Jogfalls/ ಜೋಗ ಜಲಪಾತ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಇರೋದಿಲ್ಲ

Public will not be allowed to view Jogfalls/

Jogfalls/  ಜೋಗ ಜಲಪಾತ  ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಇರೋದಿಲ್ಲ

KARNATAKA NEWS/ ONLINE / Malenadu today/ Apr 24, 2023 GOOGLE NEWS


ಶಿವಮೊಗ್ಗ/  ಜೋಗ ಜಲಪಾತ  ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಇರೋದಿಲ್ಲ ಹೀಗೊಂದು ಫ್ಲೆಕ್ಸ್​ ಬೋರ್ಡ್​ನ್ನು  ಜೋಗ ಜಲಪಾತದ (jogfalls)ಹೊರಗಡೆ ಹಾಕಲಾಗಿದೆ.  

ಇದಕ್ಕೆ ಕಾರಣ ಚುನಾವಣೆ, ಮತದಾನದ ದಿನ ರಜೆ ನೀಡಲಾಗುತ್ತೆ ಎಂದು ಕೆಲವರು ವೋಟು ಹಾಕದೇ, ಪ್ರವಾಸಕ್ಕೆ ಹೊರಡುತ್ತಾರೆ. ಹಾಗಾಗಿ  ಹಾಗಾಗಿ ಪ್ರವಾಸಿ ಸ್ಥಳ  ಮೇ.10 ರಂದು ಜೋಗ ಜಲಪಾತ ವೀಕ್ಷಣೆಗೆ ನಿರ್ಬಂಧ ಹೇರಲಾಗಿದೆ.  

ಈ ಮೂಲಕ ಎಲ್ಲಾ ಸಾರ್ವಜನಿಕರಿಗೆ ತಿಆಯ ಪಡಿಸುವುದೇನೆಂದರೆ, ದಿನಾಂಕ: 10-05-2023 ರಂದು ಕರ್ನಾಟಕ ವಿಧಾನ ಸಭಾ ಸಾರ್ವತ್ರಿಕ ಚುನಾವಣೆಯ ಮತದಾನ ನಡೆಯುವ ಹಿನ್ನಲೆಯಲ್ಲಿ,ಜೋಗ ಜಲಪಾತ ವೀಕ್ಷಣೆಗೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶವಿರುವುದಿಲ್ಲಾ. 

ಎಲ್ಲಾ ಮತದಾರರು ಕಡ್ಡಾಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಕೋರಿದೆ ಎಂದು ಫ್ಲೆಕ್ಸ್​ನಲ್ಲಿ ಬರೆಸಲಾಗಿದೆ.

ಜೋಗ ನಿರ್ವಾಹಣಾ ಪ್ರಾಧಿಕಾರ ಈ ಬೋರ್ಡ್ ಹಾಕಿದ್ದು, ಈ ಮೂಲಕ ಮತದಾರರಿಗೆ ವೋಟು ಮಾಡಿ ಎಂದು ಜಾಗೃತಿ ಮೂಡಿಸುತ್ತಿದೆ

Malenadutoday.com Social media