‘ಅಲೆಮಾರಿ’ ಪದ ಬಳಕೆ ಈಶ್ವರಪ್ಪನವರ ವಿರುದ್ಧ ದಾಖಲಾಯ್ತಾ ದೂರು? ಆಯನೂರು ಬಳಿಕ ಇದೀಗ ಕೈ ನಾಯಕರ ಆರೋಪ ಪಟ್ಟಿ!

Malenadu Today

ಶಿವಮೊಗ್ಗ ಕಾಂಗ್ರೆಸ್​ ಕಚೇರಿಯಲ್ಲಿ ಇವತ್ತು  ಕಾಂಗ್ರೆಸ್​ ಮುಖಂಡ  ಮಾಜಿ ಎಂಎಲ್​ಸಿ ಆರ್​. ಪ್ರಸನ್ನಕುಮಾರ್  ಹಾಗೂ ಮಾಜಿ ಎಂಎಲ್​ಎ ಕೆ.ಬಿ.ಪ್ರಸನ್ನಕುಮಾರ್ ಸುದ್ದಿಗೋಷ್ಟಿ ಕರೆದು , ಕೆ.ಎಸ್​.ಈಶ್ವರಪ್ಪನವರ ವಿರುದ್ಧ ಹರಿಹಾಯ್ದರು. 

ಸಿದ್ದರಾಮಯ್ಯರಿಗೆ ಬೈದರೇ ಟಿಕೆಟ್ ಕೊಡ್ತಾರಾ? 

ಬಿಜೆಪಿಯಲ್ಲಿ ಕೆ.ಎಸ್​.ಈಶ್ವರಪ್ಪನವರ ಪರಿಸ್ಥಿತಿ ಏನಾಗಿದೆ ಎಂಬುದು ಗೊತ್ತಾಗುತ್ತಿದೆ. ಅಲ್ಲಿ ನಾಲ್ಕೈದು ಹೆಸರುಗಳು ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ನಾಯಕರ ಕೈ ಸೇರಿವೆ. ಹೀಗಾಗಿ ತಮ್ಮನ್ನ ತಾವು ಉಳಿಸಿಕೊಳ್ಳಲು ಸಿದ್ದರಾಮಯ್ಯರ ಬಗ್ಗೆ ಮಾತನಾಡುವುದು ಅನಿವಾರ್ಯವಾಗಿದೆ. ಅವರ ಮಾತು ಅಸಂಬದ್ಧವಾಗಿದ್ದು, ಸಿದ್ದರಾಮಯ್ಯರಿಗೆ ಬೈದರೇ ಟಿಕೆಟ್ ಕೊಡುತ್ತಾರೆ ಎಂದು ಬಾವಿಸಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು. 

ಅಲೆಮಾರಿ ಸಮುದಾಯದವನ್ನು  ಟೀಕಿಸಿದ್ದಕ್ಕೆ ದೂರು? 

ಇನ್ನೂ ನಿನ್ನೆ ಕೆ.ಎಸ್​.ಈಶ್ವರಪ್ಪನವರು ಅಲೆಮಾರಿ ಎಂದು ಸಿದ್ದರಾಮಯ್ಯರನ್ನ ಟೀಕಿಸಿದ್ದರು, ಈ ಮೂಲಕೆ ಅಲೆಮಾರಿ ಸಮುದಾಯವನ್ನು ನಿಂದಿಸಿದ್ದಾರೆ ಎಂದು ಒಬ್ಬರು ಪೊಲೀಸ್ ದೂರು ದಾಖಲಿಸಿದ್ದಾರೆ ಎಂದು ತಿಳಿಸಿದ ಕಾಂಗ್ರೆಸ್ ಮುಖಂಡ ಎಸ್​ಪಿ ದಿನೇಶ್​, ಬಿಎಸ್​ವೈರವರು ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸುತ್ತಿದ್ದ ಸಂದರ್ಭದಲ್ಲಿ , ಈಶ್ವರಪ್ಪನವರು ಅದನ್ನ ವಿರೋಧಿಸಿದ್ದರು. ಕಾಂಗ್ರೆಸ್​ನಲ್ಲಿ ಕುಟುಂಬ ರಾಜಕಾರಣ ಇದೆ, ಆ ಸನ್ನಿವೇಶ ಬಿಜೆಪಿಯಲ್ಲಿಲ್ಲ, ಅಂತಹ ಅಪವಾದ ತರಬೇಡಿ ಎಂದು ಈಶ್ವರಪ್ಪನವರು ಹೇಳಿದ್ದರು. ಇದೀಗ ನೀವು ಯಾರಿಗಾಗಿ ಟಿಕೆಟ್​ ಕೇಳುತ್ತೀದ್ದೀರಿ ಎಂದು ಈಶ್ವರಪ್ಪನವರನ್ನ ಪ್ರಶ್ನಿಸಿದ್ದಾರೆ. 

