ಕಾಂಗ್ರೆಸ್ ಪಕ್ಷದ ಸಭೆಗೆ ಏಕೆ ಹೋಗಿದ್ದೆ ಎಂದು ಹಲ್ಲೆ! ದಾಖಲಾಯ್ತು ಕೇಸ್

Man attacked for attending Congress party meeting Case registered

ಕಾಂಗ್ರೆಸ್ ಪಕ್ಷದ ಸಭೆಗೆ ಏಕೆ ಹೋಗಿದ್ದೆ ಎಂದು ಹಲ್ಲೆ! ದಾಖಲಾಯ್ತು ಕೇಸ್

KARNATAKA NEWS/ ONLINE / Malenadu today/ May 5, 2023 GOOGLE NEWS

ಶಿಕಾರಿಪುರ/ ಶಿವಮೊಗ್ಗ/ ಜಿಲ್ಲೆ ರಾಜಕೀಯದ ಜಿದ್ದಾಜಿದ್ದಿ ಜೋರಾಗಿದೆ. ಎಲೆಕ್ಷನ್​ ಪ್ರಚಾರದಲ್ಲಿ ವೈಮನಸ್ಯಗಳು ಸಹ ಹೆಚ್ಚಾಗುತ್ತಿದೆ. 

ಇದಕ್ಕೆ ಸಾಕ್ಷಿ ಎಂಬಂತೆ, ಶಿಕಾರಿಪುರದಲ್ಲಿ ಒಂದೇ ಕುಟುಂಬದವರ ನಡುವೆ ಕಾಂಗ್ರೆಸ್​ ಪಕ್ಷದ ಸಭೆಗೆ ಹೋಗಿದ್ದ ವಿಚಾರಕ್ಕೆ ಜಗಳವಾಗಿ ಹಲ್ಲೆ ಯಾಗಿದೆ. ಈ ಸಂಬಂಧ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್ ದಾಖಲಾಗಿದೆ. 

ದಿನಾಂಕ:01-05-2023 ರಂದು  ಇಲ್ಲಿನ ಶೆಟ್ಟಿಹಳ್ಳಿ  ಗ್ರಾಮದಲ್ಲಿ ನಡೆದ ಘಟನೆ ಇದಾಗಿದೆ.  ಇಲ್ಲಿಯ ನಿವಾಸಿ ಕುಮಾರ್​ ಎಂಬವರು, ನವೀನ್ ಎಂಬವರ ಬಳಿಗೆ ಬಂದು ಅಂಗಡಿ ಹಾಗೂ ಮನೆ ಬಿಟ್ಟುಕೊಡುವಂತೆ ಹೇಳಿದ್ದಾರೆ. 

ಈ ವೇಳೆ ನವೀನ್ ಶುಂಠಿ ಜಮೀನು ಬಿಟ್ಟುಕೊಡುವಂತೆ ಕೇಳಿದ್ದಾರೆ. ಆಗ ಕುಮಾರ್​ ನೀನೆಕೆ ಕಾಂಗ್ರೆಸ್ ಪಕ್ಷದ ಸಭೆಗೆ ಹೋಗಿದ್ದೆ ಎಂದು ಬೈದು ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. 

ಇದೇ ವಿಚಾರದಡಿಯಲ್ಲಿ ಸೆಕ್ಷನ್  IPC 1860 (U/s-504,324,506)  ಅಡಿಯಲ್ಲಿ ಕೇಸ್ ದಾಖಲಾಗಿದ್ದು, ಪೊಲೀಸರು ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದಾರೆ.  

ಶಿವಮೊಗ್ಗ ಜಿಲ್ಲೆ ಮಾಣಿ ಡ್ಯಾಂ ಬಳಿ ಕರಿಚಿರತೆ ಪ್ರತ್ಯಕ್ಷ! ನಾಯಿಯನ್ನ ಬೇಟೆಯಾಡಿದ ದೃಶ್ಯ ಸೆರೆ 

ಯಡೂರು ಶಿವಮೊಗ್ಗ/ ಇಲ್ಲಿನ  ಮಾಣಿ ಡ್ಯಾಂ ಬಳಿಯಲ್ಲಿ ಮತ್ತೆ ವನ್ಯಮೃಗವೊಂದು ನಾಯಿಯನ್ನ ಬೇಟೆಯಾಡಿದೆ. ಈ ಹಿಂದೆ ಹೊಸಂಗಡಿಯ ವಾರಾಹಿ ಪವರ್ ಹೌಸ್ ಭದ್ರತಾ ಕೊಠಡಿಯ ಆವರಣದಲ್ಲಿ  ಚಿರತೆಯೊಂದು ನಾಯಿಯನ್ನ ಬೇಟೆಯಾಡಲು ,ಗೇಟಿನ ಬಳಿ ದಾಳಿ ನಡೆಸಿತ್ತು. ಈ ವೇಳೆ ಅಲ್ಲಿಯ ಕಾವಲುಗಾರ, ಚಿರತೆಯನ್ನ ಓಡಿಸಿ ನಾಯಿಯನ್ನ  ರಕ್ಷಿಸಿದ್ದರು. 

