಾಹಾ ರೂಪಿಸಿದ ಸಂಚುಗಳಲ್ಲಿ ಭಾಗಿಯಾಗಿರುವುದನ್ನು ವಿಚಾರಣೆ ವೇಳೆ ಷರೀಫ್ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಹಿಂದೆ ನಡೆದ ಶಿವಮೊಗ್ಗ ತುಂಗಾ ತೀದಲ್ಲಿ ನಡೆದ ಟ್ರಯಲ್ ಬ್ಲಾಸ್ಟ್ ಪ್ರಕರಣ, ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟದಂತಹ ಘಟನೆಗಳಲ್ಲೂ ನೆರವು ನೀಡಿರುವುದಾಗಿ ಷರೀಫ್ ತಪ್ಪೊಪ್ಪಿಕೊಂಡಿದ್ದಾನೆ.