ಬಂದರೆ ನಿಮ್ಮ ಜೊತೆಗೆ, ಬರದಿದ್ದರೆ ನಿಮ್ಮನ್ನು ಬಿಟ್ಟು!ಸಾವರ್ಕರ್‌ ಮಾತಲ್ಲಿ ಕೆಎಸ್‌ ಈಶ್ವರಪ್ಪರಿಗೆ ಶಾಸಕ ಎಸ್‌ಎನ್‌ ಚೆನ್ನಬಸಪ್ಪ ಸವಾಲ್!‌

MLA SN Chennabasappa challenge to KS Eshwarappa in Savarkar's words!

ಬಂದರೆ ನಿಮ್ಮ ಜೊತೆಗೆ,  ಬರದಿದ್ದರೆ ನಿಮ್ಮನ್ನು ಬಿಟ್ಟು!ಸಾವರ್ಕರ್‌ ಮಾತಲ್ಲಿ  ಕೆಎಸ್‌ ಈಶ್ವರಪ್ಪರಿಗೆ ಶಾಸಕ ಎಸ್‌ಎನ್‌ ಚೆನ್ನಬಸಪ್ಪ ಸವಾಲ್!‌
MLA SN Chennabasappa challenge to KS Eshwarappa

Shivamogga  Mar 29, 2024 MLA SN Chennabasappa challenge to KS Eshwarappa  ಶಿವಮೊಗ್ಗ ನಗರ ಶಾಸಕ ಎಸ್‌ಎನ್‌ ಚನ್ನಬಸಪ್ಪ ಇವತ್ತು ಸುದ್ದಿಗೋಷ್ಟಿ ನಡೆಸಿ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಲೋಕಸಭಾ ಚುನಾವಣೆ 2024 ಹಿನ್ನಲೆ ಮಾರ್ಚ್ 31 ರಂದು ಸೈನ್ಸ್ ಮೈದಾನದಲ್ಲಿ ಪೇಜ್ ಪ್ರಮುಖರ ಸಭೆಯನ್ನು ಹಮ್ಮಿಕೊಂಡಿದ್ದೇವೆ ಎಂದು ಶಾಸಕ ಚೆನ್ನಬಸಪ್ಪ ತಿಳಿಸಿದರು. ಶಿವಮೊಗ್ಗ ನಗರ ಚುನಾವಣಾ ಕಾರ್ಯಾಲಯದಲ್ಲಿ  ಮಾತನಾಡಿದ ಅವರು ಬಿಜೆಪಿ ಕಾರ್ಯಕರ್ತರ ಆಧಾರಿತವಾದ ಪಕ್ಷವಾಗಿದೆ. ನಮ್ಮ ಜನತಾ ಪಾರ್ಟಿ  1980 ರ ನಂತರ ಬಿಜೆಪಿಯಾಗಿ ಹೊರಹೊಮ್ಮಿತು. 

ನಾವು ಅಂದಿನಿಂದ ಇಂದಿನವರೆಗೂ ಉತ್ತಮವಾd ಕೆಲಸಗಳನ್ನು ಹಾಗೂ  ಅಭಿವೃಧ್ದಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದೇವೆ. ಕಾಂಗ್ರೆಸ್ ಸರ್ಕಾರ ಯಾವಾಗಲು ಹಿಂದೂತ್ವದ ವಿರೋಧಿಯಾಗಿ ಕೆಲಸ ಮಾಡುತ್ತದೆ. ಆದ್ರೆ ನಾವು ಹಿಂದೂತ್ವದ ಪರವಾಗಿ ಕೆಲಸ ಮಾಡುತ್ತೇವೆ. 1983 ರಲ್ಲಿ ಹಿಂದೂತ್ವದ ರಕ್ಷಣೆಗೆ ಮತನೀಡಿ ಎಂದು ಮತ ಯಾಚನೆ ಮಾಡಿದ ಮೊದಲ ಪಕ್ಷ ನಮ್ಮದು ಎಂದರು

ಈ  ಹಿಂದೆ ಶಿವಮೊಗ್ಗ ಜಿಲ್ಲೆ ಸಮಾಜವಾದಿ ನೆಲೆಗಟ್ಟಾಗಿತ್ತು. ಅದನ್ನು ಇಂದು ಹಿಂದುತ್ವವಾದಿ ನೆಲೆಗಟ್ಟಾಗಿ ಮಾಡಿದ್ದು ಬಿಜೆಪಿ. ನಾವು ಚುನಾವಣೆಯಲ್ಲಿ ಹತ್ತಿರ ಬಂದಾಗ ಮಾತ್ರ ಕೆಲಸ ಮಾಡುವವರು ಅಲ್ಲ ನಮ್ಮ ಕೆಲಸ ನಿರಂತರವಾಗಿ ಆಗುತ್ತಲೇ ಇರುತ್ತದೆ ಆದ್ದರಿಂದ ಚುನಾವಣೆ ಹತ್ತಿರ ಬಂದಾಗ ನಾವು ಹೆದರುವುದಿಲ್ಲ ಎಂದು ಹೇಳಿದರು.

ಈಗಾಗಲೇ ಶಿವಮೊಗ್ಗದಲ್ಲಿ ಸಂಘಟನಾತ್ಮಕ  ಚಟುವಟಿಕೆಗಳು ನಡೆಯುತ್ತಿದೆ. ಎಲ್ಲಾ ಕಡೆ ಯುವಮೋರ್ಚಾ ಸಭೆಗಳನ್ನು ಸಹ ನಡೆಸುತ್ತಿದ್ದೇವೆ.ಒಂದು ಲಕ್ಷಕ್ಕಿಂತ ಹೆಚ್ಚು ಓಟು ಶಿವಮೊಗ್ಗದಲ್ಲಿ ಬರುತ್ತದೆ ಎಂಬ ನಂಬಿಕೆ ನಮಗಿದೆ ಅದಕ್ಕೆ ಬೇಕಾದ  ಎಲ್ಲಾ ತಯಾರಿಯನ್ನು ನಡೆಸುತ್ತಿದ್ದೇವೆ ಎಂದರು. 

ಇದೆ ಮಾರ್ಚ್ 31 ರಂದು 7 ಸಾವಿರಕ್ಕೂ ಹೆಚ್ಚು ಪೇಜ್ ಪ್ರಮುಖರ ಸಭೆಯನ್ನು ಹಮ್ಮಿ ಕೊಂಡಿದ್ದೇವೆ. ಈ ಸಮಾವೇಶ ಸೈನ್ಸ್ ಮೈದಾನದಲ್ಲಿ ಸಂಜೆ 5 ಗಂಟೆಗೆ ಈ ನಡೆಯುತ್ತದೆ.ಒಂದು ಪೇಜ್ ನಲ್ಲಿ 30 ಜನರಿರುತ್ತಾರೆ  ಈ ಹಿಂದೆ ಮೋದಿ ಗೆದ್ದರೆ ದೇಶ ಗೆಲ್ಲುತ್ತೆ ಎಂದು ಹೇಳುತ್ತಿದ್ದರು. ಇಂದು ಪೇಜ್ ಗೆದ್ದರೆ ದೇಶ ಗೆಲ್ಲುತ್ತೆ ಎಂದು ಹೇಳುತ್ತಿದ್ದಾರೆ. ಈ ಸಮಾವೇಶದಲ್ಲಿ ಭಾನುಪ್ರಕಾಶ್ ಬಿ ವೈ ರಾಘವೇಂದ್ರ. ಟಿ ಡಿ ಮೇಘರಾಜ ಸೇರಿದಂತೆ ಪ್ರಮುಖರ ಭಾಗಿಯಾಗಲಿದ್ದಾರೆ ಎಂದರು. 

ಇಂದು ಜೆಡಿಎಸ್ ಕಾರ್ಯ ಕರ್ತರು ಸಹ ನಮ್ಮೊಂದಿಗೆ ಇದ್ದಾರೆ.ಅವರೊಡನೆ ಪ್ರತ್ಯೇಕ ಸಭೆ ನಡೆಸಿ ನಾವೆಲ್ಲ ಒಟ್ಟಿಗೆ ಪ್ರಚಾರ ನಡೆಸುತ್ತೇವೆ. ಇಂದು ಎಲ್ಲಾ ರಾಷ್ಟ್ರ ಭಕ್ತರು ಬಿಜೆಪಿಯೊಂದಿಗೆ ಇದ್ದಾರೆ ಎಂದು ಹೇಳಿದರು. 

ಈಶ್ವರಪ್ಪನವರ ಬಗ್ಗೆ ಮಾತನಾಡಿದ ಅವರು ಇಂದು ಐದರಿಂದ ಆರು ಮಾಜಿ ಕಾರ್ಪೊರೇಟರ್ಸ್‌ ಈಶ್ವರಪ್ಪನವರೊಂದಿಗೆ ಇದ್ದಾರೆ.ಅವರೊಡನೆ ಮಾತನಾಡಲಿದ್ದೇವೆ  ಒಳಗೊಳಗೆ ಕೆಲಸ ಮಾಡುವ ಕಾರ್ಯಕರ್ತರು ಬಿಜೆಪಿಯಲ್ಲಿ ಇಲ್ಲ ಎಂದರು. 

ಅಲ್ಲದೆ ಬಿವೈ ವಿಜಯೇಂದ್ರ ರಾಜಿನಾಮೆ ನೀಡುವ ಪರಿಸ್ಥಿತಿ ನಿರ್ಮಾಣ ಆಗಲ್ಲ. ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ದೂಳಿಪಟ ಆಗಲಿದೆ. ಈಶ್ವರಪ್ಪ ನವರ ಜೊತೆ ಆರು ಜನ ಮಾಜಿ ಪಾಲಿಕೆ ಸದಸ್ಯರು ಹೋಗಿದ್ದಾರೆ. ಹಿಂದೆ ಯಾರ್ಯಾರು ಎಷ್ಟು ಮತ ತಗೆದುಕೊಂಡಿದ್ದಾರೆ ಅನ್ನೊಂದು ಗೊತ್ತಿದೆ. ಈಶ್ವರಪ್ಪ ಮೋದಿ ಪೋಟೋ ಹಾಕಿಕೊಂಡಿರುವುದನ್ನು ನೋಡಿ ನಗು ಬರ್ತಿದೆ ಶಿವಮೊಗ್ಗದಲ್ಲಿ ಬಿಜೆಪಿ ಗೆಲ್ಲುತ್ತೆ ರಾಘವೇಂದ್ರ ಗೆಲ್ಲುತ್ತಾರೆ .ಬಂದರೇ ಜೊತೆ ಬರದಿದ್ದರೆ ಬಿಟ್ಟು ಎಂಬ ಸಾರ್ವಕರ್ ಮಾತು ಪಾಲಿಸುತ್ತೇವೆ ಎಂದರು