BREAKING NEWS/ ತೀರ್ಥಹಳ್ಳಿಯಲ್ಲಿ ಕಾಟ ಕೊಡುತ್ತಿರುವ ಕಾಡಾನೆ ಹಿಡಿಯಲು ನಾಳೆಯಿಂದ ಕಾರ್ಯಾಚರಣೆ! ಎಲ್ಲಿ ನಡೆಯಲಿದೆ ಆಪರೇಷನ್ ?

Malenadu Today

MALENADUTODAY.COM  |SHIVAMOGGA| #KANNADANEWSWEB

THIRTAHALLI/ SHIVAMOGGA /ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿ ಭಾಗಗಳಲ್ಲಿ ಪದೇ ಪದೇ ಕಾಣಿಸಿಕೊಳ್ತಿರುವ ಕಾಡಾನೆಯನ್ನು ಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಲಿದೆ. ನಾಳೆಯಿಂದಲೇ ಈ ಕಾರ್ಯಾಚರಣೆ ಆರಂಭವಾಗಲಿದೆ. ಸದ್ಯ ಕಾಡಾನೆ ದೇವಂಗಿ ಭಾಗದಲ್ಲಿದೆ ಎಂಬ ಮಾಹಿತಿ ಇಲಾಖೆಗೆ ಲಭ್ಯವಾಗಿದೆ. ಈ ಸಂಬಂಧ ನಾಲ್ಕು ಸಾಕಾನೆಗಳನ್ನು ಬಳಸಿ ಆನೆಯನ್ನು ಹಿಡಿಯಲು ಅರಣ್ಯ ಇಲಾಖೆ ಮುಂದಾಗಿದೆ. ಸಕ್ರೆಬೈಲ್ ಆನೆ ಬಿಡಾರದ ಬಹದ್ದೂರ್, ಸಾಗರ್ , ಸೋಮಣ್ಣ ಹಾಗೂ ಬಾಲಣ್ಣ ಆನೆಗಳು ಕಾರ್ಯಾಚರಣೆಗೆ ಬಳಕೆಯಾಗುವ ಸಾಧ್ಯತೆ ಇದೆ. 

*ಡಿಸಿ ಭೇಟಿ ವೇಳೆ, ಮಹಿಳೆ ಹೇಳಿದ ಸತ್ಯ/ ಹುಟ್ಟುವ ಮಗು ಗಂಡು ತಿಳಿಸಿದ ಆಸ್ಪತ್ರೆ ವಿರುದ್ಧ ಆರೋಗ್ಯ ಇಲಾಖೆ ಕ್ರಮ!*

ಸದ್ಯ ಕಾಡಾನೆ ಹಿಡಿಯುವ ಕಾರ್ಯಾಚರಣೆಯ ಪೇಪರ್ ವರ್ಕ್​ಗಳು ಮುಗಿದಿದ್ದು ಅಧಿಕೃತ ಅನುಮತಿ ಸ್ಥಳೀಯ ಅಧಿಕಾರಿಗಳಿಗೆ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ನಾಳೇಯಿಂದಲೇ ಕಾರ್ಯಾಚರಣೆ ಆರಂಭವಾಗಲಿದೆ ಎನ್ನಲಾಗುತ್ತಿದೆ. ಸದ್ಯ ಸಕ್ರೆಬೈಲ್​ ಆನೆ ಬಿಡಾರದಲ್ಲಿ ಆನೆಗಳ ಆಯ್ಕೆ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸ್ತಿದ್ದಾರೆ. ಇನ್ನೂ ಬಹದ್ದೂರ್, ಸಾಗರ್, ಬಾಲಣ್ಣ, ಸೋಮಣ್ಣ ಆನೆಗಳು ಈಗಾಗಲೇ ಹಲವು ಖೆಡ್ಡಾ ಆಪರೇಷನ್​ಗಳಲ್ಲಿ ಪಾಲ್ಗೊಂಡಿವೆ. ಚಿಕ್ಕಮಗಳೂರು , ಹಾವೇರಿ ಸೇರಿದಂತೆ ಹಲವು ಆಪರೇಷನ್​ಗಳಲ್ಲಿ ಕಾಡಾನೆಗಳನ್ನು ಸೆರೆಹಿಡಿಯುವಲ್ಲಿ ಬಿಡಾರದ ಆನೆಗಳು ಯಶಸ್ವಿಯಾಗಿವೆ. ಹೀಗಾಗಿ ನಾಳಿನ ಕಾರ್ಯಾಚರಣೆಗೂ ಇದೇ ಆನೆಗಳನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ. 

Malenadu Today

ಮಣಿಪುರದಲ್ಲಿ ರಿಪ್ಪನ್​ಪೇಟೆ ಯೋಧ ಗುಂಡಿಗೆ ಬಲಿ! ಸಾವಿನ ಬಗ್ಗೆ ಮೂಡಿತು ಅನುಮಾನ?

Ayanur Manjunath : ಪೋಸ್ಟರ್ ವೈರಲ್​​ ಬೆನ್ನಲ್ಲೆ​ ಮತದಾರರಿಗೆ ಬಹಿರಂಗ ಪತ್ರ ಬರೆದ ಆಯನೂರು ಮಂಜುನಾಥ್! ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪನವರು ನೀಡಿದ ಉತ್ತರವೇನು!?

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews  Sagar Taluk News, Sagar News, Deputy Commissioner’s Village Stay,

Share This Article