ಕೆ.ಇ. ಕಾಂತೇಶ್ ಯಾರು? 

ಕೆ.ಇ.ಕಾಂತೇಶ್​ರವರು ನಿಮ್ಮ ಕುಟುಂಬದವರ ಅಲ್ಲವಾ? ಪುತ್ರನಿಗೆ ಟಿಕೆಟ್ ನೀಡಿದರೇ ನಾನು ಹಿಂದೇ ಸರಿಯುತ್ತೇನೆ ಎಂದಿರುವ ನಿಮ್ಮ ಉದ್ದೇಶ ಕುಟುಂಬ ರಾಜಕಾರಣ ಅಲ್ವಾ ಎಂದು ಪ್ರಶ್ನಿಸಿದ ಎಸ್​ಪಿ ದಿನೇಶ್​, ನಿಮ್ಮ ಪಕ್ಷಕ್ಕೆ ಡಾ.ಧನಂಜಯ್​ ಸರ್ಜಿಯವರು ಶಿವಮೊಗ್ಗದಲ್ಲಿ ಶಾಂತಿ ನಡಿಗೆ ಎಂಬ ಕಾರ್ಯಕ್ರಮ ನಡೆಸಿದ್ದಾರೆ. ಆ ಕಾರ್ಯಕ್ರಮದಲ್ಲಿ ಶಾಲೆ ಕಾಲೇಜುಗಳ ಮಕ್ಕಳು ಅದರಲ್ಲಿ ಪಾಲ್ಗೊಳ್ಳಬಾರದು ಎಂದು ನೀವು ಅಧಿಕಾರಿಗಳ ಮೂಲಕ ನೋಟಿಸ್ ಕೊಟ್ಟಿದ್ದೀರಿ. ಅಂದರೆ, ಶಿವಮೊಗ್ಗದಲ್ಲಿ ಶಾಂತಿ ಬೇಡ ಎನ್ನುವುದು ನಿಮ್ಮ ನಿಲುವಾ ಎಂಬುದು ನನ್ನ ಪ್ರಶ್ನೆ ಎಂದು ಎಸ್​ಪಿ ದಿನೇಶ್ ಕೇಳಿದರು. 

ಶಾಂತಿ ನಡಿಗೆಗೆ ಅವಮಾನ

ಯಾವ ಸಮುದಾಯದವರ ಮನೆಗೆ ಹೋಗಿ ಕಾಫಿ, ತಿಂಡಿ ಮಾಡಿಕೊಂಡು ಮಾಡುತ್ತಿದ್ದಿರೋ, ಅದೇ ಸಮುದಾಯದ ಸ್ವಾಮೀಜಿಯವರು ಶಾಂತಿ ನಡಿಗೆ ಕಾರ್ಯಕ್ರಮ ಆಯೋಜನೆ ಮಾಡಿದರೆ, ಸೈನ್ಸ್​ ಮೈಧಾನದ ಪಿಯು ಕಾಲೇಜಿಗೆ ಬೀಗ ಹಾಕಿಸಿದ್ರಿ. ಅಲ್ಲದೆ ಸಿಟಿ ಬಸ್​ ಸ್ಟ್ಯಾಂಡ್​ನಲ್ಲಿ ಕುಳಿತು ಸ್ವಾಮೀಜಿಯೊಬ್ಬರು ಆಶೀರ್ವಚನ  ನೀಡುವಂತೆ  ಮಾಡಿದ್ದೀರಿಲ್ಲ. ಇವತ್ತು ಅವರನ್ನ ಮನವೊಲಿಸಲು ಅವರುಗಳ ಮನೆಗೆ ಹೋಗುತ್ತಿದ್ದೀರಾ? ಇವತ್ತು ಆ ಸಮುದಾಯ ತಮಗಾದ ಅವಮಾನವನ್ನು ಮರೆತಿದೆ ಎಂದು ಭಾವಿಸಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

