ಕಾಂಗ್ರೆಸ್ ಸೇರೋದು ನಿಜನಾ? ಆಯನೂರು ಮಂಜುನಾಥ್ ಹೇಳೋದೇನು?

Is it true to join the Congress? What does Ayanur Manjunath say? ಕಾಂಗ್ರೆಸ್ ಸೇರೋದು ನಿಜನಾ? ಆಯನೂರು ಮಂಜುನಾಥ್ ಹೇಳೋದೇನು?

ಕಾಂಗ್ರೆಸ್ ಸೇರೋದು ನಿಜನಾ? ಆಯನೂರು ಮಂಜುನಾಥ್ ಹೇಳೋದೇನು?

KARNATAKA NEWS/ ONLINE / Malenadu today/ Aug 18, 2023 SHIVAMOGGA NEWS  

ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್​ ಮುಖಂಡ ಆಯನೂರು ಮಂಜುನಾಥ್ ಇದೀಗ ಕಾಂಗ್ರೆಸ್​ ನತ್ತ ಮುಖ ಮಾಡಿದ್ದಾರೆ ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ. ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪನವರ ವಿರುದ್ಧ ಟಿಕೆಟ್ ವಿಚಾರದಲ್ಲಿ ಸಿಡಿದು ಬಿಜೆಪಿಯನ್ನು ತೊರೆದಿದ್ದ ಅವರು ಜೆಡಿಎಸ್​ ಸೇರಿದ್ದರು. ಇದೀಗ ಕಾಂಗ್ರೆಸ್​ನತ್ತ ಮುಖ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಸಂಬಂಧ ಅದಾಗಲೇ ಹಲವು ಹಂತಗಳ ಮಾತುಕತೆಗಳು ಮುಗಿದಿವೆ ಎಂದು ಸಹ ಹೇಳಲಾಗುತ್ತಿದೆ. 

ಈ ಬೆಳವಣಿಗೆಗಳ ನಡುವೆ  ಈ ಹಿಂದೆ ಕಾಂಗ್ರೆಸ್‌ನವರು ನನ್ನನ್ನು ಸಂಪರ್ಕ ಮಾಡಿದ್ದರು. ಅದು ಸಂಪೂರ್ಣವಾಗಲಿಲ್ಲ. ಈಗ ಪುನಃ ಅವಕಾಶ ಕೊಡುತ್ತೇನೆ ಎಂದರೆ ಯೋಚನೆ ಮಾಡುತ್ತೇನೆ. ಆದರೆ, ಮತ್ತೆ ಬಿಜೆಪಿ ಕಡೆ ಹೋಗುವ ಸಾಧ್ಯತೆಯಿಲ್ಲ ಎಂದು ಮಾಧ್ಯಮಗಳಿಗೆ ಬೆಂಗಳೂರಿನಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿದೆ. 

ಎಲ್ಲಾ ಕಡೆಯಿಂದಲೂ ನನಗೆ ಆಹ್ವಾನ ಇರುವುದು ನಿಜ. ನಾನು ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿಲ್ಲ. ಕಾಂಗ್ರೆಸ್‌ ಸೇರುವ ವದಂತಿ ಸರಿಯಲ್ಲ. ಪ್ರಸ್ತುತ ಮಾಜಿಸಚಿವರು, ಶಾಸಕರು ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿ ಹಬ್ಬಿರುವುದರಿಂದ ಅದರಲ್ಲಿ ನನ್ನ ಹೆಸರು ಇರಬಹುದು ಅಷ್ಟೇ. ಆದರೆ, ಅದು ಸತ್ಯವಲ್ಲ. ನನ್ನ ವಿರುದ್ಧ ಹಿಂದೆ ಸಹ ಷಡ್ಯಂತ್ರ ಮಾಡಲಾಗಿತ್ತು ಎಂದಿದ್ದಾರೆ. 

ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪರಿಗೆ ಅರಸಿ ಬಂದ ಅರಸು ಪ್ರಶಸ್ತಿ!

ರಾಜ್ಯ ಸರ್ಕಾರದಿಂದ ಕೊಡಲ್ಪಡುವ ದೇವರಾಜ ಅರಸು ಪ್ರಶಸ್ತಿಯನ್ನು ಈ ಸಾಲಿನಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರಿಗೆ ಘೋಷಿಸಿದೆ. ಸಮಾಜವಾದಿ ಪಕ್ಷದಿಂದಲೇ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ ಕಾಗೋಡು ತಿಮ್ಮಪ್ಪನವರಿಗೆ ಈ ಪ್ರಶಸ್ತಿ ಬಂದಿರುವುದು ಮಲೆನಾಡಿಗೆ ಹೆಮ್ಮೆಯ ಸಂಗತಿಯಾಗಿದೆ. ಕಾಗೋಡು ತಿಮ್ಮಪ್ಪರವರಿಗೆ 2023–24 ನೇ ಸಾಲಿ ದೇವರಾಜ ಅರಸು ಪ್ರಶಸ್ತಿ ಲಭ್ಯವಾಗಿದ್ದು, ಇದೇ 20 ರಂದು ವಿಧಾನಸೌಧದ ಬಾಂಕ್ವೆಟ್‌ಹಾಲ್‌ನಲ್ಲಿ ನಡೆಯುವ ದೇವರಾಜ ಅರಸು ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನಿಸಲಾಗುತ್ತದೆ . ಈ ಬಗ್ಗೆ  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ ಮಾಹಿತಿ ನೀಡಿದ್ದು, ಈ ಪ್ರಶಸ್ತಿಯು ₹5 ಲಕ್ಷ ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ ಎಂದು ತಿಳಿಸಿದ್ದಾರೆ.   

ಇನ್ನಷ್ಟು ಸುದ್ದಿಗಳು


 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು