ಎಲೆಕ್ಷನ್​ಗೆ ಸಿದ್ದತೆ ಹೇಗಿದೆ? ಜಿಲ್ಲಾಡಳಿತ ಹೇಳಿದ್ದೇನು? ಮತ ಎಣಿಕೆ ಎಲ್ಲಿ? ಮತದಾರರು ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ

Shimoga district administration's information on preparations for Karnataka state assembly elections ಚುನಾವಣೆಯು ಸಮೀಪಿಸುತ್ತಿರುವಂತೆ ಶಿವಮೊಗ್ಗ ಜಿಲ್ಲೆ ಜಿಲ್ಲಾಧಿಕಾರಿ ಡಾ.ಆರ್ ಸೆಲ್ವಮಣಿಯವರು , ಚುನಾವಣೆ, ಮತದಾನ, ಶಿವಮೊಗ್ಗ ಜಿಲ್ಲೆ ಏಳು ವಿಧಾನಸಭಾ ಕ್ಷೇತ್ರಗಳು ಹಾಗೂ ಮತ ಎಣಿಕೆಯ ಸಂಬಂಧ ಮಾಹಿತಿ ನೀಡಿದ್ದಾರೆ.

ಎಲೆಕ್ಷನ್​ಗೆ ಸಿದ್ದತೆ ಹೇಗಿದೆ? ಜಿಲ್ಲಾಡಳಿತ ಹೇಳಿದ್ದೇನು? ಮತ ಎಣಿಕೆ ಎಲ್ಲಿ? ಮತದಾರರು ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ

KARNATAKA NEWS/ ONLINE / Malenadu today/ May 7, 2023 GOOGLE NEWS 

ಶಿವಮೊಗ್ಗ/ ಕರ್ನಾಟಕ ವಿಧಾನಸಭಾ ಚುನಾವಣೆ 2023 ಗೆ ಶಿವಮೊಗ್ಗ ಜಿಲ್ಲಾಡಳಿತ ಸಜ್ಜಾಗಿದೆ. ಈ ಸಂಬಂಧ ಕೈಗೊಂಡ ಸಿದ್ದತೆ ಹಾಗೂ ಸಾರ್ವಜನಿಕರಿಗೆ ನೀಡಬೇಕಾದ ಮಾಹಿತಿಗಳನ್ನ ಒದಗಿಸಿದೆ. ವಿಧಾನಸಭಾ ಸಾರ್ವತ್ರಿಕ ಚುನಾವಣೆ ಮತದಾನಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ತಿಳಿಸಿದ್ದಾರೆ.

Karnataka election/  ಕಡೆಯ ಆಟ... ಕೊನೆಯ ಪ್ರಚಾರ... ಸ್ಟಾರ್​ ಅಭ್ಯರ್ಥಿ,  ಸ್ಟಾರ್​ ಪ್ರಚಾರ/ ಸ್ವಾಭಿಮಾನ/ ಶಾಂತಿಯ ನಡಿಗೆ! ಹೇಗಿತ್ತು ಪ್ರಚಾರ ಇಲ್ಲಿದೆ ವಿವರ 

ಒಟ್ಟು ಮತದಾರರ ಸಂಖ್ಯೆ

ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 728886 ಪುರುಷ, 743713 ಮಹಿಳಾ, 32 ಇತರೆ ಹಾಗೂ 696 ಸೇವಾ ಮತದಾರರು ಸೇರಿ ಒಟ್ಟು 1473327 ಮತದಾರರಿದ್ದಾರೆ.