ಶಿವಮೊಗ್ಗದಲ್ಲಿ ಕಾಂಗ್ರೆಸ್​ ಗೆದ್ದೆ ಗಲ್ಲುತ್ತೆ

ನೂರಕ್ಕೆ ನೂರು ಶಿವಮೊಗ್ಗ ನಗರದಲ್ಲಿ ಕಾಂಗ್ರೆಸ್​ ಗೆದ್ದೆಗೆಲ್ಲುತ್ತದೆ. ಇದೇ ಕಾರಣಕ್ಕೆ ಡಿಸಿಎಂ ಆದವರು ಶಿವಮೊಗ್ಗ ನಗರದಲ್ಲಿ ವಾರ್ಡ್​ ವೈಸ್​ ಓಡಾಡುತ್ತಿದ್ದಾರೆ. ಸಿದ್ದರಾಮಯ್ಯನವರು ಕೇವಲ ಭಾಷಣದಲ್ಲಿ ಹಲವು ಕ್ಷೇತ್ರಗಳನ್ನು ಗೆದ್ದುಕೊಂಡು ಬರುತ್ತಾರೆ.  ನಿಮ್ಮ ಕ್ಷೇತ್ರದಲ್ಲಿಯೇ ನೀವು ಗೆಲ್ಲಲು ಆಗದವರು, ಸಿದ್ದರಾಮಯ್ಯನವರನ್ನ ಏಕೆ ಟೀಕಿಸುತ್ತೀರಿ ಎಂದು ಕೆ.ಎಸ್​.ಈಶ್ವರಪ್ಪನವರನ್ನು ಟೀಕಿಸಿದರು. 

ಇನ್ನೂ ಇದೇ ವೇಳೆ, ಆಯನೂರು ಮಂಜುನಾಥ್​ರವರು ಕಾಂಗ್ರೆಸ್​ಗೆ ಬರುವ ವಿಚಾರದ ಬಗ್ಗೆ ತಮಗೆ ಸ್ಪಷ್ಟನೆ ಇಲ್ಲ ಎಂದ ಎಸ್​ಪಿ ದಿನೇಶ್ ಹಾಗೂ ಆರ್​ ಪ್ರಸನ್ನಕುಮಾರ್ ಮತ್ತು ಕೆ.ಬಿ. ಪ್ರಸನ್ನಕುಮಾರ್​ರವರು ಈ ಬಗ್ಗೆ ತಮಗೆ ಮಾಹಿತಿಯಿಲ್ಲ.  ಕಾಂಗ್ರೆಸ್ ಪಕ್ಷದ ಸಿದ್ದಾಂತವನ್ನು ನಂಬಿ ಬಂದವರಿಗೆ ಸ್ವಾಗತವಿದೆ. ಈ ಸಂಬಂಧ ಕಾಂಗ್ರೆಸ್​ ರಾಜ್ಯ ನಾಯಕರಲ್ಲಿ ಯಾವ ಮಾಹಿತಿ ಇದೆ ಎಂಬುದು ಸಹ ಮಾಹಿತಿಯಿಲ್ಲ. ಆದಾಗ್ಯು ವರಿಷ್ಟರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ ಎಂದರು. 

Read /ಶಿವಮೊಗ್ಗದ ಈ ಕ್ಷೇತ್ರದ  ಟಿಕೆಟ್ ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ! ವೈರಲ್​ ಲೆಟರ್​ನಲ್ಲಿ ಏನಿದೆ ಗೊತ್ತಾ 

Read /ಗೇರು ಬೀಜ ಕಿತ್ತಿದ್ದೇಕೆ ಎಂದಿದ್ದಕ್ಕೆ ವೃದ್ಧೆ ಮೇಲೆ ಹಲ್ಲೆ !

