ಕಾಮತ್ ಲೇ ಔಟ್​ ನಲ್ಲಿ ತುಂಗಾನಗರ ಪೊಲೀಸ್​ ಸ್ಟೇಷನ್​ ಅಧಿಕಾರಿಗಳ ದಿಢೀರ್​ ದಾಳಿ!

Sudden raid by Tunganagar police station officers in Kamath lay out! ಕಾಮತ್ ಲೇ ಔಟ್​ ನಲ್ಲಿ ತುಂಗಾನಗರ ಪೊಲೀಸ್​ ಸ್ಟೇಷನ್​ ಅಧಿಕಾರಿಗಳ ದಿಢೀರ್​ ದಾಳಿ!

ಕಾಮತ್ ಲೇ ಔಟ್​ ನಲ್ಲಿ ತುಂಗಾನಗರ ಪೊಲೀಸ್​ ಸ್ಟೇಷನ್​ ಅಧಿಕಾರಿಗಳ ದಿಢೀರ್​  ದಾಳಿ!

KARNATAKA NEWS/ ONLINE / Malenadu today/ Oct 30, 2023 SHIVAMOGGA NEWS

TUNGA NAGARA POLICE STATION | ಶಿವಮೊಗ್ಗ ಪೊಲೀಸ್ ಇಲಾಖೆ ಗಾಂಜಾ ವಿರುದ್ದದ ಕಾರ್ಯಾಚರಣೆಯನ್ನು ಮುಂದುವರಿಸಿದೆ. ಇದಕ್ಕೆ ಪೂರಕವಾಗಿ ಶಿವಮೊಗ್ಗ ನಗರದ ತುಂಗಾ ನಗರದ ಪೊಲೀಸ್ ಸ್ಟೇಷನ್​ ಪೊಲೀಸರು ಓರ್ವ ಆರೋಪಿಯನ್ನ ಅರೆಸ್ಟ್ ಮಾಡಿದ್ದಾರೆ. 

ದಿನಾಂಕಃ 29-10-2023  ರಂದು ಸಂಜೆ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಮತ್ ಲೇ ಔಟ್ ನಲ್ಲಿ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. 

ಬಳಿಕ  ಮಾಹಿತಿಯನ್ನ ಆಧರಿಸಿ  ಮಂಜುನಾಥ್ ಪಿಐ ತುಂಗಾನಗರ ಪೊಲೀಸ್ ಠಾಣೆ ರವರ ಮಾರ್ಗದರ್ಶನದಲ್ಲಿ   ಶಿವಪ್ರಸಾದ್, ಪಿಎಸ್ಐ, ತುಂಗಾನಗರ ಪೊಲೀಸ್ ಠಾಣೆ ರವರ ನೇತೃತ್ವದ ಸಿಬ್ಬಂಧಿ ಕಾರ್ಯಾಚರಣೆ ನಡೆಸಿದ್ದಾರೆ. 

READ : ಪತ್ರಕರ್ತರಿಗೆ ಪ್ರತ್ಯೇಕ ನಿಧಿ | ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ವಾರ್ಷಿಕ ಮಹಾಸಭೆ!

ಈ ಕಾರ್ಯಾಚರಣೆಯಲ್ಲಿ  ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿತನಾದ ಶಾರೂಕ್ @ ಶಾರೂ, 23 ವರ್ಷ, ಮೇಲಿನ ತುಂಗಾನಗರ, ಶಿವಮೊಗ್ಗ ಟೌನ್ ಈತನನ್ನು ವಶಕ್ಕೆ ಪಡೆಯಲಾಗಿದೆ. 

ಅಲ್ಲದೆ  ಆರೋಪಿತನಿಂದ ಅಂದಾಜು ಮೌಲ್ಯ 5,000/-  ರೂಗಳ ಒಟ್ಟು 158 ಗ್ರಾಂ ತೂಕದ ಒಣ ಗಾಂಜಾ ಮತ್ತು 350 ರೂ ನಗದು ಹಣವನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ. 

ಇನ್ನೂ  ಆರೋಪಿತರ ವಿರುದ್ಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ  ಕಲಂ 20(ಬಿ) ಎನ್.ಡಿ.ಪಿ.ಎಸ್ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.