ಇದೀಗ ಅಂತುಹುದ್ದೆ ಘಟನೆಯೊಂದು ಮಾಣಿ ಡ್ಯಾಂ ಲೆಫ್ಟ್ bank ಸೆಕ್ಯೂರಿಟಿ ಚೆಕ್ ಪೋಸ್ಟ್ ಬಳಿ  ಸಂಭವಿಸಿದೆ. ಚೆಕ್​ಪೋಸ್ಟ್ ಬಳಿ ಮಲಗಿದ್ದ ನಾಯಿಯನ್ನು ಕರಿಚಿರತೆಯೊಂದು ಹೊಂಚು ಹಾಕಿ ಬೇಟೆಯಾಡಿದೆ. ಸಿಸಿ ಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ಘಟನೆಯು ದಿನಾಂಕ 03/05/23ರಂದು ಬೆಳಗಿನ ಜಾವ 02:23 ರ ಸುಮಾರಿಗೆ ನಡೆದಿದೆ. 

ಕಬ್ಬಿಣ  ಕತ್ತರಿಸುವಾಗ ಹಾರಿದ ಕಿಡಿ ಅಂಗಡಿಯನ್ನೆ ಸುಟ್ಟಿತು! 

ಆನವಟ್ಟಿ/ ಸೊರಬ/ ಕಟ್ಟಡ ಸಾಮಗ್ರಿಗಳನ್ನು ಮಾರುವ ಅಂಗಡಿಯೊಂದಕ್ಕೆ ಬೆಂಕಿ ಬಿದ್ದು ಬರೋಬ್ಬರಿ 20 ಲಕ್ಷ ರೂಪಾಯಿಗೂ ಹೆಚ್ಚು ನಷ್ಟವಾದ ಘಟನೆ ಆನವಟ್ಟಿಯಲ್ಲಿ ಸಂಭವಿಸಿದೆ. 

ಇಲ್ಲಿನ ಶಿವಶಕ್ತಿ ಟೇಡರ್‌ ಅಂಗಡಿ, ಅಗ್ನಿ ಆಕಸ್ಮಿಕದಲ್ಲಿ ಸುಟ್ಟು ಹೋಗಿದೆ. 20 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ. ಟೈರ್, ಪೇಂಟ್, ಆಯಿಲ್, ಕಬ್ಬಿಣ ಮಾರಾಟ ಮಾಡುವ ಅ೦ಗಡಿ ಇದಾಗಿದೆ.

ಕಬ್ಬಿಣವನ್ನು ಕತ್ತರಿಸುವ ವೇಳೆ ಹಾರಿದ ಬೆಂಕಿ ಕಿಡಿ, ಕೆಮಿಕಲ್ ಹಾಗಾ ಆಯಿಲ್​ಗೆ ತಾಗಿ ಬೆಂಕಿ ಹೊತ್ತಿಕೊಂಡಿರಬಹುದು ಎನ್ನಲಾಗುತ್ತಿದೆ. ಇನ್ನೂ ಘಟನೆ ಬೆನ್ನಲ್ಲೆ ಅಗ್ನಿಶಾಮಕ ವಾಹನಕ್ಕೆ ಕರೆ ಮಾಡಲಾಯ್ತಾದರೂ, ಸ್ಥಳೀಯವಾಗಿ ಒಂದು ಬೆಂಕಿ ನಂದಿಸುವ ವಾಹನವಿಲ್ಲ. ಸೊರಬದಿಂದ ವಾಹನ ಬಂದು ಬೆಂಕಿ ನಂದಿಸುವ ಹೊತ್ತಿಗೆ, ಎಲ್ಲವೂ ಸುಟ್ಟುಹೋಗಿದ್ದವು. ಇದು ಸ್ಥಳೀಯರ ಆಕ್ರೋಶಕ್ಕೂ ಕಾರಣವಾಗಿದೆ. ಸ್ಥಳೀಯವಾಗಿಯೇ ಒಂದು ಅಗ್ನಿಶಾಮಕ ದಳದ ವಾಹನದ ವ್ಯವಸ್ಥೆಯನ್ನು ಜನಪ್ರತಿನಿಧಿಗಳು ಮಾಡಬೇಕು ಎಂದು ಒತ್ತಾಯಿಸಿದ್ದಾರೆ. 




 

Malenadutoday.com Social media