ಎಚ್ಚರ ತಪ್ಪಿದರೇ ಮನೆ ಮಕ್ಕಳ ಸಾವು! ವಾರದಲ್ಲಿ ಶಿವಮೊಗ್ಗದಲ್ಲಿ ನಾಲ್ವರ ಡೆತ್!‌ ಪೋಷಕರಿಗೆ ಸವಾಲ್!?

In Shivamogga, four people died while swimming in a river in a week

ಎಚ್ಚರ ತಪ್ಪಿದರೇ  ಮನೆ ಮಕ್ಕಳ ಸಾವು! ವಾರದಲ್ಲಿ ಶಿವಮೊಗ್ಗದಲ್ಲಿ ನಾಲ್ವರ ಡೆತ್!‌  ಪೋಷಕರಿಗೆ ಸವಾಲ್!?
Shimoga, Tungabhadra, Tunga River, ಶಿವಮೊಗ್ಗ, ತುಂಗಾಭದ್ರಾ, ತುಂಗಾ ನದಿ ,

Shivamogga  Apr 5, 2024 ಬಿಸಿಲ ಝಳ ತಾಳಲಾರದೇ ಜನರು ನೀರಿನ ಸಾಂಗತ್ಯ ಬಯಸುತ್ತಿದ್ದಾರೆ. ಬೇಸಿಗೆಯಲ್ಲಿ ಬತ್ತಿರುವ ಹೊಳೆಗಳಲ್ಲಿ ಚೂರೂ ಪಾರು ನೀರು ಇರುವುದನ್ನ ನೋಡುವ ಯುವಕರು, ಹದಿಹರೆಯದವರು ಅದರ ಆಳ ಅರಿಯುವಲ್ಲಿ ವಿಫಲರಾಗುತ್ತಿದ್ದಾರೆ. ಹಾಗಾಗಿ ದುರಂತಗಳು ಸಂಭವಿಸುತ್ತಿದೆ. ಇತ್ತೀಚೆಗ ತೀರ್ಥಹಳ್ಳಿ ತುಂಗಾನದಿಯ ರಾಮಮಂಟಪದ ಬಳಿ ನಮಾಜು ಮುಗಿಸಿ ಈಜಲು ಹೋಗಿದ್ದ ಮೂವರು ದುರಂತ ಅಂತ್ಯ ಕಂಡಿದ್ದರು. 

ನೀರಿನಾಳ ತಿಳಿಯದೇ ದೊಡ್ಡ ಗುಂಡಿಗಿಳಿದ ಮೂವರು ಅಲ್ಲಿಂದ ಮೇಲಕ್ಕೆ ಬಂದಿದ್ದು ಶವವಾಗಿ. ಇದೀಗ ಅಂತಹುದ್ದೇ ಒಂದು ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರು ಸಮೀಪದ ಕೂಡಲಿಯಲ್ಲಿ ನಡೆದಿದೆ. ತುಂಗಾಭದ್ರಾ ನದಿಯ ಸಂಗಮದಲ್ಲಿ ಈಜಲು ತೆರಳಿದ್ದ ಯುವಕನೊಬ್ಬ ಸಾವನ್ನಪ್ಪಿದ್ದಾರೆ. ಆತ ಶಿವಮೊಗ್ಗ ನಗರದ ಅಣ್ಣಾನಗರದವನು. ಮುಬಾರಕ್‌ ಎಂದು ಹೆಸರು, ವಯಸ್ಸಿನ್ನೂ 18. 

ಹೊಳೆಹೊನ್ನೂರು ಸಮೀಪ ಕಾಲೇಜೊಂದರಲ್ಲಿ ಓದುತ್ತಿದ್ದ ಮುಬಾರಕ್‌ ಸ್ನೇಹಿತರೊಂದಿಗೆ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದಾನೆ. ಸದ್ಯ ಭದ್ರಾ ನದಿಗೆ ಕುಡಿಯುವ ನೀರಿನ ಯೋಜನೆಗಾಗಿ ಹೆಚ್ಚುವರಿ ನೀರು ಹರಿಸಲಾಗುತ್ತಿದೆ. ಈ ಸಂಬಂಧ ಈಗಾಗಲೇ ನದಿಗೆ ಇಳಿಯದಂತೆ ಎಚ್ಚರಿಕೆಯನ್ನ ಸಹ ನೀಡಲಾಗಿದೆ. ಇನ್ನೂ ಸ್ನೇಹಿತರೊಂದಿಗೆ ನೀರು ಹೆಚ್ಚಿರುವ ಆಲೋಚನೆ ಇಲ್ಲದೆ ನದಿಗಿಳಿದಿದ್ದಾಗ ಅನಾಹುತವಾಗಿದೆ. ಮುಬಾರಕ್‌ ಸಾವನ್ನಪ್ಪಿದ್ದಾನೆ. ಹರೆಯದ ಮಗನನ್ನ ಕಳೆದುಕೊಂಡ ಆ ಮನೆ ಪರಿಸ್ಥಿತಿ ಏನಾಗಬಹುದು ಎಂದು ಊಹಿಸುವುದು ಕಷ್ಟ.  

ಒಂದು ವಾರಗಳ ಅಂತರದಲ್ಲಿ ನಾಲ್ವರು ಹೀಗೆ ನದಿಗೆ ಇಳಿದು ಸಾವನ್ನಪ್ಪಿದ್ದಾರೆ. ಇದು ಮನೆ ಮಕ್ಕಳ ಚಟುವಟಿಕೆ ಬಗ್ಗೆ ಪೋಷಕರು ಚೂರು ಕಾಳಜಿವಹಿಸಬೇಕಾದ ಎಚ್ಚರಿಕೆ ಮೂಡಿಸ್ತಿದೆ. ಮಳೆಗಾಲ ಆರಂಭವಾಗುವರೆಗಷ್ಟೆ ಬಿಸಿಲು ಸೆಕೆ ದಗೆ. ಆನಂತರ ಮಲೆನಾಡಿಗೆ ತಂಡಿ ಹಿಡಿತದೆ. ಹಾಗಾಗಿ ಪೋಷಕರು ಬೇಸಿಗೆಯ ಬಿಸಿಲ ನಡುವೆ ಮಕ್ಕಳು ನದಿಗೆ ಇಳಿವುದನ್ನ ಆದಷ್ಟು ತಪ್ಪಿಸುವುದು ಒಳ್ಳೆಯದು. ಏಕೆಂದರೆ ನದಿಯಾಳ, ನೀರಿನ ಸೆಳೆತ ಎರಡು ಕೂಡ ಯಮನದಾರಿ..