ಹುಬ್ಬಳ್ಳಿಯ ಚಾಲಕ, ತೀರ್ಥಹಳ್ಳಿಯಲ್ಲಿ ಸಾವು! ನಾಲ್ಕು ದಿನ ಲಾರಿಯಲ್ಲಿಯೇ ಇತ್ತು ಡ್ರೈವರ್​ನ ಶವ! ಇಷ್ಟಕ್ಕೂ ನಡೆದಿದ್ದೇನು?

Hubballi driver dies in Thirthahalli The driver's body was lying in the lorry for four days. What happened after all?

ಹುಬ್ಬಳ್ಳಿಯ ಚಾಲಕ, ತೀರ್ಥಹಳ್ಳಿಯಲ್ಲಿ ಸಾವು! ನಾಲ್ಕು ದಿನ ಲಾರಿಯಲ್ಲಿಯೇ ಇತ್ತು ಡ್ರೈವರ್​ನ ಶವ! ಇಷ್ಟಕ್ಕೂ ನಡೆದಿದ್ದೇನು?
ಹುಬ್ಬಳ್ಳಿಯ ಚಾಲಕ, ತೀರ್ಥಹಳ್ಳಿಯಲ್ಲಿ ಸಾವು! ನಾಲ್ಕು ದಿನ ಲಾರಿಯಲ್ಲಿಯೇ ಇತ್ತು ಡ್ರೈವರ್​ನ ಶವ! ಇಷ್ಟಕ್ಕೂ ನಡೆದಿದ್ದೇನು?

MALENADUTODAY.COM | SHIVAMOGGA NEWS |THIRTHAHALLI TALUK 

ರೋಡ್​ ಸೈಡ್​ನಲ್ಲಿ ಪಾರ್ಕ್​ ಮಾಡಿದ್ದ ಲಾರಿಯೊಂದರಲ್ಲಿ ಹುಬ್ಬಳ್ಳಿ (hubballi) ಮೂಲದ ಲಾರಿ ಚಾಲಕನ (lorry driver)ಶವ ಪತ್ತೆಯಾಗಿದೆ. ಈ ಬಗ್ಗೆ ನಿನ್ನೆಯಷ್ಟೆ ಗೊತ್ತಾಗಿದ್ದು, ಆತ ಮೃತಪಟ್ಟು ನಾಲ್ಕು ದಿನ ಕಳೆದಿರಬಹುದು ಎಂದು ಅಂದಾಜಿಸಲಾಗಿದೆ. 

ಟ್ರಾಫಿಕ್​ ಫೈನ್​ ಕಟ್ಟಲು 50 ಪರ್ಸೆಂಟ್ ಡಿಸ್ಕೌಂಟ್! ಶಿವಮೊಗ್ಗ ಸಿಟಿಯಲ್ಲಿ ಎಲ್ಲೆಲ್ಲಿ ದಂಡ ಕಟ್ಟಲು ಇದೆ ಅವಕಾಶ! ವಿವರ ಇಲ್ಲಿದೆ

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಸೀಬಿನಕೆರೆ ಬಳಿಯಲ್ಲಿ ಅಚ್ಚೂರ್ ಆಗ್ರೋ ಸೇಲ್ಸ್ ಅಂಡ್ ಸರ್ವಿಸ್ ಸಮೀಪ ಕಳೆದ ನಾಲ್ಕು ದಿನಗಳಿಂದ ಲಾರಿಯೊಂದು ನಿಂತಿತ್ತು. ಯಾರೋ ಪಾರ್ಕ್​ ಮಾಡಿರಬಹುದು ಎಂದುಕೊಂಡಿದ್ದರು. ಆದರೆ ಲಾರಿಯಿಂದ ನಿನ್ನೆ ವಿಪರೀತ ವಾಸನೆ ಬರಲು ಆರಂಭವಾಗಿದೆ. ಅನುಮಾನಗೊಂಡು ಸ್ಥಳೀಯರು ಗಮನಿಸಿದ್ದಾರೆ. 

ಇನ್ನೊಂದೆಡೆ ನಾಲ್ಕು ದಿನಗಳಿಂದ ಚಾಲಕ  ಫೋನ್ ಸ್ವೀಕರಿಸದ ಹಿನ್ನೆಲೆಯಲ್ಲಿ ಸಂಬಂಧಪಟ್ಟವರು ಲಾರಿಯನ್ನು ಪರಿಶೀಲಿಸಲು ಮುಂದಾಗಿದ್ದಾರೆ. ಈ ವೇಳೆ ಚಾಲಕ  ಲಾರಿ ಒಳಗಡೆಯೇ ಸಾವನ್ನಪ್ಪಿರುವುದು ಗೊತ್ತಾಗಿದೆ. ಹೃದಯಾಘಾತದಿಂದ ಆತ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಇನ್ನೂ ಮೃತದೇಹವನ್ನು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ಇನ್ನೂ ಸಾವನ್ನಪ್ಪಿರುವುದು ಹುಬ್ಬಳ್ಳಿ ಮೂಲದ ಮಲ್ಲಿಕಾರ್ಜುನ್​ ಎಂಬದು ಗೊತ್ತಾಗಿದೆ.  

ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣ ತಂಡದವರಿಂದ ಅನಾಥ ಶವ ಆಸ್ಪತ್ರೆಗೆ ಸಾಗಣೆ:

ತೀರ್ಥಹಳ್ಳಿಯ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣ ತಂಡದ ರಾಘವೇಂದ್ರ ಶಶಿಕುಮಾರ್ ಶರತ್ ಪುಸನ್ನ ಪುನೀತ್ ರವರು, ಮೃತಪಟ್ಟ ಲಾರಿ ಚಾಲಕನ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಗೆ ನೆರವಾಗಿದ್ದಾರೆ.

 

*ಶಿವಮೊಗ್ಗ ಜಿಲ್ಲೆಗೆ ಮೋದಿಗಿಫ್ಟ್​! ಮೂರು ರೈಲ್ವೆನಿಲ್ದಾಣ​ಕ್ಕೆ Amrit Bharat Station Yojana ಜಾರಿ! ಏನಿದು ಯೋಜನೆ ಗೊತ್ತಾ?*

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com