MALENADUTODAY.COM | SHIVAMOGGA NEWS |THIRTHAHALLI
ಶಿವಮೊಗ್ಗ ಜಿಲ್ಲೆಯಲ್ಲಿ ಮರಳು ಅಕ್ರಮ ಸಾಗಾಣಿಕೆಯನ್ನು ತಡೆಯುವ ನಿಟ್ಟಿನಲ್ಲಿ ಮುಖ್ಯ ರಸ್ತೆಗಳಲ್ಲಿ ಚೆಕ್ಪೋಸ್ಟ್ಗಳನ್ನು (checkpost) ನಿರ್ಮಾಣ ಮಾಡಲಾಗಿದೆ. ಆದರೆ ಈ ಚೆಕ್ಪೋಸ್ಟ್ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿಯೇ ನಿರ್ಮಿಸುತ್ತಿರುವುದಕ್ಕೆ ತೀವ್ರ ವಿರೋಧವೂ ಸಹ ವ್ಯಕ್ತವಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ತಿರ್ಥಹಳ್ಳಿ ತಾಲ್ಲೂಕಿನ ಮುಡುಬದಲ್ಲಿ ಹಾಕಲಾಗಿರುವ ಚೆಕ್ಪೋಸ್ಟ್ ಸ್ಥಳೀಯರ ವಿರೋಧಕ್ಕೆ ಕಾರಣವಾಗಿದೆ.
ಮುಡುಬಾ ಬಸ್ಸ್ಟಾಂಡ್ನಲ್ಲಿಯೇ ಚೆಕ್ಪೋಸ್ಟ್ನ್ನು ನಿರ್ಮಿಸಲಾಗಿದೆ. ಬಸ್ಸ್ಟ್ಯಾಂಡ್ನ್ನು ಸಹ ಚೆಕ್ಪೋಸ್ಟ್ಗಾಗಿ ಬಳಸಿಕೊಳ್ಳಲಾಗುತ್ತಿದೆ. ಬ್ಯಾರಿಕೇಡ್ಗಳನ್ನು ಹೈವೆ ರಸ್ತೆಯಲ್ಲಿ ಇರಿಸಿ, ಮರಳು ಲಾರಿಗಳನ್ನು ತಡೆದು ನಿಲ್ಲಿಸಿ ಪರಿಶೀಲನೆ ನಡೆಸಲಾಗುತ್ತಿದೆ. ಆದರೆ ಬಸ್ಸ್ಟ್ಯಾಂಡ್ ಬಳಿಯಲ್ಲಿಯೇ ಚೆಕ್ಪೋಸ್ಟ್ ನಿರ್ಮಿಸಿರುವುದು ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿದೆ. ದಿನಕ್ಕೆ ಈ ಭಾಗದಲ್ಲಿ 100 ಕ್ಕು ಹೆಚ್ಚು ಲಾರಿಗಳು ಓಡಾಡುತ್ತಿವೆ. ಅವುಗಳನ್ನು ಜನವಿರುವ ಸ್ಥಳದಲ್ಲಿಯೇ ಪರಿಶೀಲನೆ ನಡೆಸ್ತಿರೋದರಿಂದ ಕಿರಿಕಿರಿಯಾಗುತ್ತಿದೆ ಎಂದು ಸ್ಥಳೀಯರು ಎಂಬವರು ಆರೋಪಿಸಿದ್ದಾರೆ.
ಮುಡುಬಾ ಬಸ್ಸ್ಟಾಂಡ್ನ ಬಳಿಯಲ್ಲಿ ನಿತ್ಯಾ ನೂರಾರು ಮಂದಿ ಓಡಾಡುತ್ತಿರುತ್ತಾರೆ. ಮಕ್ಕಳು ಶಾಲೆಗೆ ಹೋಗಲು ಸಹ ಇದೇ ಬಸ್ಸ್ಟ್ಯಾಂಡ್ ಬಳಿ ಬರುತ್ತಾರೆ. ಅಲ್ದೆ ನಿತ್ಯದ ವಹಿವಾಟು ಸಹ ಇಲ್ಲಿಯೆ ನಡೆಯುತ್ತದೆ. ಹೀಗಿರುವ ಸ್ಥಳದಲ್ಲಿಯೇ ಚೆಕ್ಪೋಸ್ಟ್ ನಿರ್ಮಾಣ ಮಾಡಿರೋದು ಎಷ್ಟು ಸರಿ ಎಂದು ಸ್ಥಳೀಯರ ತಂಡವೊಂದು ಎಂಎಲ್ಎ ಆರಗ ಜ್ಞಾನೇಂದ್ರರನ್ನ (Araga jnanendra) ಭೇಟಿ ಮಾಡಿ ಸಮಸ್ಯೆ ತೋಡಿಕೊಂಡಿದೆ. ಸಮಸ್ಯೆಗೆ ಸ್ಪಂದಿಸಿರುವ ಆರಗ ಜ್ಞಾನೇಂದ್ರರವರು ಸಂಬಂಧಪಟ್ಟ ಅಧಿಕಾರಿಗಳಿಗೆ ಫೋನ್ ಹಾಯಿಸಿ, ಸಾರ್ವಜನಿಕರಿಗೆ ತೊಂದರೆ ಆಗದಂತೆ ಚೆಕ್ಪೋಸ್ಟ್ ನಿರ್ಮಿಸಿ ಎಂದು ಸೂಚಿಸಿದ್ಧಾರೆ.
ಶಿವಮೊಗ್ಗದಿಂದ ತೀರ್ಥಹಳ್ಳಿಯವರೆಗೆ ಹಾದು ಹೋಗುವ 169 ರಾಷ್ಟ್ರೀಯ ಹೆದ್ದಾರಿಯಲ್ಲಿ ಗಾಜನೂರು, ಮುಡುಬಾದಲ್ಲಿ ಈಗಾಗಲೇ ಎರಡು ಫಾರೆಸ್ಟ್ ಚೆಕ್ಪೋಸ್ಟ್ಗಳಿವೆ. ಇನ್ನೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಚೆಕ್ಪೋಸ್ಟ್ಗಳ ನಿರ್ಮಾಣದ ಬಗ್ಗೆಯು ಕೆಲವೊಂದು ನಿಯಮಗಳಿವೆ. ಸದ್ಯ ಹೆಚ್ಚುವರಿಯಾಗಿ ಹಾಕಲಾಗುತ್ತಿರುವ ತಾತ್ಕಾಲಿಕ ಚೆಕ್ಪೋಸ್ಟ್ಗಳು ಅವಶ್ಯಕತೆ ಇದೆಯೇ ಎಂಬ ಪ್ರಶ್ನೆಯು ಸ್ಥಳೀಯರದ್ದಾಗಿದೆ. ಹಳೆಯ ಚೆಕ್ಪೋಸ್ಟ್ಗಳನ್ನು ಇನ್ನಷ್ಟು ಬಿಗಿಗೊಳಿಸುವ ಅವಕಾಶಗಳನ್ನು ಆಡಳಿತ ವ್ಯವಸ್ಥೆ ಬಳಸಿಕೊಳ್ಳಬೇಕಿದೆ.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com