ಮತಗಟ್ಟೆ & ಅಧಿಕಾರಿಗಳ ನೇಮಕ:  

ಜಿಲ್ಲಾ ವ್ಯಾಪ್ತಿಯಲ್ಲಿ  1775 + 07 ಪೂರಕ ಸೇರಿದಂತೆ ಒಟ್ಟು 1782 ಮತಗಟ್ಟೆಗಳಿವೆ. ಜಿಲ್ಲೆಯಲ್ಲಿ ಮತದಾನಕ್ಕೆ ಸಂಬಂಧಿದಂತೆ 2050 ಪಿಆರ್​ಒ 2050 ಎಪಿಆರ್‍ಓ, 4100 ಪಿಓ ಸೇರಿದಂತೆ ಒಟ್ಟು 8200 ಮತಗಟ್ಟೆ ಅಧಿಕಾರಿ/ಸಿ ಬ್ಬಂದಿಗಳನ್ನು ನಿಯೋಜಿಸಲಾಗಿದೆ. ಹಾಗೂ 83 ಮೈಕ್ರೋ ಅಬ್ಸರ್ವರ್ಸ್‍ಗಳನ್ನು ನೇಮಕ ಮಾಡಲಾಗಿದೆ.

ಬಸ್ ನಿಯೋಜನೆ:     

ಒಟ್ಟು 8156 ಸಿಬ್ಬಂದಿಗಳನ್ನು ಮತಗಟ್ಟೆಗಳಿಗೆ ಕರೆದೊಯ್ಯಲು ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ. ಶಿವಮೊಗ್ಗ ಗ್ರಾಮಾಂತರಕ್ಕೆ 16 ಬಸ್, ಭದ್ರಾವತಿಗೆ 40, ಶಿವಮೊಗ್ಗ ನಗರಕ್ಕೆ 15, ತೀರ್ಥಹಳ್ಳಿಗೆ 45, ಶಿಕಾರಿಪುರಕ್ಕೆ 43, ಸೊರಬಕ್ಕೆ 36, ಸಾಗರಕ್ಕೆ 31 ಮತ್ತು ಹೊಸನಗರಕ್ಕೆ 14 ಸೇರಿದಂತೆ ಒಟ್ಟು 240 ಬಸ್‍ಗಳನ್ನು ನಿಯೋಜಿಸಲಾಗಿದೆ.

ಮಸ್ಟರಿಂಗ್, ಡಿಮಸ್ಟರಿಂಗ್ ಮತ್ತು ಮತ ಎಣಿಕೆ ಸ್ಥಳ :

ಶಿವಮೊಗ್ಗ ಗ್ರಾಮಾಂತರ -111 ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಹೆಚ್ ಎಸ್.ರುದ್ರಪ್ಪ ರಾಷ್ಟ್ರೀಯ ಪದವಿಪೂರ್ವ ಕಾಲೇಜು ಮತ್ತು ಎಸ್.ಆರ್.ನಾಗಪ್ಪಶೆಟ್ರಿ ಸ್ಮರಕ ರಾಷ್ಟ್ರೀಯ ಅನ್ವಯಿಕ ಸೈನ್ಸ್ ಪಿಯು ಕಾಲೇಜ್, ಶಿವಮೊಗ್ಗ.

 ಭದ್ರಾವತಿ-112 ಸಂಚಿ ಹೊನ್ನಮ್ಮ ಬಾಲಿಕ ಪಪೂ ಕಾಲೇಜು ಭದ್ರಾವತಿ. ಶಿವಮೊಗ್ಗ-113 ಸಹ್ಯಾದ್ರಿ ವಾಣಿಜ್ಯ ಕಾಲೇಜ್ ಶಿವಮೊಗ್ಗ.

 ತೀರ್ಥಹಳ್ಳಿ-114 ಡಾ.ಯು.ಆರ್ ಅನಂತಮೂರ್ತಿ ಕಾಲೇಜು ತೀರ್ಥಹಳ್ಳಿ. ಶಿಕಾರಿಪುರ-115 ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶಿಕಾರಿಪುರ. ಸೊರಬ-116 ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೊರಬ. ಸಾಗರ-117 ಸರ್ಕಾರಿ ಪದವಿಪೂರ್ವ ಕಾಲೇಜು ಸಾಗರ. ಇನ್ನೂ ಮತ ಎಣಿಕೆ ಸಹ್ಯಾದ್ರಿ ಕಾಲೇಜಿನಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.



