ಪಕ್ಷವೊಂದು -ಫ್ಲೆಕ್ಸ್​ ಎರಡು: ಕಿಮ್ಮನೆ ರತ್ನಾಕರ್​- ಆರ್​ಎಂ ಮಂಜುನಾಥ್​ ಗೌಡರನ್ನು ಪ್ರಜಾಧ್ವನಿ ಯಾತ್ರೆ ಒಂದುಗೂಡಿಸಿತ್ತಾ? ಸುಂದರೇಶ್ ಸಂಧಾನ ಸಕ್ಸಸ್​ ಆಯ್ತಾ?

Party One - Flex Two: Did the Prajadhvani Yatra unite Kimmane Ratnakar- RM Manjunath Gowda in Thirthahalli? Did Sundaresh's negotiations succeed?

ಪಕ್ಷವೊಂದು -ಫ್ಲೆಕ್ಸ್​ ಎರಡು:  ಕಿಮ್ಮನೆ ರತ್ನಾಕರ್​- ಆರ್​ಎಂ ಮಂಜುನಾಥ್​ ಗೌಡರನ್ನು ಪ್ರಜಾಧ್ವನಿ ಯಾತ್ರೆ ಒಂದುಗೂಡಿಸಿತ್ತಾ?  ಸುಂದರೇಶ್ ಸಂಧಾನ ಸಕ್ಸಸ್​ ಆಯ್ತಾ?
ಪಕ್ಷವೊಂದು -ಫ್ಲೆಕ್ಸ್​ ಎರಡು: ಕಿಮ್ಮನೆ ರತ್ನಾಕರ್​- ಆರ್​ಎಂ ಮಂಜುನಾಥ್​ ಗೌಡರನ್ನು ಪ್ರಜಾಧ್ವನಿ ಯಾತ್ರೆ ಒಂದುಗೂಡಿಸಿತ್ತಾ? ಸುಂದರೇಶ್ ಸಂಧಾನ ಸಕ್ಸಸ್​ ಆಯ್ತಾ?

MALENADUTODAY.COM | SHIVAMOGGA NEWS |THIRTHAHALLI  POLITICS

ಕೆಪಿಸಿಸಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಪ್ರಜಾಧ್ವನಿ ಯಾತ್ರೆ ಕೈಗೆತ್ತಿಕೊಂಡಿದೆ. ಬಸ್​ನಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಸಿಟ್ ಮಾಡಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK SHIVAKUMAR) ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ (SIDDARAMAIAH) ಯಾತ್ರೆ ಆರಂಭಿಸಿದ್ದಾರೆ. ಈ ಯಾತ್ರೆ ಇದೇ ಫೆಬ್ರವರಿ 8 ರಂದು ಶಿವಮೊಗ್ಗ ತಲುಪಲಿದ್ದು ಫೆಬ್ರವರಿ 9 ರಂದು ತೀರ್ಥಹಳ್ಳಿಗೆ ಬರಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ :  bus yatra :ಸಿದ್ದರಾಮಯ್ಯ ಉತ್ತರ -ಡಿಕೆಶಿವಕುಮಾರ್ ದಕ್ಷಿಣ! ಶಿವಮೊಗ್ಗಕ್ಕೆ ಫೆಬ್ರವರಿ 8-9 ಕ್ಕೆ ಕಾಂಗ್ರೆಸ್​ ಬಸ್​ ಯಾತ್ರೆ 

