Sagar Assembly Constituency/ ಸಾಗರ ಕಾಗೋಡು ಬಳಗದಲ್ಲಿ ಭುಗಿಲೆದ್ದ ಆಕ್ರೋಶ! ಬೇಳೂರು ವಿರುದ್ದದ ಬಂಡಾಯದ ಅಭ್ಯರ್ಥಿ ಇವರೇನಾ?

Sagar Assembly Constituency/ There is resentment in the Congress party in Sagar taluk. Is he the rebel candidate against Belur?

Sagar Assembly Constituency/ ಸಾಗರ ಕಾಗೋಡು ಬಳಗದಲ್ಲಿ ಭುಗಿಲೆದ್ದ ಆಕ್ರೋಶ! ಬೇಳೂರು ವಿರುದ್ದದ ಬಂಡಾಯದ ಅಭ್ಯರ್ಥಿ ಇವರೇನಾ?
Sagar Assembly Constituency/ ಸಾಗರ ಕಾಗೋಡು ಬಳಗದಲ್ಲಿ ಭುಗಿಲೆದ್ದ ಆಕ್ರೋಶ! ಬೇಳೂರು ವಿರುದ್ದದ ಬಂಡಾಯದ ಅಭ್ಯರ್ಥಿ ಇವರೇನಾ?

ಕೆಪಿಸಿಸಿ ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲಿ ಸಾಗರ ವಿಧಾನ ಸಭಾ ಕ್ಷೇತ್ರಕ್ಕೆ ಬೇಳೂರು ಗೋಪಾಲಕೃಷ್ಣರವರ ಹೆಸರನ್ನು ಬಿಡುಗಡೆ ಮಾಡುತ್ತಿದ್ದಂತೆ ಕಾಂಗ್ರೆಸ್ ನಲ್ಲಿ ತೀವ್ರ ಅಸಮಾಧಾನ ಭುಗಿಲೆದ್ದಿದೆ. ಶಿವಮೊಗ್ಗದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹುನಗೋಡು ರತ್ನಾಕರ್ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಕಾಗೋಡು ತಿಮ್ಮಪ್ಪರನ್ನು ಒಂದು ಮಾತು ಕೇಳಬೇಕಿತ್ತು

ಸಾಗರ ವಿಧಾನಸಭಾ ಕ್ಷೇತ್ರಕ್ಕೆ  ಕೆಪಿಸಿಸಿ ನಾಯಕರು ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೆವು. ಆದರೆ ನಿರೀಕ್ಷೆ ಹುಸಿಯಾಗಿದೆ. ಹಿರಿಯ ರಾಜಕಾರಣಿಯಾಗಿರುವ ಕಾಗೋಡು ತಿಮ್ಮಪ್ಪನವರು ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದರು. ಅವರ ಮಗಳು ರಾಜನಂದಿಯವರು ಸಹ ಅರ್ಜಿಸಲ್ಲಿದ್ದರು. ಅಭ್ಯರ್ಥಿ ಆಯ್ಕೆ ವಿಚಾರ ಏನೇ ಆಗಲಿ. ರಾಜ್ಯ ನಾಯಕರು ಕಾಗೋಡು ತಿಮ್ಮಪ್ಪರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗೋಪಾಲಕೃಷ್ಣ ಬೇಳೂರುರವರಿಗೇನೇ ಟಿಕೆಟ್ ನೀಡಬಹುದಿತ್ತು.  ಇದೇ ವಿಚಾರವನ್ನು ಕಾಗೋಡು ತಿಮ್ಮಪ್ಪನವರ ನೇತ್ರತ್ವದಲ್ಲಿ ಟಿಕೆಟ್​ಗೆ ಅರ್ಜಿ ಸಲ್ಲಿಸಿದ ಮುಖಂಡರೆಲ್ಲರೂ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯನವರನ್ನು ಭೇಟಿ ಮಾಡಿ, ಸಾಗರ ಕ್ಷೇತ್ರದ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೆವು.