MISSING /  ಇವರಿಬ್ಬರನ್ನ ಎಲ್ಲಾದರೂ ಕಂಡೀದ್ದೀರಾ? ಸುಳಿವು ಸಿಕ್ಕರೆ ಪೊಲೀಸರಿಗೆ ಮಾಹಿತಿ ನೀಡಿ

ಶಿವಮೊಗ್ಗ & ದಾವಣಗೆರೆ ಹಾಗೂ  ಹರಿಹರದಿಂದ ಇಬ್ಬರು ವ್ಯಕ್ತಿಗಳು ಕಾಣೆಯಾಗಿದ್ದಾರೆ. ಅವರ ಸುಳಿವು ಸಿಕ್ಕಲ್ಲಿ ಹುಡುಕಿಕೊಡಿ  ಎಂದು ಪ್ರಕಟಣೆ ನೀಡಲಾಗಿದೆ. ಈ ಇಬ್ಬರು ವ್ಯಕ್ತಿಗಳ ಗುರುತು ಪತ್ತೆಯಾದಲ್ಲಿ ಪೊಲೀಸರಿಗೆ ಮಾಹಿತಿ ನೀಡುವಂತೆ ದೂರವಾಣಿ ಸಂಖ್ಯೆಯನ್ನು ಕೂಡ ನೀಡಲಾಗಿದೆ. 

Karnataka election/  ಕಡೆಯ ಆಟ... ಕೊನೆಯ ಪ್ರಚಾರ... ಸ್ಟಾರ್​ ಅಭ್ಯರ್ಥಿ,  ಸ್ಟಾರ್​ ಪ್ರಚಾರ/ ಸ್ವಾಭಿಮಾನ/ ಶಾಂತಿಯ ನಡಿಗೆ! ಹೇಗಿತ್ತು ಪ್ರಚಾರ ಇಲ್ಲಿದೆ ವಿವರ 

ದಾವಣಗೆರೆ ಯಲ್ಲಮ್ಮನಗರದಿಂದ ವ್ಯಕ್ತಿ ನಾಪತ್ತೆ

ದಾವಣೆಗೆರೆಯ ಯಲ್ಲಮನಗರ, ದೇವರಾಜ ಅರಸ್ ಬಡಾವಣೆ 4ನೇ ಕ್ರಾಸ, 3ನೇ ಮುಖ್ಯರಸ್ತೆ ವಾಸಿ ಬಸವರಾಜು ಎಂಬುವವರ ಮಗ 45 ವರ್ಷದ ಗುರುರಾಜು ನಾಪತ್ತೆಯಾಗಿದ್ದಾರೆ. 

ಇವರು 2023ರ ಜನವರಿ 03 ರಂದು ಮನೆ ಬಿಟ್ಟು ಹೋಗಿರುತ್ತಾರೆ. ಈತನ ಚಹರೆ 5.5 ಅಡಿ ಎತ್ತರ, ಗೋಧಿ ಮೈ ಬಣ್ಣ, ದುಂಡು ಮುಖ, ಸಾಧಾರಣ ಮೈ ಕಟ್ಟು ಹೊಂದಿದ್ದು, ಕಾಣೆಯಾದ ವೇಳೆ ಬಿಳಿ ಬಣ್ಣದ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.

ಹರಿಹರದಿಂದ ಯುವಕ ಕಾಣೆ

ಹರಿಹರ ನಗರದ ಮಹಾತ್ಮಗಾಂಧಿ ಪ್ರದೇಶ, 16ನೇ ಕ್ರಾಸ್ ಟ್ಯಾಂಕ್ ಹತ್ತಿರ ವಾಸವಿರುವ ಹಫೀಜ್ ಸಾಬ್ ಎಂಬುವವರ ಮಗ  35 ವರ್ಷದ ಫೈರೋಜ್ ಖಾನ್ ಎಂಬುವವರು  ದಿ: 05/06/2022 ಕಾಣೆಯಾಗಿರುತ್ತಾರೆ.   

ಈತನ ಚಹರೆ ಸುಮಾರು 5.8 ಅಡಿ ಎತ್ತರ, ಎಣ್ಣೆಗೆಂಪು  ಮೈ ಬಣ್ಣ, ಕೋಲು ಮುಖ, ಸಾಧಾರಣ ಮೈ ಕಟ್ಟು ಹೊಂದಿದ್ದು, ಕಾಣೆಯಾದ ವೇಳೆ ಕಪ್ಪು ಬಣ್ಣದ ಶರ್ಟ್, ನೀಲಿ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ.

 

Karnataka election/  ಕಡೆಯ ಆಟ... ಕೊನೆಯ ಪ್ರಚಾರ... ಸ್ಟಾರ್​ ಅಭ್ಯರ್ಥಿ,  ಸ್ಟಾರ್​ ಪ್ರಚಾರ/ ಸ್ವಾಭಿಮಾನ/ ಶಾಂತಿಯ ನಡಿಗೆ! ಹೇಗಿತ್ತು ಪ್ರಚಾರ ಇಲ್ಲಿದೆ ವಿವರ 

 ವಿವಿಧ ದಿನಾಂಕಗಳಂದು ಕಾಣೆಯಾದ ಇವರು ಎಲ್ಲಿಯಾದರೂ ಕಂಡು ಬಂದಲ್ಲಿ ಹರಿಹರ ನಗರ ಪೊಲೀಸ್ ಠಾಣೆ-08192-272016/ 9480803257, ದಾವಣಗೆರೆ-08192-253100/08192-253400 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.   

ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ/ ಇಬ್ಬರ ದುರ್ಮರಣ 



ಆಯನೂರು ಮಂಜುನಾಥ್ ಬಗ್ಗೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಸಂವಾದ ! ತಲೆ ತಗ್ಗಿಸಬೇಕು ಎಂದಿದ್ದೇಕೆ ಕೆಪಿಸಿಸಿ ಅಧ್ಯಕ್ಷ 

ಶಿವಮೊಗ್ಗ/ ಶಿವಮೊಗ್ಗ ಜೆಡಿಎಸ್​ ಅಭ್ಯರ್ಥಿ ಬಗ್ಗೆ ಕಾಂಗ್ರೆಸ್ ನಾಯಕರು ಮಾತನಾಡಿರುವ ವಿಡಿಯೋ ಇದೀಗ ಸದ್ದು ಮಾಡುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮತದಾರರ ಗಮನ ಸೆಳೆಯಲು ಪರಸ್ಪರ ಸಂವಾದ ನಡೆಸಿದ್ದರು. ಈ ಸಂವಾದ ಸಾಕಷ್ಟು ವಿಷಯಗಳನ್ನು ಹೊರಹಾಕಿತ್ತು. ಸಿಎಂ ನಾನು ಎನ್ನುವ ಪೈಪೋಟಿಯನ್ನು ಬದಿಗೊತ್ತಿದ ಈ ಸಂವಾದದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ರವರು ಸಿದ್ದರಾಮಯ್ಯರನ್ನ ಲೋಕಾರೂಡಿಯಾಗಿ ಮಾತನಾಡಿಸುತ್ತಾ ಟಿಕೆಟ್ ಹಂಚಿಕೆಯಿಂದ ಹಿಡಿದು ಯಾರು ಗೆಲ್ಲುತ್ತಾರೆ ಎಂಬುದರ ವರೆಗೂ ಚರ್ಚೆ ನಡೆಸಿದ್ದಾರೆ. 

