ಸುಮಲತಾ ಬಂಡಾಯ ಶಮನದಂತೆ ತಣ್ಣಗಾಗುತ್ತಾ ಕೆಎಸ್‌ ಈಶ್ವರಪ್ಪರ ಅಸಮಾಧಾನ! ಬಿವೈ ವಿಜಯೇಂದ್ರಗೆ ಅಮಿತ್‌ ಶಾ ಕೊಟ್ಟ ಸೂಚನೆ ಏನು?

Will KS Eshwarappa's displeasure be soothed in the same way that Sumalatha's rebellion was right? What was Amit Shah's instruction to BY Vijayendra?

ಸುಮಲತಾ ಬಂಡಾಯ ಶಮನದಂತೆ ತಣ್ಣಗಾಗುತ್ತಾ ಕೆಎಸ್‌ ಈಶ್ವರಪ್ಪರ ಅಸಮಾಧಾನ! ಬಿವೈ ವಿಜಯೇಂದ್ರಗೆ ಅಮಿತ್‌ ಶಾ ಕೊಟ್ಟ ಸೂಚನೆ ಏನು?
KS Eshwarappa ,Sumalatha ,Amit Shah, BY Vijayendra

Shivamogga  Apr 3, 2024 KS Eshwarappa ,Sumalatha ,Amit Shah, BY Vijayendra|  ಮಂಡ್ಯ ಸಂಸದೆ ಸುಮಲತಾ ಬಂಡಾಯ ಶಮನವಾಗಿದೆ, ಕ್ಷೇತ್ರ ಬಿಟ್ಟುಕೊಟ್ಟು ಬಿಜೆಪಿ ಸೇರುವುದಾಗಿ ಅವರು ಹೇಳಿದ್ದಾರೆ. ಮಂಡ್ಯದಲ್ಲಿ ದರ್ಶನ್‌ ಹಾಗೂ ತಮ್ಮ ಪುತ್ರನ ಸಮ್ಮುಖದಲ್ಲಿ ಈ ನಿರ್ಧಾರ ಪ್ರಕಟಿಸಿದ್ದಾರೆ. ಅದೆ ರೀತಿ ಶಿವಮೊಗ್ಗದಲ್ಲಿ ಕೆಎಸ್‌ ಈಶ್ವರಪ್ಪನವರ ಬಂಡಾಯ ಶಮನವಾಗುತ್ತದೆಯೇ? ಸುಮಲತಾರನ್ನ ಮನವೊಲಿಸುವಲ್ಲಿ ಯಶಸ್ವಿಯಾದ ದೆಹಲಿ ಹೈಕಮಾಂಡ್‌ ಅದೇ ರೀತಿ ಕೆಎಸ್‌ ಈಶ್ವರಪ್ಪನವರ ಮನವೊಲಿಸುತ್ತಾ ಎಂಬ ಕುತೂಹಲ ಮೂಡಿಸಿದೆ. 

ವಿಜಯೇಂದ್ರರಿಗೆ ಖಡಕ್‌ ಸೂಚನೆ?

ಇದರ ನಡುವೆ ನಿನ್ನೆ ರಾಜ್ಯದಲ್ಲಿದ್ದ ಅಮಿತ್‌ ಶಾ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರರಿಗೂ ಖಡಕ್‌ ಸೂಚನೆಗಳನ್ನ ಕೊಟ್ಟಿದ್ದಾರೆ. ಆಯ್ದ ಕ್ಷೇತ್ರಗಳ ಮೇಲೆ ಹೆಚ್ಚು ನಿಗಾವಹಿಸುವಂತೆ ತಿಳಿಸಿರುವ ಅವರು ಸ್ಥಳೀಯ ಅಸಮಾಧಾನಗಳಿಗೆ ಕಡ್ಡಾಯವಾಗಿ ತೇಪೆ ಹಚ್ಚಬೇಕು. ನಿಗದಿತ ಗುರಿ ಸಾಧನೆಯಲ್ಲಿ ಯಾವುದೇ ವೈಫಲ್ಯವಾಗಬಾರದು ಎಂದು ಸೂಚಿಸಿದ್ದಾರೆ ಎನ್ನಲಾಗಿದೆ. 

ಅಮಿತ್‌ ಶಾ ರಿಪೋರ್ಟ್‌ ಪ್ರಕಾರ ರಾಜ್ಯದಲ್ಲಿ 20 ಕ್ಷೇತ್ರಗಳಲ್ಲಿ ಗೆಲುವಿನ ವಾತಾವರಣ ಇದೆ. ಇದನ್ನ ಕನಿಷ್ಟ 22 ರ ಗಡಿಯನ್ನು ದಾಟಿಸಬೇಕಿದೆ. ಸದ್ಯ ಬಿಜೆಪಿಯಲ್ಲಿ, 28 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ಪ್ರಚಾರ ಮಾಡಲಾಗ್ತಿದೆ ಹೊರತು, ಆ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರಯತ್ನಗಳು ಸಾಲುತ್ತಿಲ್ಲ ಎಂಬುದು ಅಮಿತ್‌ ಶಾ ರ ಗಮನಕ್ಕಿದೆ. ಅಲ್ಲದೆ ಅಸಮಾಧಾನವನ್ನು ಮಟ್ಟಹಾಕುವ ಪ್ರಯತ್ನಗಳ ಬಗ್ಗೆಯು ಅಮಿತ್‌ ಶಾ ಬಳಿ ಮಾಹಿತಿಯಿದೆ. ಈ ನಿಟ್ಟಿನಲ್ಲಿ ವಿಜಯೇಂದ್ರರಿಗೆ ಸೂಚನೆ ಕೊಟ್ಟಿರುವ ಗೊಂದಲದ ಕ್ಷೇತ್ರಗಳಲ್ಲಿ ಅಸಮಾಧಾನಿತ ನಾಯಕರ ಮನವೊಲಿಸಬೇಕು. ಅಪಸ್ವರಗಳನ್ನು ಕಡಿಮೆಮಾಡಬೇಕು, ಬಂಡಾಯಕ್ಕೆ  ಮದ್ದು ಅರಿಯಬೇಕು ಎಂದು ವಿಜಯೇಂದ್ರರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. 

ಇನ್ನೂ ರಾಜ್ಯಾಧ್ಯಕ್ಷರಿಗೆ ಟಾಸ್ಕ್‌ ಕೊಟ್ಟಿರುವ ಅಮಿತ್‌ ಶಾ ನಾನು ದೆಹಲಿಗೆ ಹೋಗುವುದಿಲ್ಲ ಯಾರ ಬಳಿಯು ಮಾತನಾಡುವುದಿಲ್ಲ ಎಂದಿದ್ದ ಕೆಎಸ್‌ ಈಶ್ವರಪ್ಪನವರ ಜೊತೆ ಖುದ್ದು ಮಾತನಾಡಿ ದೆಹಲಿಗೆ ಬನ್ನಿ ಎಂದು ಹೇಳಿದೆ. ಅದನ್ನ ಇಲ್ಲ ಎನ್ನಲಾಗದೇ ಕೆಎಸ್‌ ಈಶ್ವರಪ್ಪ ದೆಹಲಿಗೆ ತೆರಳಿದ್ದಾರೆ. ಇಂದು ರಾತ್ರಿ ಅಮಿತ್‌ ಶಾ ಕೆಎಸ್‌ ಈಶ್ವರಪ್ಪರವರ ನಡುವೆ ಮಾತುಕತೆ ನಡೆಯಲಿದ್ದು, ಶಿವಮೊಗ್ಗಕ್ಕೆ ವಾಪಸ್‌ ಆದ ಬಳಿಕ ಅದರ ಅಪ್‌ಡೇಟ್ಸ್‌ ನ್ನ ಈಶ್ವರಪ್ಪ ನೀಡುವ ನಿರೀಕ್ಷೆಯಿದೆ. 

TODAY ವಾಟ್ಸ್ಯಾಪ್​ ಚಾನಲ್​ ಫಾಲೋ ಮಾಡಿ! ಯಾವಾಗ ಬೇಕೋ ಆಗಲೇ  ಸುದ್ದಿ ಓದಿ,  ಲಿಂಕ್​ ಕ್ಲಿಕ್ ಮಾಡಿ

https://whatsapp.com/channel/0029Va9I91s3LdQVrdq7yl1h

ಇದನ್ನು ಓದಿ : ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ನಲ್ಲೀಗ ಮಧು ಬಂಗಾರಪ್ಪನವರೇ ಸುಪ್ರೀಂ!  ಶೀಘ್ರದಲ್ಲಿಯೇ ಇನ್ನೊಂದು ಬದಲಾವಣೆ! ಏನದು ರಾಜಕಾರಣ