ಶಿವಮೊಗ್ಗ ಬಸ್‌ ನಿಲ್ದಾಣದಲ್ಲಿ ಮಲಗಿದ್ದ ಮಹಿಳೆ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಸಾವು! ಕೈ ಮೇಲಿದೆ ಹೂವಿನ ಹಚ್ಚೆ!

Shimoga: A woman who was sleeping at a bus stand died at The Meggan Hospital. A flower tattoo on the hand!

ಶಿವಮೊಗ್ಗ ಬಸ್‌ ನಿಲ್ದಾಣದಲ್ಲಿ ಮಲಗಿದ್ದ ಮಹಿಳೆ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಸಾವು! ಕೈ ಮೇಲಿದೆ ಹೂವಿನ ಹಚ್ಚೆ!
Meggan Hospital

Shivamogga  Mar 28, 2024   Meggan Hospital  ಶಿವಮೊಗ್ಗದ ಬಸ್‌ ನಿಲ್ದಾಣದಲ್ಲಿ  ಸುಸ್ತಾಗಿ ಮಲಗಿದ್ದ ಮಹಿಳೆಯೊಬ್ಬರು ಮೆಗ್ಗಾನ್‌ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು ಅವರ ಗುರುತು ಪತ್ತೆಗಾಗಿ ದೊಡ್ಡಪೇಟೆ ಪೊಲೀಸ್‌ ಸ್ಟೇಷನ್‌ ಪೊಲೀಸರು ಪ್ರಕಟಣೆ ನೀಡಿದ್ಧಾರೆ. 

ಪೊಲೀಸ್‌ ಪ್ರಕಟಣೆ

ಫೆ.29 ರಂದು ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಸರ್ಕಾರಿ ಬಸ್ ನಿಲ್ದಾಣದಲ್ಲಿ  ಅನಾರೋಗ್ಯದಿಂದ ಸುಸ್ತಾಗಿ ಮಲಗಿದ್ದ ಸುಮಾರು 55-60 ವರ್ಷದ ಮಹಿಳೆಯನ್ನು ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗಿದೆ ಮಾ.20 ರಂದು ಮೃತಪಟ್ಟಿರುತ್ತಾಳೆ.  ಶವವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. 

ಈಕೆಯ ಚಹರೆ ಸುಮಾರು 05.04 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕೋಲುಮುಖ ಹೊಂದಿದ್ದು, ಮೃತಳ ಮೈಮೇಲೆ ತಿಳಿ ಹಸಿರು ಬಣ್ಣದ ನೈಟಿ ಧರಿಸಿರುತ್ತಾರೆ. ಮೃತಳ ಬಲಗೈನ ಮುಂಗೈ ಒಳಭಾಗದಲ್ಲಿ 3 ಹೂಗಳ ಹಚ್ಚೆ ಗುರುತು ಹಾಗೂ ಎಡಗೈ ಮುಂಗೈ ಒಳಭಾಗದಲ್ಲಿ 1 ಹೂವಿನ ಹಚ್ಚೆ ಗುರುತು ಮತ್ತು 3 ಇಂಚು ಅಗಲದ ಸುಟ್ಟ ಗಾಯದ ಕಲೆ ಇರುತ್ತದೆ. 

ಈ ಮೃತಳ ವಾರಸ್ಸುದಾರರು ಅಥವಾ ವಿಳಾಸ ಪತ್ತೆಯಾಗಿರುವುದಿಲ್ಲ.  ಈ ಮಹಿಳೆಯ ವಾರಸ್ಸುದಾರರು ಪತ್ತೆಯಾದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414 / 9611761255 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಇನ್ಸ್‍ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.