ವಿಶೇಷ ಅಂದರೆ, ಈ ಚರ್ಚೆಯಲ್ಲಿ ಶಿವಮೊಗ್ಗದ ಜೆಡಿಎಸ್​ ಅಭ್ಯರ್ಥಿ ಆಯನೂರು ಮಂಜುನಾಥ್​ರವರ ಹೆಸರು ಸಹ ಪ್ರಸ್ತಾಪವಾಗಿದೆ. ಇಬ್ಬರ ನಡುವಿನ ಮಾತುಕತೆಯ ನಡುವೆ,  ಪಾಪ ಅವರು ದಳಕ್ಕೆ ಹೋಗಿ ನಿಂತಿದ್ಧಾರೆ ಎಂದು ಡಿಕೆ ಶಿವಕುಮಾರ್​ರವರು ಮಾತು ಆರಂಭಿಸುತ್ತಾರೆ. ಆಯನೂರು ಮಂಜುನಾಥ್​ ಟಿಕೆಟ್ ಕೇಳಿದ್ರು ನಾವು ಕೊಡಲಿಲ್ಲ. ಆದರೆ ಅವರ ಜಾಹಿರಾತು ಇದ್ಯಲ್ಲ ಸರ್ ಶಿವಮೊಗ್ಗದ ಬಗ್ಗೆ,  ನಿಜವಾಗಲು ನಾವು ತಲೆ ತಗ್ಗಿಸಬೇಕು ಎಂದಿದ್ಧಾರೆ. ಅವರು ಟಿಕೆಟ್ ಕೇಳ್ತಿದ್ರು ನಾವು ಕೊಡ್ಲಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದಾಗ, ಸಿದ್ದರಾಮಯ್ಯರವರು ನಿಜವಾಗಲು ನನಗೂ ಅರ್ಪೋಚ್ ಮಾಡಿದ್ದ ಎಂದಿದ್ಧಾರೆ. 

ಕಾಂಗ್ರೆಸ್ ಬಿಡುಗಡೆ ಮಾಡಿರುವ ಸಂದರ್ಶನದ ಎರಡನೇ ಪಾರ್ಟ್​ನಲ್ಲಿ ಈ ಸಂಭಾಷಣೆಯಿದ್ದು ಆಯನೂರು ಮಂಜುನಾಥ್​ರವರ ಫೇಸ್​​ಬುಕ್​ ಪೇಜ್​ನಲ್ಲಿ ವಿಡಿಯೋವನ್ನು ಸಹ ಫೋಸ್ಟ್​ ಮಾಡಲಾಗಿದೆ.


ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ/ ಇಬ್ಬರ ದುರ್ಮರಣ

ತೀರ್ಥಹಳ್ಳಿ/ ಶಿವಮೊಗ್ಗ:  ಇಲ್ಲಿನ ದೇವಂಗಿ ಬಳಿ ಭೀಕರ ಅಪಘಾತವೊಂದು ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. 

Narendra modi/  ಪ್ರಧಾನಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಕುಂಸಿ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್

ಘಟನೆಯಲ್ಲಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ತೀರ್ಥಹಳ್ಳಿಯ ವಾಟಗಾರು ಸಮೀಪ ಘಟನೆ ಸಂಭವಿಸಿದೆ. 

ಕೊಪ್ಪದಿಂದ ತೀರ್ಥಹಳ್ಳಿಗೆ ಬರುವ ಮಾರ್ಗ ಇದಾಗಿದ್ದು, ಮಾರುತಿ ಸ್ವಿಫ್ಟ್ ಹಾಗೂ ಫಿಗೋ ಕಾರಿನ ನಡುವೆ ಡಿಕ್ಕಿಯಾಗಿದೆ. 

ಹೈವೆಯಲ್ಲಿ ನಿಯಂತ್ರಣ ತಪ್ಪಿದ ಕಾರು/ ಧರೆಗೆ ಗುದ್ದಿ ನುಜ್ಜುಗುಜ್ಜು! 

ಘಟನೆಯಲ್ಲಿ  ತೀರ್ಥಹಳ್ಳಿ ಸೊಪ್ಪುಗುಡ್ಡೆಯ ಡಾಕಪ್ಪ ಗೌಡ(70), ಶ್ರೀನಿವಾಸ್ ಗೌಡ ಶಿರೂರು (72) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಶ್ರೇಯಸ್ ಸೊಪ್ಪುಗುಡ್ಡೆ ಅವರಿಗೆ ಗಂಭೀರ ಗಾಯವಾಗಿದೆ. ಇನ್ನೊಂದು ಕಾರಿನಲ್ಲಿದ್ದ ಮೂವರು ಗಂಭೀರ ಗಾಯಗೊಂಡವರು ವೆನ್ಲಾಕ್ ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದು  ಚಿಕಿತ್ಸೆ ಪಡೆಯುತ್ತಿದ್ದಾರೆ. 


