ಪ್ರಧಾನಿ ನರೇಂದ್ರ ಮೋದಿ ಬಳಿಕ ರಾಹುಲ್ ಗಾಂಧಿ ರೋಡ್​ ಶೋ ಫಿಕ್ಸ್! ಹೈ ವೋಲ್ಟೇಜ್​ ಕ್ಷೇತ್ರವಾಯ್ತು ಶಿವಮೊಗ್ಗ

After PM Narendra Modi, Rahul Gandhi's roadshow fixed Shimoga becomes a high voltage constituency

ಪ್ರಧಾನಿ ನರೇಂದ್ರ ಮೋದಿ ಬಳಿಕ ರಾಹುಲ್ ಗಾಂಧಿ ರೋಡ್​ ಶೋ ಫಿಕ್ಸ್! ಹೈ ವೋಲ್ಟೇಜ್​ ಕ್ಷೇತ್ರವಾಯ್ತು ಶಿವಮೊಗ್ಗ

KARNATAKA NEWS/ ONLINE / Malenadu today/ Apr 25, 2023 GOOGLE NEWS


ಶಿವಮೊಗ್ಗ/   ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ಹೈ ಪವರ್ ಜಿಲ್ಲೆಯಾಗಿ ಪರಿಣಮಿಸುತ್ತಿದ್ದು, ಇಲ್ಲಿನ ಅಭ್ಯರ್ಥಿಗಳನ್ನುಗೆಲ್ಲಿಸಿಕೊಳ್ಳಲು ರಾಷ್ಟ್ರೀಯ ಪಕ್ಷಗಳ ನಂಬರ್​ ಒನ್ ಮುಖಂಡರು ಆಗಮಿಸ್ತಿದ್ದಾರೆ. 

ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಪ್ರಧಾನಿ ನರೇಂದ್ರ ಮೋದಿ ಪ್ರಚಾರ

ಹೌದು, ಈಗಾಗಲೇ ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮೂಲಕವೇ ಹೆಚ್ಚು ಮತಗಳಿಸಲು ಬಿಜೆಪಿ ನಿರ್ಧರಿಸಿದೆ. ಅದರಂತೆ, ಮೋದಿ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಪ್ರವಾಸದಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಮಾವೇಶ ನಡೆಸಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ. 

ಮೇ.2 ಕ್ಕೆ ಶಿವಮೊಗ್ಗಕ್ಕೆ ರಾಹುಲ್ ಗಾಂಧಿ

ಇನ್ನೂ ಅತ್ತ ಕಾಂಗ್ರೆಸ್​ ಕೂಡ ಶಿವಮೊಗ್ಗಕ್ಕೆ ಕಾಂಗ್ರೆಸ್​ನ ವರಿಷ್ಟ ನಾಯಕ ರಾಹುಲ್​ ಗಾಂಧಿ ಯವರನ್ನ ಶಿವಮೊಗ್ಗಕ್ಕೆ ಕರೆತರಲು ಸಿದ್ಧತೆ ನಡೆಸಿದೆ. ಮೂಲಗಳ ಪ್ರಕಾರ,   ಕಾಂಗ್ರೆಸ್‌ ಪಕ್ಷದ ಪರವಾಗಿ ಮತ ಯಾಚಿಸಲು ರಾಹುಲ್ ಗಾಂಧಿ ಅವರು ಇದೇ ಮೇ 2ರಂದು ತೀರ್ಥಹಳ್ಳಿಗೆ ಆಗಮಿಸಲಿದ್ದಾರೆ 

ಆ ದಿನ ಮಧ್ಯಾಹ್ನ 4 ಗಂಟೆಗೆ ಹೆಲಿಕಾಪ್ಟರ್ ಮೂಲಕ ತೀರ್ಥಹಳ್ಳಿಗೆ ಬರಲಿರುವ  ಅವರು ಬಾಳೇಬೈಲಿನಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿ ರೋಡ್ ಶೋ ನಡೆಸಿ, ಸಾರ್ವಜನಿಕ ಕ್ರೀಡಾಂಗಣದಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ  

ಕಾಂಗ್ರೆಸ್‌ ಸೋಲಲು ರಾಹುಲ್ ಗಾಂಧಿ ಶಿವಮೊಗ್ಗಕ್ಕೂ ಬರಬೇಕು

ಇನ್ನೂ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ಪ್ರತಿಕ್ರಿಯೆ ನೀಡಿದ್ದ ಬಿಜೆಪಿಯ ಹಾಲಿ ಶಾಸಕ ಕೆ.ಎಸ್​.ಈಶ್ವರಪ್ಪ,   ರಾಹುಲ್ ಗಾಂಧಿ ಅವರು ಶಿವಮೊಗ್ಗಕ್ಕೆ ಬಂದರೆ ಬಿಜೆಪಿ ಅಭ್ಯರ್ಥಿಯ ಗೆಲುವಿನ ಅಂತರ ಮತ್ತಷ್ಟು ಹೆಚ್ಚಾಗುತ್ತದೆ ಎಂದಿದ್ದಾರೆ. 

ಏಕೆಂದರೆ  ರಾಹುಲ್​ ಗಾಂಧಿ ಹೋದ ಕಡೆಯಲ್ಲೆಲ್ಲಾ ಕಾಂಗ್ರೆಸ್ ಸೋತಿದೆ. ಅವರು ಶಿವಮೊಗ್ಗಕ್ಕೂ ಬರಲಿ ಎಂಬುದು ನಮ್ಮ ಆಸೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ. 

 

  

Malenadutoday.com Social media