SHIVAMOGGA | Dec 30, 2023 | ಶಿವಮೊಗ್ಗದಲ್ಲಿ ಕಾಡಾನೆಗಳು ಸಮರ ಸಾರಿದಂತಿವೆ. ಇಷ್ಟು ದಿನ ಸಾಗರ, ಹೊಸನಗರ, ತೀರ್ಥಹಳ್ಳಿಯಲ್ಲಿ ಕಾಣಿಸಿಕೊಳ್ತಿದ್ದ ಕಾಡಾನೆಗಳು ಇವತ್ತು ಶಿವಮೊಗ್ಗ-ತೀರ್ಥಹಳ್ಳಿಯ ಹೆದ್ದಾರಿಯಲ್ಲಿಯೇ ಕಾಣಿಸಿಕೊಂಡಿವೆ. ಪರಿಣಾಮ ಸುಮಾರು ಒಂದು ಗಂಟೆಗಳ ಕಾಲ ಈ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
READ :Arecanut Rate? ಇವತ್ತು ಅಡಿಕೆ ದರ ಎಷ್ಟಿದೆ? ಯಾವ್ಯಾವ ತಾಲ್ಲೂಕುನಲ್ಲಿ ಏನಿದೆ ಅಡಿಕೆ ರೇಟು! ವಿವರ ಇಲ್ಲಿದೆ
ಸಕ್ರೆಬೈಲ್ ಬಿಡಾರದ ಬಳಿ ಕಾಣಿಸಿದ ಕಾಡಾನೆ
ಶಿವಮೊಗ್ಗದ ಸಕ್ರೆಬೈಲ್ ಆನೆ ಬಿಡಾರದ ಸಮೀಪ ಸಿಗುವ ತೋಟವೊಂದರಲ್ಲಿ ಕಾಣಿಸಿಕೊಂಡ ಕಾಡಾನೆ ರೋಡಿಗೆ ಬಂದು ನಿಂತಿತ್ತು. ಹೀಗಾಗಿ ವಾಹನ ಸವಾರರು ನಿಂತಲ್ಲಿಯೇ ನಿಲ್ಲಬೇಕಾದ ಸನ್ನಿವೇಶ ಉಂಟಾಗಿತ್ತು. ಸುಮಾರು ಒಂದು ಗಂಟೆ ಕಾಲ ಟ್ರಾಫಿಕ್ ಜಾಮ್ ಆಗಿತ್ತು.
ಈ ಮಧ್ಯೆ ಸಕ್ರೆಬೈಲ್ ಆನೆಗಳ ಸಹಾಯದೊಂದಿಗೆ ಮಾವುತರು , ಕಾವಾಡಿಗಳು ಕಾಡಾನೆಯನ್ನು ಕಾಡಿಗೆ ಬೆರಸಿದರು, ರೋಡು ದಾಟಿದ ಕಾಡಾನೆ ಕಾಡಿಗೆ ತೆರಳಿದೆ. ಈ ಭಾಗದಲ್ಲಿ ಮತ್ತೆ ಕಾಡಾನೆಗಳು ರೋಡಿಗೆ ಎಂಟ್ರಿ ಕೊಡುವ ಸಾಧ್ಯತೆಗಳನ್ನ ಅಲ್ಲಗಳೆಯುವಂತಿಲ್ಲ.
——————