Narendra modi/  ಪ್ರಧಾನಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಕುಂಸಿ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್



ಶಿವಮೊಗ್ಗ/ ಪ್ರಧಾನಿ ನರೇಂದ್ರ ಮೋದಿ ಯವರು ಪಾಲ್ಗೊಂಡಿದ್ದ ಆಯನೂರು ಸಮಾವೇಶದ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣವೊಂದು ದಾಖಲಾಗಿದೆ. 

bhadravati /  ಭದ್ರಾವತಿ ವಿಧಾನಸಭಾ ಕ್ಷೇತ್ರ ! ಯಾರು ನಿರ್ಣಾಯಕ? ಕ್ಷೇತ್ರದಲ್ಲಿ ಹೇಗಿದೆ ಪೈಪೋಟಿ 

ಶಿವಮೊಗ್ಗದ ಕುಂಸಿ ಪೊಲೀಸ್ ಸ್ಟೇಷನ್  ನಲ್ಲಿ ಈ ಸಂಬಂಧ ಕೇಸ್ ಆಗಿದ್ದು, ಚುನಾವಣಾ ಫ್ಲೈಯಿಂಗ್ ಸ್ಕ್ವ್ಯಾಡ್​ ಅಧಿಕಾರಿ ನೀಡಿದ ದೂರಿನನ್ವಯ ಚುನಾವಣಾ ಏಜೆಂಟ್ ವಿರುದ್ಧ  ಎಫ್​ಐಆರ್ ಆಗಿದೆ. 

ನಡೆದಿದ್ದೇನು?

ದಿನಾಂಕ:-06-05-2023 ರಂದು  ಶಿವಮೊಗ್ಗ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರ -111 ವ್ಯಾಪ್ತಿಯಲ್ಲಿ ಬರುವ ಆಯನೂರು ವ್ಯಾಪ್ತಿಯಲ್ಲಿ,    ಬಿಜೆಪಿ ಪಕ್ಷದವರು ಪ್ರಧಾನ ಮಂತ್ರಿಯವರ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ ಸಂಬಂಧ ಪಟ್ಟಂತೆ ಕಟೌಟ್‌ ಹಾಗೂ ಪ್ಲಾಗ್ ಗಳನ್ನು ಕಟ್ಟುತ್ತಿದ್ದರು.

narendramodi/  ನರೇಂದ್ರ ಮೋದಿ ನಮಸ್ಕಾರವನ್ನು ಮನೆಮನೆಗೂ ತಲುಪಿಸಿ ಎಂದು ಟಾಸ್ಕ್​ ಕೊಟ್ಟ ಪ್ರಧಾನಿ!  ಮೋದಿ ಮಾತಿನ ಪೂರ್ತಿ ವಿವರ ಇಲ್ಲಿದೆ

 ಆಯನೂರು ಕೋಹಳ್ಳಿ, ಬಸ್‌ ನಿಲ್ದಾಣ, ವಿದ್ಯುತ್ ಕಂಬಗಳು ಅರಣ್ಯ ಇಲಾಖೆ ಸಂಬಂಧಿಸಿದ ಬೋರ್ಡಗಳಿಗೆ ಪಕ್ಷದ ಬಾವುಟಗಳನ್ನು ಕಟ್ಟಿದ್ದಾರೆ. ಅನುಮತಿ ಪಡೆಯದೇ  ಚುನಾವಣಾ ನೀತಿ ಸಂಹಿತೆ ಉಲಂಘಿಸಿಲಾಗಿದೆ ಎಂದು ಈ ಸಂಬಂಧ ದೂರು ನೀಡಲಾಗಿದೆ. 