ಈಗಲೂ ಕಾಲ ಮಿಂಚಿಲ್ಲ

ಯಾರನ್ನೆ ಅಭ್ಯರ್ಥಿ ಮಾಡುವುದಾದರೂ  ಕಾಗೋಡು ತಿಮ್ಮಪ್ಪನವರ ಬಳಿ ಚರ್ಚಿಸಿಯೇ ಮುಂದಿನ ತೀರ್ಮಾನ ಕೈಗೊಳ್ಳಿ,  ಗೋಪಾಲಕೃಷ್ಣ ಬೇಳೂರುರವರಿಗೆ ಟಿಕೆಟ್ ಕೊಡುವುದು ಬೇಡ, ಅವರ ಹೆಸರನ್ನು ಪೆಂಡಿಂಗ್ ಇಡುವಂತೆ ಮನವಿ ಮಾಡಿದ್ದೆವು. ಅದಕ್ಕೆ ನಾಯಕರುಗಳು ಸಹ ಒಪ್ಪಿಗೆ ನೀಡಿದ್ದರು. ಆದ್ರೆ ಎರಡೇ ದಿನದಲ್ಲಿ ಬೇಳೂರು ಗೋಪಾಲಕೃಷ್ಣರ ಹೆಸರನ್ನು  (Karnataka Congress Candidate List)ಮೊದಲ ಪಟ್ಟಿಯಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಹಾಗೂ ಟಿಕೆಟ್ ಆಕಾಂಕ್ಷಿಗಳಿಗೆ ನಿರಾಸೆಯನ್ನುಂಟು ಮಾಡಿದೆ. ಈಗಲೂ ಕಾಲ ಮಿಂಚಿಲ್ಲ. ಗೋಪಾಲಕೃಷ್ಣರ ಹೆಸರನ್ನು ಪೆಂಡಿಂಗ್ ಇಟ್ಟು, ಕಾಗೋಡು ತಿಮ್ಮಪ್ಪನವರ ಮುಖಾಂತರವೇ ಕ್ಷೇತ್ರದ ಬಗ್ಗೆ ಸಮಾಲೋಚನೆ ನಡೆಸಿ  ರಾಜ್ಯ ನಾಯಕರುಗಳು ಮುಂದಿನ ತೀರ್ಮಾನವನ್ನು ಕೈಗೊಳ್ಳಲಿ ಎಂದು ಹುನಗೋಡು ರತ್ನಾಕರ್ ಹೇಳಿದ್ದಾರೆ.

ಕಾಗೋಡು ನಿರ್ಲಕ್ಷ್ಯ ಪಕ್ಷಕ್ಕೆ ಅಪಾಯಕಾರಿ

ಕಾಗೋಡು ತಿಮ್ಮಪ್ಪರನ್ನು ಕಡೆಗಣಿಸಿದರೆ ಜಿಲ್ಲಾ ಕಾಂಗ್ರೆಸ್ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಅದಕ್ಕೆ ನಾಯಕರುಗಳು ಅವಕಾಶ ಮಾಡಿಕೊಡಬಾರದು. ಹಾಗೊಂದು ಪಕ್ಷದಲ್ಲಿ ಕಾಗೋಡು ತಿಮ್ಮಪ್ಪನವರ ಮೂಲಕವೇ ಬೇಳೂರು ಗೋಪಾಲಕೃಷ್ಣ ರ ಹೆಸರು ಅಂತಿಮಗೊಂಡರೆ ತಮ್ಮ ಮುಂದಿನ ನಡೆಯ ಬಗ್ಗೆ ಸ್ಥಳೀಯ ಕಾರ್ಯಕರ್ತರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಹುನಗೋಡು ರತ್ನಾಕರ್ ಹೇಳಿದ್ದಾರೆ. ಆ ಮೂಲಕ ಸಾಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಎಂದು ಪರೋಕ್ಷವಾಗಿ ಸೂಚಿಸಿದ್ದಾರೆ. 

ಗೆಲುವಿನ ನಿವೃತ್ತಿ ನೀಡಬೇಕಿತ್ತು

ಇನ್ನು ರವಿ ಕುಗ್ವೆ ಮಾತನಾಡಿ, ಕಾಗೋಡು ತಿಮ್ಮಪ್ಪ ಹೋರಾಟದಿಂದ ಬಂದವರು, ಪಕ್ಷ ಸಂಘಟನೆಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಇಂತಹ ನಾಯಕರುಗಳಿಗೆ ಟಿಕೆಟ್ ಕೊಡದೆ, ಪಕ್ಷಾಂತರಿಯಾಗಿ ಬಂದಿರುವ ಬೇಳೂರು ಗೋಪಾಲಕೃಷ್ಣರಿಗೆ ಟಿಕೆಟ್ ನೀಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಕಾಗೋಡು ತಿಮ್ಮಪ್ಪನವರ ರಾಜಕೀಯ ಜೀವನ ಸೋಲಿನಲ್ಲಿ ಅಂತ್ಯವಾಗಬಾರದು. ಇಳಿ ವಯಸ್ಸಿನಲ್ಲಿ ಅವರನ್ನು ಕ್ಷೇತ್ರದ ಜನತೆ ಗೆಲ್ಲಿಸುವ ಮೂಲಕ ರಾಜಕೀಯ ನೀವೃತ್ತಿಯಾಗಬೇಕಿತ್ತು ಎಂಬ ಬಯಕೆ ಎಲ್ಲರಲ್ಲಿದೆ. ಆದರೆ ತೀವ್ರ ವಿರೋಧದ ನಡುವೆಯೂ ಕಾಗೋಡು ತಿಮ್ಮಪ್ಪರನ್ನು ಕಡೆಗಣಿಸಿ ಬೇಳೂರು ಗೋಪಾಲಕೃಷ್ಣಗೆ ಟಿಕೆಟ್ ನೀಡಿರುವುದರ ಹಿಂದೆ ಯಾವ ಉದ್ದೇಶವಿದೆ ಎಂದು ಪ್ರಶ್ನಿಸಿದ ಅವರು ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್ ಹೆಸರು ಪ್ರಕಟಿಸಬಹುದಿತ್ತು ಎಂದು ಉದಾಹರಣೆ ನೀಡಿದರು. 

