ವಿಜಯೇಂದ್ರರವರ ನಾಮಪತ್ರ ಸಲ್ಲಿಕೆಗೆ ಹಣ ಕೊಟ್ಟು ಜನರ ಕರೆದ ಆರೋಪ! ವೈರಲ್​ ವಿಡಿಯೋ ಆಧರಿಸಿ ದೂರು! ಎಫ್​ಐಆರ್​

An FIR has been lodged at Shiralakoppa police station in connection with the alleged payment of money to people for the filing of Vijayendra's nomination papers.

ವಿಜಯೇಂದ್ರರವರ ನಾಮಪತ್ರ ಸಲ್ಲಿಕೆಗೆ ಹಣ ಕೊಟ್ಟು ಜನರ ಕರೆದ ಆರೋಪ! ವೈರಲ್​ ವಿಡಿಯೋ ಆಧರಿಸಿ ದೂರು! ಎಫ್​ಐಆರ್​
ವಿಜಯೇಂದ್ರವರ ನಾಮಪತ್ರ ಸಲ್ಲಿಕೆಗೆ ಹಣ ಕೊಟ್ಟು ಜನರ ಕರೆದ ಆರೋಪ! ವೈರಲ್​ ವಿಡಿಯೋ ಆಧರಿಸಿ ದೂರು! ಎಫ್​ಐಆರ್​

KARNATAKA NEWS/ ONLINE / Malenadu today/ Apr 24, 2023 GOOGLE NEWS


ಶಿರಾಳಕೊಪ್ಪ/ ಶಿಕಾರಿಪುರ/ಶಿವಮೊಗ್ಗ  /  ಇಲ್ಲಿ ಶಿರಾಳಕೊಪ್ಪ ಪೊಲೀಸ್ ಸ್ಟೇಷನ್​ನಲ್ಲಿ (shiralakoppa police station ) ಬಿ.ವೈ ವಿಜಯೇಂದ್ರರರ ನಾಮಪತ್ರ ಸಲ್ಲಿಕೆಗೆ, ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಸಭೆ ನಡೆಸಿ ಹಾಗೂ ಹಣ ಕೊಟ್ಟು ಜನರನ್ನ ಕರೆಸುವ ಆಮೀಷವೊಡ್ಡಿದ ವಿಚಾರ ಸಂಬಂಧ ವ್ಯಕ್ತಿಯೊಬ್ಬರ ವಿರುದ್ಧ ಕೇಸ್​ ದಾಖಲಾಗಿದೆ. 

ಏನು ಕೇಸ್​ 

IPC 1860 (U/s-171E, 171H) ಅಡಿಯಲ್ಲಿ ದಿನಾಂಕ 22-04-2023 ರಂದು ಈ ಕೇಸ್ ರಿಜಿಸ್ಟರ್​ ಆಗಿದೆ. 

ಈ ಮೊದಲು ಎನ್​ಸಿಯಾಗಿದ್ದ ಪ್ರಕರಣದ ಕುರಿತು, ಎಸಿಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಶಿಕಾರಿಪುರ ರವರ ಅನುಮತಿ ಪಡೆದು ಎಫ್​ಐಆರ್ ದಾಖಲಿಸಲಾಗಿದೆ. 

ನಡೆದಿದ್ದೇನು? 

ಶಿಕಾರಿಪುರ ತಾಲ್ಲೂಕು  ಚಿಕ್ಕಮಾಗಡಿ ತಾಂಡಾದಲ್ಲಿ ಬಿಜೆಪಿ ಮುಖಂಡರೊಬ್ಬರು ಸಭೆ ನಡೆಸಿ ಮಾತನಾಡಿದ ವಿಡಿಯೋವೊಂದು ವೈರಲ್ ಆಗಿತ್ತು.

ಅಲ್ಲದೆ ಈ ವಿಡಿಯೋ ಚುನಾವಣಾ ಮೇಲಾಧಿಕಾರಿಗಳಿಗೆ ಸಿಕ್ಕಿತ್ತು. ಅದರಂತೆ ಶಿಕಾರಿಪುರ ವಿಧಾನ ಕ್ಷೇತ್ರದ ಚುನಾವಣಾ ಅಧಿಕಾರಿ ರುದ್ರಪ್ಪರಿಗೆ ಈ ವಿಡಿಯೋವನ್ನು ಮೇಲಾಧಿಕಾರಿಗಳು ರವಾನೆ ಮಾಡಿದ್ದಾರೆ. 

ರುದ್ರಪ್ಪರವರು ವಿಡಿಯೋವನ್ನು ಪರಿಶೀಲಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. 

ವಿಡಿಯೋದಲ್ಲಿ ಏನಿದೆ

ತಾಂಡಾವೊಂದರಲ್ಲಿ ಸಭೆ ನಡೆಸಿದ್ದ ಬಿಜೆಪಿ ಮುಖಂಡ, ನಮ್ಮ ನಮ್ಮಲ್ಲಿ ಒಗ್ಗಟ್ಟಿರಬೇಕು, ಬೇರೆ ಪಕ್ಷದವರು ನಮ್ಮನ್ನು ಒಡೆಯಲು ಅವಕಾಶ ಕೊಡಬಾರದು, ನಮ್ಮೊಳಗೆ ಏನಾದರೂ ಇದ್ರೆ ಗುದ್ದಾಡಿ ಸರಿಮಾಡಿಕೊಳ್ಳೋಣ ಎಂಬಿತ್ಯಾದಿ ಮಾತುಗಳಿವೆ. 

ಇದಕ್ಕೂ ಮೊದಲು ನಾಮಪತ್ರ ಸಲ್ಲಿಕೆ ಕರೆದುಕೊಂಡು ಬಂದರೆ,  6000 ರೂಪಾಯಿ ಕೊಡುವುದಾಗಿ ಹೇಳುತ್ತಿರುವ ಮಾತು ಸಹ ವಿಡಿಯೋದಲ್ಲಿ ರೆಕಾರ್ಡ್​ ಆಗಿದೆ. ಇದೇ ವಿಚಾರಕ್ಕೆ ಚುನಾವಣಾಧಿಕಾರಿಗಳು, ತೋಗರ್ಸಿ ಸಣ್ಣ ಹನುಮಂತಪ್ಪ ಎಂಬ ಬಿಜೆಪಿ ಮುಖಂಡರ ವಿರುದ್ಧ ದೂರು ಕೊಟ್ಟಿದ್ದು, ಎಫ್​ಐಆರ್ ದಾಖಲಾಗಿದೆ. 

ಆರೋಪ ಏನು? 

ಚುನಾವಣಾ ಅಧಿಕಾರಿಗಳ ಅನುಮತಿ ಪಡೆಯದೇ ಸಭೆ ನಡೆಸಿದ ವಿಚಾರ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. 

ಜನರಿಗೆ ಹಣದ ಆಮಿಷವೊಡ್ಡಿದ್ದು ಕೂಡ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, ಈ ಎರಡು ಕಾರಣಕ್ಕೆ ಎಫ್​ಐಆರ್ ದಾಖಲಾಗಿದೆ. 

Malenadutoday.com Social media