ಮುಂದಿನ ಸಲ ಕುಮಾರಸ್ವಾಮಿಯೇ ಸಿಎಂ?/ಶಿವಮೊಗ್ಗದ ಈ ದೇವಾಲಯದಲ್ಲಿ ಸಿಕ್ಕಿತು ಹೂವಿನ ಪ್ರಸಾದ? ಏನಿದು ವಿಶೇಷ ಇಲ್ಲಿದೆ ನೋಡಿ

ಪೂಜೆ ತೆಗೆದುಕೊಂಡ ಅರ್ಚಕರು, ಅರ್ಚನೆಯ ಮಂತ್ರವನ್ನು ಹೇಳುತ್ತಿದ್ದರು, ಕಾರ್ಯಕರ್ತರು ಹಾಗೂ ಮುಖಂಡರು ಕೂಡ ಕುಮಾರಣ್ಣನಿಗೆ ಒಳ್ಳೆಯದಾಗಲಿ ಎಂದು ಕೈ ಮುಗಿದು ಬೇಡಿಕೊಳ್ತಿದ್ರು.

ಮುಂದಿನ ಸಲ ಕುಮಾರಸ್ವಾಮಿಯೇ ಸಿಎಂ?/ಶಿವಮೊಗ್ಗದ ಈ ದೇವಾಲಯದಲ್ಲಿ ಸಿಕ್ಕಿತು ಹೂವಿನ ಪ್ರಸಾದ? ಏನಿದು ವಿಶೇಷ ಇಲ್ಲಿದೆ ನೋಡಿ
ಪಿಳ್ಳಂಗೆರೆ ದೇವಾಲಯದಲ್ಲಿ ಹೂವಿನ ಪ್ರಸಾದ ಆಗುತ್ತಿರುವುದು

ಮಾಜಿ ಸಿಎಂ ಜೆಡಿಎಸ್​ ವರಿಷ್ಟ ಹೆಚ್​.ಡಿ.ಕುಮಾರಸ್ವಾಮಿ (HD Kumaraswamy,) ರಾಜ್ಯದೆಲ್ಲೆಡೆ ಪ್ರವಾಸ ಮಾಡುತ್ತಿದ್ದಾರೆ. ರಾಷ್ಟ್ರೀಯ ಪಕ್ಷಗಳಿಗೂ ಮೊದಲೇ ಅಭ್ಯರ್ಥಿಗಳನ್ನ ಆಯ್ಕೆ ಮಾಡಿಕೊಂಡು ಚುನಾವಣಾ ರಥಯಾತ್ರೆ ನಡೆಸ್ತಿದ್ದಾರೆ. ಇದರ ಮಧ್ಯೆ ಅವರ ಹುಟ್ಟುಹಬ್ಬವನ್ನು ಜೆಡಿಎಸ್​ನ ಕಾರ್ಯಕರ್ತರು ಅದ್ದೂರಿಯಾಗಿ ಆಚರಿಸ್ತಿದ್ದಾರೆ.

ಇದನ್ನು ಸಹ ಓದಿ : ರೈತರೇ ಎಚ್ಚರ, ಜೇಡಿಮಣ್ಣು ಕೊಟ್ಟು ಗೊಬ್ಬರ ಅಂತಾರೆ ...ಹುಷಾರ್..ಇಲ್ಲಿದೆ ನೋಡಿ ಸಾಕ್ಷಿ 

ಇದಕ್ಕೆ ಪೂರಕವಾಗಿ ಶಿವಮೊಗ್ಗದ ಪಿಳ್ಳಂಗೆರೆಯಲ್ಲಿಯು ಮಾಜಿ ಶಾಸಕಿ ಶಾರದಾ ಪೂರ್ಯಾನಾಯ್ಕ್​ (Sharada Puryanaik,) ಹಾಗೂ ಜೆಡಿಎಸ್​ ಕಾರ್ಯಕರ್ತರು ಪಿಳ್ಳಂಗೆರೆಯ ಲಕ್ಷ್ಮೀವೆಂಕಟರಮಣ ದೇವಾಲಯದಲ್ಲಿ ವಿಶೇಷ ಅರ್ಚನೆ ಕೊಟ್ಟಿದ್ದರು. ಈ ವೇಳೇ ದೇವರಿಂದ ಹೂವಿನ ಪ್ರಸಾದವಾಗಿದೆ. 

ಇದನ್ನು ಸಹ ಓದಿ : ಶಿವಮೊಗ್ಗದ ಕಾಚಿನ ಕಟ್ಟೆ ಸಮೀಪ ಬೈಕ್​ ಕಾರು ಡಿಕ್ಕಿ/ ಸವಾರನ ಕಾಲು ಕಟ್

ಪೂಜೆ ತೆಗೆದುಕೊಂಡ ಅರ್ಚಕರು, ಅರ್ಚನೆಯ ಮಂತ್ರವನ್ನು ಹೇಳುತ್ತಿದ್ದರು, ಕಾರ್ಯಕರ್ತರು ಹಾಗೂ ಮುಖಂಡರು ಕೂಡ ಕುಮಾರಣ್ಣನಿಗೆ ಒಳ್ಳೆಯದಾಗಲಿ ಎಂದು ಕೈ ಮುಗಿದು ಬೇಡಿಕೊಳ್ತಿದ್ರು. ಈ ವೇಳೆ ಏರಡು ಭಾರಿ ವೆಂಕರಮಣ ಸ್ವಾಮಿಯ ಬಲಭಾಗದಿಂದ ಹೂವಿನ ಪ್ರಸಾಧವಾಗಿದೆ. ಇದು ಶುಭ ಸಂಕೇತ, ಹೀಗಾಗಿ ಮುಂದಿನ ಸಲ ಕುಮಾರಸ್ವಾಮಿ ಸಿಎಂ ಆಗೋದು ಗ್ಯಾರಂಟಿ ಅಂತಿದ್ದಾರೆ ಕಾರ್ಯಕರ್ತರು ಹಾಗೂ ಮುಖಂಡರು. 

ಇದನ್ನು ಸಹ ಓದಿ : ಪ್ರಯಾಣಿಕರ ಗಮನಕ್ಕೆ/ ಶಿವಮೊಗ್ಗ ಟೌನ್​ - ಎಂಜಿಆರ್​ ಚೆನ್ನೈ ಸೆಂಟ್ರಲ್ ಸ್ಪೆಷಲ್​ ಟ್ರೈನ್​ ಸೌಲಭ್ಯ ವಿಸ್ತರಣೆ/ ವಿವರ ಇಲ್ಲಿದೆ ಓದಿ

ಪಿಳ್ಳಂಗೆರೆ ಲಕ್ಷ್ಮೀ ವೆಂಕಟರಮಣ ದೇವಾಲಯ ಪುರಾತನವಾಗಿದ್ದು, ಅದರದ್ದೇ ವೈಶಿಷ್ಟ್ಯವನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಹೂವಿನ ಪ್ರಸಾದವನ್ನು ಜೆಡಿಎಸ್​ ಮುಖಂಡರು ಮುನ್ಸೂಚನೆಯೇಂದೇ ಭಾವಿಸ್ತಿದ್ದಾರೆ. 

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link