ತೀರ್ಥಹಳ್ಳಿಗೊಂದು , ಸಾಗರಕ್ಕೊಂದು  

ತೀರ್ಥಹಳ್ಳಿಯಲ್ಲಿ ಅಲ್ಲಿ ಕಾಂಪಿಟೇಷನ್ ಇರುವುದೇ ಇಬ್ಬರಿಗೆ .ಏಳು ಜನ ಆಕಾಂಕ್ಷಿಗಳು ಇರುವ ಸಾಗರ ಕ್ಷೇತ್ರಕ್ಕೆ ಮೊದಲ ಪಟ್ಟಿಯಲ್ಲಿ ಬೇಳೂರು ಗೋಪಾಲಕೃಷ್ಣರವರ ಹೆಸರನ್ನು ಪ್ರಕಟಿಸುವ ಕೆಪಿಸಿಸಿ ನಾಯಕರು ತೀರ್ಥಹಳ್ಳಿಯದ್ದನ್ನು ಕೂಡ ಪ್ರಕಟಿಸಬಹುದಿತ್ತಲ್ಲವೇ.ಕ್ಷೇತ್ರದಲ್ಲಿ ಸ್ಥಳೀಯ ಮುಖಂಡರ ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಟಿಕೆಟ್ ಘೋಷಣೆ ಮಾಡಿದರೆ ಅದರ ಪರಿಣಾಮ ಚುನಾವಣೆಯಲ್ಲಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Read / *comrade lingappa shivamogga/ ಈ ವಿಶೇಷ ಮಹನೀಯರು ಇನ್ನು ಮಾತಿಗೆ ಸಿಗರು! ಕ್ರಾಮೆಡ್​ ಲಿಂಗಪ್ಪರ ಹೆಗ್ಗಳಿಕೆ ಎಂತದ್ದು ಗೊತ್ತಾ*

Read / ಗೊಂಬೆ ಭವಿಷ್ಯದಲ್ಲಿ ರಾಜಕಾರಣದ ಬಲಾವಣೆಯ ಸುಳಿವು! ಬಿಎಸ್​ವೈರ ಅಧಿಕಾರದ ಬಗ್ಗೆಯು ತಿಳಿಸಿದ್ದ ಯುಗಾದಿ ಅಮಾವಾಸ್ಯೆಯ ಹೇಳಿಕೆ!

Read / ಇನ್ನೊಂದು ವಾರದಲ್ಲಿ ವಿಮಾನ ಹಾರಾಟ! ಟಿಕೆಟ್​ಗೆ ₹500 ಸಬ್ಸಿಡಿ! ಏಕೆಗೊತ್ತಾ?

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today, KPCC, Shivamogga, Sagar Assembly Constituency, Sagar Taluk, Constituency, Assembly Elections 2023, Belur Gopalakrishna, Siddaramaiah, DK Shivakumar, Kagodu Thimmappa, Hunagodu Ratnakar, Mallikarjun Hakre, Ravi Kugve, Rajnandini, Congress Party, Congress Leaders, Congress Candidate List ಕೆಪಿಸಿಸಿ, ಶಿವಮೊಗ್ಗ, ಸಾಗರ ವಿಧಾನಸಭಾ ಕ್ಷೇತ್ರ, ಸಾಗರ ತಾಲ್ಲೂಕು, ಕ್ಷೇತ್ರ, ವಿಧಾನಸಭೆ ಚುನಾವಣೆ 2023 , ಬೇಳೂರು ಗೋಪಾಲಕೃಷ್ಣ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಕಾಗೋಡು ತಿಮ್ಮಪ್ಪ, ಹುನಗೋಡು ರತ್ನಾಕರ್, ಮಲ್ಲಿಕಾರ್ಜುನ್​ ಹಕ್ರೆ, ರವಿ ಕುಗ್ವೆ, ರಾಜನಂದಿನಿ, ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ನಾಯಕರು, ಕಾಂಗ್ರೆಸ್ ಕ್ಯಾಂಡಿಡೇಟ್ ಲಿಸ್ಟ್  congress candidates list,congress first list of candidates,congress releases list of 124 candidates,congress,congress 124 candidates,congress high command,congress candidates for 2023 election,first list of congress candidates,congress candidates,congress candidate list,congress first list,congress ticket list,congress candidates list 2023,karnataka congress,congress ticket aspirantsರಾಜ್ಯ ವಿಧಾನಸಭಾ ಚುನಾವಣೆ, (Karnataka Election 2023) ಕಾಂಗ್ರೆಸ್​ (Congress)  (Candidate List)   (KPCC) ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar).