ಮೇ ಏಳನೇ ತಾರೀಖು ವೇತನ ಸಹಿತ ರಜೆ ಕೊಡದಿದ್ದರೇ ಎಚ್ಚರಿಕೆ | ಕಾರಣವೇನು ಗೊತ್ತಾ?

Warning if May 7th is not given holiday with pay Do you know the reason? shivamogga election candidates, shivamogga election candidates list 2024 , shivamogga election commission

ಮೇ ಏಳನೇ ತಾರೀಖು  ವೇತನ ಸಹಿತ ರಜೆ ಕೊಡದಿದ್ದರೇ ಎಚ್ಚರಿಕೆ |  ಕಾರಣವೇನು ಗೊತ್ತಾ?
shivamogga election candidates, shivamogga election candidates list 2024 , shivamogga election commission

SHIVAMOGGA | MALENADUTODAY NEWS | May 2, 2024  

ಶಿವಮೊಗ್ಗ ಜಿಲ್ಲಾದ್ಯಂತ ಮೇ 7 ರಂದು ಲೋಕಸಭಾ ಚುನಾವಣೆಯ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅಂದು ವೇತನ ಸಹಿತ ರಜೆ ನೀಡಲಾಗಿದೆ. 

 

ರಾಜ್ಯದ ಎಲ್ಲಾ ಕಾರ್ಖಾನೆಗಳು, ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು ಮತ್ತು ಇತರೆ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ವೇತನ ಸಹಿತ ರಜೆ ಘೋಷಿಸಲಾಗಿದೆ. 

 

ಸಂವಿಧಾನಾತ್ಮಕ ಹಕ್ಕಾದ ಮತವನ್ನು ಚಲಾಯಿಸುವುದಕ್ಕಾಗಿ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮಾಲೀಕರು, ನಿಯೋಜಕರು ಕಾರ್ಮಿಕರಿಗೆ ಮತದಾನದಲ್ಲಿ ಪಾಲ್ಗೊಳ್ಳಲು ದೇಶನ ಸಹಿತ ರಜೆ ನೀಡುವಂತೆ ಹಾಗೂ ವೇತನ ಸಹಿತ ರಜೆ ಆದೇಶ ಉಲ್ಲಂಘಿಸಿದ ಸಂಸ್ಥೆ ಹಾಗೂ ನಿಯೋಜಕರ ವಿರುದ್ಧನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಮಿಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.