Read / ಮತ್ತೆ ಶುರುವಾಯ್ತು ನಕಲಿ ಲೋಕಾಯುಕ್ತರ ಹಾವಳಿ/ ಅಧಿಕಾರಿಗೆ ಕರೆ ಮಾಡಿ  1  ಲಕ್ಷ ಗೂಗಲ್ ಪೇ ಮಾಡುವಂತೆ ಬೆದರಿಕೆ 

Read / ಶಿಕಾರಿಪುರ ಹುಚ್ಚರಾಯಸ್ವಾಮಿ ದೇವರ ರಥೋತ್ಸವಕ್ಕೂ ನೀತಿ ಸಂಹಿತೆ ಎಫೆಕ್ಟ್​ 

Read / ತಗ್ಗಿನಲ್ಲಿದ್ದ ಮನೆಯ ಮೇಲೆ ಉರುಳಿ ಬಿದ್ದ ಟ್ರ್ಯಾಕ್ಟರ್​! 

Read / Bhadravati/  ಪರ್ಮಿಶನ್​ ಇಲ್ಲದೇ ಪ್ರಚಾರ/ ಭದ್ರಾವತಿಯಲ್ಲಿ ಬಿ.ಕೆ. ಸಂಗಮೇಶ್ವರ್​ಗೆ ಸೇರಿದ ವಾಹನ ಜಪ್ತಿ 

Read / ತೀರ್ಥಹಳ್ಳಿಯಲ್ಲಿ  ಗೃಹಸಚಿವರಿಗೂ ತಟ್ಟಿದ ನೀತಿ ಸಂಹಿತೆಯ ಬಿಸಿ 

Read / ಆಯನೂರು ಮಂಜುನಾಥ್ ಕಾಂಗ್ರೆಸ್​ ಯಾತ್ರೆಗೆ ಸಿಕ್ಕಿತು ನೋ ಅಬ್ಜೆಕ್ಷನ್​! 

Read/ ಸಾಗರಕ್ಕೆ ಬರುತ್ತಿದ್ದ ಬಸ್​ ಅಪಘಾತ/ ಸ್ಟೇರಿಂಗ್​  ಕಟ್ ಆಗಿ ಹೊಂಡಕ್ಕೆ ಉರುಳಿದ ಸರ್ಕಾರಿ ಸಾರಿಗೆ 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

 

MALENADUTODAY.COM/ SHIVAMOGGA / KARNATAKA WEB NEWS

HASTAGS/ Shivamogga today, shivamogga news, shivamogga live, justshviamogga, firstnewsshivamogga, shivamoggavarte , shivamogga times news, shivamogga pepar news daily , shivamogga report , shivamogga police news, shivamogga malnad news, shivamogga today report, shivamogga  accident , shivamogga place , shivamogga-shimoga , shivamogga latest news,shivamogga airport,shivamogga dc office,shivamogga today news,shivamogga live,shivamogga elections,shivamogga news today, bhadravati,bhadravati city,bhadravati town,bhadravati karnataka  Sagar Rural Police Station, #Shivamogga #ShivamoggaNews #Shimoga #MalnadNews #LocalNews #KannadaNewsWebsite , KS Eshwarappa, Siddaramaiah, Nomad, Congress accusation, SP Dinesh, K.B. Prasanna Kumar, R.; Prasanna Kumar, Ayanur Manjunath, Shantiya Walk, Dr. Dhananjay Sarji, Shivamogga City Assembly Constituency, Shivamogga City Constituency, Shivamogga Assembly Constituency, Eshwarappa’s Campaign, Shivamogga Congress, Siddaramaiah, ಕೆಎಸ್​.ಈಶ್ವರಪ್ಪ, ಸಿದ್ದರಾಮಯ್ಯ, ಅಲೆಮಾರಿ, ಕಾಂಗ್ರೆಸ್ ಆರೋಪ, ಎಸ್​ಪಿ ದಿನೇಶ್, ಕೆ.ಬಿ. ಪ್ರಸನ್ನಕುಮಾರ್, ಆರ್. ಪ್ರಸನ್ನಕುಮಾರ್, ಆಯನೂರು ಮಂಜುನಾಥ್ , ಶಾಂತಿಯ ನಡಿಗೆ, ಡಾ.ಧನಂಜಯ್ ಸರ್ಜಿ, ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ, ಶಿವಮೊಗ್ಗ ನಗರ ಕ್ಷೇತ್ರ, ಶಿವಮೊಗ್ಗ ವಿಧಾನಸಭೆ, ಈಶ್ವರಪ್ಪನವರ ಪ್ರಚಾರ, ಶಿವಮೊಗ್ಗ ಕಾಂಗ್ರೆಸ್​, ಸಿದ್ದರಾಮಯ್ಯ,

Share This Article