ಕೆಪಿಸಿಸಿಯ ಬಸ್​ಯಾತ್ರೆ ಬರುವಷ್ಟರಲ್ಲಿ ತೀರ್ಥಹಳ್ಳಿ ಕಾಂಗ್ರೆಸ್​​ನಲ್ಲಿ ಕಗ್ಗಂಟಾದ ಅಸಮಾಧಾನವನ್ನು ಸರಿಪಡಿಸುವ ಪ್ರಯತ್ನ ಸಹ ನಡೆದಿದೆ. ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷ ಸುಂದರೇಶ್​  ಆರ್​ಎಂ ಮಂಜುನಾಥ್​ ಗೌಡ ಹಾಗೂ ಕಿಮ್ಮನೆ ರತ್ನಾಕರ್​ರವರ (KIMMMANE RATNAKAR) ನಡುವಿನ ಭಿನ್ನಮತವನ್ನು ಸರಿಪಡಿಸುವ ಸಂಧಾನ ಕೈಗೆತ್ತಿಕೊಂಡಿದ್ದು, ಪ್ರಯತ್ನ ಸಹ ನಡೆಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು  ತೀರ್ಥಹಳ್ಳಿ ಕ್ಷೇತ್ರದ ಬದ್ಧ ರಾಜಕೀಯ ವೈರಿ ಗಳಾದ ಮಾಜಿ ಸಚಿವ ಕಿಮ್ಮನೆ ರತ್ನಾಕರ ಮತ್ತು ಕೆಪಿಸಿಸಿ ಸಹಕಾರ ವಿಭಾಗದ ಸಂಚಾಲಕ 'ಆರ್.ಎಂ. ಮಂಜುನಾಥ ಗೌಡ (RM MANJUNATH GOWDA) ಅವರು ವೈಷಮ್ಯ ಮರೆತು ಒಟ್ಟಾಗಿ ಹೋಗಲು ನಿರ್ಧರಿ ಸಿದ್ದಾರೆ. ಇಬ್ಬರೂ ಮುಖಂಡರು ಈಗ ಒಂದ್ದಾಗಿದ್ದು, ಭಿನ್ನಮತ ಶಮನ ವಾಗಿದೆ ಎಂದಿದ್ದಾರೆ. ಇಬ್ಬರ ಅಸಮಾಧಾನ ಪಕ್ಷಕ್ಕೆ ಹಿನ್ನೆಡೆಯಾಗುವ ಸಾಧ್ಯತೆಯನ್ನು ವಿವರಿಸಲಾಗಿದ್ದು,  ಇಬ್ಬರೂ ಮುಖಂಡರ ಜತೆ ಸಮಾಲೋಚನೆ ನಡೆಸಲಾಗಿದೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಭಿನ್ನಾಭಿಪ್ರಾಯವನ್ನು ಮರೆತು ಜತೆಯಾಗಿ ಕೆಲಸ ಮಾಡಲು ಇಬ್ಬರೂ ಸಮ್ಮತಿಸಿದ್ದಾರೆ ಎಂದು ತಿಳಿಸಿದ್ದಾರೆ.

BIG EXCLUSIVE : Cafe Coffee Day : ಅವರ್ ಬಿಟ್, ಇವರ್ ಬಿಟ್​ ತೀರ್ಥಹಳ್ಳಿ ಎಲೆಕ್ಷನ್​ ಕಣಕ್ಕೆ ಬಂತು ಡಿಕೆ ಶಿವಕುಮಾರ್ ಅಳಿಯನ ಹೆಸರು

