KARNATAKA NEWS/ ONLINE / Malenadu today/ Oct 30, 2023 SHIVAMOGGA NEWS
SHIVAMOGGA JAIL | ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ಇತ್ತೀಚೆಗಷ್ಟೆ ಪೊಲೀಸ್ ರೇಡ್ ನಡೆದಿತ್ತು. ಈ ವೇಳೆ ಮಂಗಳೂರು ಸ್ಪೆಷಲ್ ಬೀಡಿ ಹಾಗೂ ಬೆಂಕಿ ಪೊಟ್ಟಣ ಮತ್ತು ಕಿಪ್ಯಾಡ್ ಮೊಬೈಲ್ ಪತ್ತೆಯಾಗಿತ್ತು.
ಇದರ ಬೆನ್ನಲ್ಲೆ ಇದೀಗ ಜೈಲ್ ಅಧೀಕ್ಷಕಿ ಜೈಲ್ನಲ್ಲಿ ಇನ್ಸ್ಟಾಗ್ರಾಮ್ ಆ್ಯಪ್ ಮೂಲಕ ವಿಡಿಯೋ ಕಾಲ್ ಮಾಡಿರುವ ಬಗ್ಗೆ ದೂರು ದಾಖಲಿಸಿದ್ದಾರೆ. ಶಿವಮೊಗ್ಗ ಜೈಲ್ ಯು ಟಿ ಪಿ ಬಂದಿಗಳಾದ 01)ಮುಭಾರಕ್ @ ಡಿಚ್ ಮುಬಾರಕ್ 02) ಸೈಯದ್ ಟಿಪ್ಪುಸುಲ್ತಾನ್ 03) ಶಾಬಾಜ್ ಷರೀಫ್ 04) ಜಬೀರ್ ಬಾಷಾ ವಿರುದ್ದ ಕೇಸ್ ದಾಖಲಾಗಿದೆ.
READ : ಕಾಮತ್ ಲೇ ಔಟ್ ನಲ್ಲಿ ತುಂಗಾನಗರ ಪೊಲೀಸ್ ಸ್ಟೇಷನ್ ಅಧಿಕಾರಿಗಳ ದಿಢೀರ್ ದಾಳಿ!
ಇವರು ಕಾರಾಗೃಹದ ಶರಾವತಿ ವಾರ್ಡನ ರೂಂ ನಂ 13 ರಲ್ಲಿ ದಿನಾಂಕ: 07/04/2023 ರಂದು ಸುಮಾರು ಸಂಜೆ 06-20 ಗಂಟೆ ಸಮಯದಲ್ಲಿ, Instagram ಆ್ಯಪ್ ಬಳಸಿ ತಮ್ಮ ಸ್ನೇಹಿತರಿಗೆ ವಿಡಿಯೋ ಕಾಲ್ ಮಾಡಿದ್ದಾರೆ ಎಂಬುದು ಆರೋಪ.
ಇದು ಉಪ ಮಹಾ ನಿರೀಕ್ಷಕರು ದಕ್ಷಿಣ ವಲಯ ಕಾರಾಗೃಹ ಮತ್ತು ಸುಧಾರಣ ಸೇವೆ ಅಧಿಕಾರಿಗಳ ಗಮನಕ್ಕೆ ಬಂದಿದೆ. ಅವರ ಗಮನಕ್ಕೆ ಬಂದ ಬೆನ್ನಲ್ಲೆ ಸ್ಥಳೀಯ ಅಧಿಕಾರಿಗಳಿಗೆ ಈ ಬಗ್ಗೆ ದೂರು ದಾಖಲಿಸುವಂತೆ ಸೂಚಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಜೈಲು ಅಧೀಕ್ಷಕಿ ಅನಿತಾ ರವರು ಪೊಲೀಸರಿಗೆ ದೂರು ನೀಡಿದ್ದಾರೆ.