  KARNATAKA OPEN PLACE DISFIGUREMENT ACT 1951 & 1981 (U/s-3); IPC 1860 (U/s-188)  ಅಡಿಯಲ್ಲಿ ಪ್ರಕರಣ ಸಂಬಂಧ ಕೇಸ್ ದಾಖಲಾಗಿದೆ.  


Bhadravati/ ಕ್ರಿಕೆಟ್ ಬೆಟ್ಟಿಂಗ್/ ನಾಲ್ವರ ವಿರುದ್ಧ ದಾಖಲಾಯ್ತು ಕೇಸ್​ !

ಭದ್ರಾವತಿ/ ಶಿವಮೊಗ್ಗ ಭದ್ರಾವತಿ ಓಲ್ಡ್​ ಟೌನ್​ ಪೊಲೀಸರು ಕ್ರಿಕೆಟ್ ಬೆಟ್ಟಿಂಗ್ ನಡೆಸ್ತಿದ್ದ ನಾಲ್ವರನ್ನ ಬಂಧಿಸಿದ್ದಾರೆ.

ಮಾಜಿ ಶಾಸಕರ ತೋಟದ ಮನೆಗೆ ನುಗ್ಗಿ ಒಂದು ಕೆಜಿ ಚಿನ್ನ ದರೋಡೆ! ಬಂದೂಕು ತೋರಿಸಿ 15 ಜನರ ತಂಡದ ಕೃತ್ಯ!

ಕಳೆದ ಆರನೇ ತಾರೀಖು, ಓಲ್ಡ್​ ಟೌನ್​ ಪಿಎಸ್​ಐಗೆ  ಬೆಟ್ಟಿಂಗ್ ನಡೆಯುತ್ತಿರುವುದರ ಬಗ್ಗೆ ಮಾಹಿತಿ ಬಂದಿದೆ.

ನಗರದ ಮಾಧವಾಚಾ‌ರ್​ ಸರ್ಕಲ್‌ ಭೂತನಗುಡಿ, ಟಿಕೆ ರಸ್ತೆ, ಗಾಂಧಿ ಸರ್ಕಲ್‌ ,ಗುಂಡುರಾವ್‌ ಶೆಡ್‌ ಮುಂತಾದ ಏರಿಯಾಗಳಲ್ಲಿ ಗಸ್ತು ಹೊರಟಿದ್ದಾರೆ. ಈ ವೇಳೇ  ಟಿಕೆ ರಸ್ತೆ ಫೈ ಓವರ್ ಕೆಳಗೆ ಕ್ರಿಕೆಟ್ ಬೆಟ್ಟಿಂಗ್ ನಡೆಯುತ್ತಿರುವುದು ಕಂಡು ಬಂದಿದೆ. ಸದ್ಯ ಪ್ರಕರಣ ಸಂಬಂಧ ಪೊಲೀಸರೇ ಕೋರ್ಟ್ ಪರ್ಮಿಶನ್​ ಪಡೆದು ಸಮುಟೋ ಕೇಸ್ ದಾಖಲಿಸಿದ್ದು, ಮಂಜುನಾಥ್​ ಸೇರಿದಂತೆ ನಾಲ್ವರ ವಿರುದ್ಧ  ಕಲಂ 78(1)(A) (VI) ಕೆ.ಪಿ,ಆಕ್ಟ್ ನಡಿಯಲ್ಲಿ ಎಫ್​ಐಆರ್​ ದಾಖಲಾಗಿದೆ.  


 

Read/ Bhadravati/  ಸಂಜೆ ಹೊತ್ತಿನಲ್ಲಿ ಮನೆಗೆ ನುಗ್ಗಿ ದರೋಡೆ! ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ರಾ ಪೊಲೀಸ್ 

Read/ Kichcha Sudeepa/  ನಟ ಸುದೀಪ್​ಗೆ ಬೆದಕಿಗೆ ಹಾಕಿದ್ದ ಆಪ್ತ ಡೈರಕ್ಟರ್​ ಬಂಧನ! ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ? 

Malenadutoday.com Social media