ಆದರೆ ಈ ಒಗ್ಗಟ್ಟು ಎಷ್ಟುದಿನ ಎಂಬ ಪ್ರಶ್ನೆಯು ಕಾಡುತ್ತಿದೆ. ಈ ಹಿಂದೆಯು ಇಬ್ಬರು ನಾಯಕರು ಒಂದಾಗಿದ್ಧಾರೆ ಎಂಬ ಮಾಹಿತಿ ಪಕ್ಷದಲ್ಲಿಯೇ ಕೇಳಿಬಂದಿತ್ತು. ಅದರ ಬೆನ್ನಲ್ಲಿಯೇ ಅಸಮಾಧಾನವೂ ಭುಗಿಲೆದ್ದಿತ್ತು. ಇತ್ತೀಚೆಗೆ ಜಸ್ಟ್ ಮಾತುಗಳಲ್ಲಿಯೇ ಭಿನ್ನಮತವೂ ಸ್ಫೋಟಿಸಿತ್ತು. ಇದರ ನಡುವೆ ಸುಂದರೇಶ್​ ಸಂಧಾನ ಸಕ್ಸಸ್ ಕಾಣುತ್ತಿದೆಯೇ ಎಂಬ ಪ್ರಶ್ನೆ ಮೂಡಿದೆ. ಆದರೆ ಪಕ್ಷವೊಂದು ಫ್ಲೆಕ್ಸ್​ ಎರಡು ಎಂಬುದು ಸದ್ಯ ತೀರ್ಥಹಳ್ಳಿಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಕಡೆ ಸಂಧಾನದ ಪ್ರಕ್ರಿಯೆಯ ನಡುವೆಯೇ, ಕೆಪಿಸಿಸಿ ಪ್ರಜಾಧ್ವನಿ ಯಾತ್ರೆಯ ಸ್ವಾಗತ ಕೋರುವ ಪ್ಲೆಕ್ಸ್​​ಗಳು ಬೇರೆ ಬೇರೆಯಾಗಿ ತಲೆಯೆತ್ತುತ್ತಿವೆ. ಬೃಹತ್​ ಪ್ಲೆಕ್ಸ್​ಗಳಲ್ಲಿ ಆರ್​ಎಂಎಂ ಹಾಗೂ ಕಿಮ್ಮನೆಯವರ ಭಾವಚಿತ್ರಗಳು ರಾರಾಜಿಸುತ್ತಿವೆ. ಆದಾಗ್ಯು ಕೆಲವು ಪ್ಲೆಕ್ಸ್​ಗಳಲ್ಲಿ  ಈ ನಾಯಕರ ಪ್ಲೆಕ್ಸ್​ನಲ್ಲಿ ಆ ನಾಯಕರ ಭಾವಚಿತ್ರಗಳು, ಆ ನಾಯಕರ ಫ್ಲೆಕ್ಸ್​ಗಳಲ್ಲಿ ಈ ನಾಯಕರ ಫೋಟೋಗಳು ಮಿಸ್ ಆಗಿವೆ. ಇದು ಒಡೆದ ಮನಸ್ಸುಗಳಿಗೆ ಸಾಕ್ಷಿಯಾಗಿ ಜನರ ಮಾತುಗಳಿಗೆ ಆಹಾರವಾಗುತ್ತಿವೆ. 

ಟ್ರಾಫಿಕ್​ ಫೈನ್​ ಕಟ್ಟಲು 50 ಪರ್ಸೆಂಟ್ ಡಿಸ್ಕೌಂಟ್! ಶಿವಮೊಗ್ಗ ಸಿಟಿಯಲ್ಲಿ ಎಲ್ಲೆಲ್ಲಿ ದಂಡ ಕಟ್ಟಲು ಇದೆ ಅವಕಾಶ! ವಿವರ ಇಲ್ಲಿದೆ

ಇನ್ನೂ ಟಿಕೆಟ್ ಕೋರಿ ಅರ್ಜಿ ಸಲ್ಲಿಸಿದ್ದೆನೆ ಎನ್ನುವ ಮಾಜಿ ಸಚಿವ ಕಿಮ್ಮನೆ ರತ್ನಾಕರ್​ ಪಕ್ಷ ತಮ್ಮ ಇಚ್ಚೆಗೆ ಮನ್ನಣೆ ನೀಡುವ ವಿಶ್ವಾಸವಿದೆ ಎಂದಿದ್ಧಾರೆ. ಆದಾಗ್ಯು ಟಿಕೆಟ್ ನೀಡುವುದು ವರಿಷ್ಟರಿಗೆ ಬಿಟ್ಟ ವಿಚಾರ ಎಂದು ಷರಾ ಬರೆಯುತ್ತಾರೆ. ಇವೆಲ್ಲದರ ನಡುವೆ ಪ್ರಜಾಧ್ವನಿಯಲ್ಲಿ ತೀರ್ಥಹಳ್ಳಿ ಕಾಂಗ್ರೆಸ್​​ ಒಗ್ಗಟ್ಟು ಪ್ರದರ್ಶನಗೊಳ್ಳುತ್ತಾ?ಫೆಬ್ರವರಿ 9 ಕ್ಕೆ ತಿಳಿದುಬರಲಿದೆ. 

*ಶಿವಮೊಗ್ಗ ಜಿಲ್ಲೆಗೆ ಮೋದಿಗಿಫ್ಟ್​! ಮೂರು ರೈಲ್ವೆನಿಲ್ದಾಣ​ಕ್ಕೆ Amrit Bharat Station Yojana ಜಾರಿ! ಏನಿದು ಯೋಜನೆ ಗೊತ್ತಾ?*

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com