KARNATAKA NEWS/ ONLINE / Malenadu today/ Oct 30, 2023 SHIVAMOGGA NEWS
KIMMANE RATNAKAR | ಶಿವಮೊಗ್ಗ ಕಾಂಗ್ರೆಸ್ನಲ್ಲಿ ಎರಡು ಮೂರು ದಿನಗಳಿಂದ ಭಿನ್ನ ಬೆಳವಣಿಗೆಗಳು ನಡೆಯುತ್ತಿವೆ. ಇದರ ನಡುವೆ ಮಾಜಿ ಸಚಿವ ಹಿರಿಯ ಮುಖಂಡರ ಕಿಮ್ಮನೆ ರತ್ನಾಕರ್ರವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡುತ್ತಾರೆ ಎಂಬ ಮಾತುಗಳು ಕೇಳಿಬಂದಿದೆ.
ಈ ಬಗ್ಗೆ ರಾಜ್ಯಸರ್ಕಾರದ ಮುಖಂಡರ ನಡುವೆ ಚರ್ಚೆ ನಡೆದಿದೆ ಎನ್ನಲಾಗಿದೆ. ಸಿಎಂ ಹಾಗೂ ಡಿಸಿಎಂ ಒಳಗೊಂಡ ಮುಖಂಡರು ಈ ಬಗ್ಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಸ್ಪಷ್ಟತೆ ಇನ್ನೂ ಸಹ ಲಭ್ಯವಾಗಿಲ್ಲ.
READ : INSTGRAM ಆ್ಯಪ್ ನಿಂದ ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ವಿಡಿಯೋ ಕಾಲ್! ಏನಿದು ಕೇಸ್
ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗದಲ್ಲಿ ಗೆಲ್ಲಲೇಬೇಕು ಎಂದು ಕಾಂಗ್ರೆಸ್ ಮುಖಂಡರು ಈಗಾಗಲೇ ತಂತ್ರಗಾರಿಕೆಯನ್ನು ಆರಂಭಿಸಿದ್ದಾರೆ. ಆ ನಿಟ್ಟಿನಲ್ಲಿ ಕಿಮ್ಮನೆಯವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ನೀಡಿದರೆ, ಅದರ ಪರಿಣಾಮ ಕ್ಷೇತ್ರದಲ್ಲಿ ಆಗಬಹುದು ಎಂಬ ಯೋಜನೆ ಕಾಂಗ್ರೆಸ್ ಮುಖಂಡರದ್ದಾಗಿದೆ.
ಸದ್ಯದ ಮಾಹಿತಿ ಪ್ರಕಾರ, 25 ಹಾಲಿ ಶಾಸಕರ ಜೊತೆಯಲ್ಲಿ ಐವರು ಮಾಜಿ ಶಾಸಕರ ಹೆಸರುಗಳು ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದು ಸದ್ಯದಲ್ಲಿ ಈ ಬಗ್ಗೆ ತೀರ್ಮಾನ ಹೊರಬೀಳುವ ಸಾಧ್ಯತೆ ಇದೆಯಂತೆ.
