ಕಾಂಗ್ರೆಸ್‌ ಕಾರ್ಯಕರ್ತರಿಗೆ ಊಟ ಹಾಕಿಸಿದ್ದಕ್ಕೆ ದಾಖಲಾಯ್ತು ಕೇಸ್!‌ ಒಂದೇ ದಿನ ನಾಲ್ಕುವರೆ ಲಕ್ಷ ರೂಪಾಯಿ ಸೀಜ್!‌

A case was registered for serving food to Congress workers! Four and a half lakh rupees seized in a single day!

ಕಾಂಗ್ರೆಸ್‌ ಕಾರ್ಯಕರ್ತರಿಗೆ ಊಟ ಹಾಕಿಸಿದ್ದಕ್ಕೆ ದಾಖಲಾಯ್ತು ಕೇಸ್!‌ ಒಂದೇ ದಿನ ನಾಲ್ಕುವರೆ ಲಕ್ಷ ರೂಪಾಯಿ ಸೀಜ್!‌
Congress workers

Shivamogga  Mar 28, 2024   Congress workers ಲೋಕಸಭಾ ಚುನಾವಣೆ 2024 ರ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಗಳು ದಾಖಲೆ ಇಲ್ಲದೇ ಸಾಗಿಸಲಾಗುತ್ತಿದ್ದ ಒಟ್ಟು ನಾಲ್ಕುವರೆ ಲಕ್ಷಕ್ಕೂ ಅಧಿಕರ ಹಣವನ್ನು ಜಪ್ತು ಮಾಡಿದ್ದಾರೆ 

 Congress workers

ದಾಖಲೆ ಇಲ್ಲದ ಹಣ ವಶ

ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು ಇಂದು ಎಫ್‍ಎಸ್‍ಟಿ -2 ಬಿ ತಂಡದವರು ಶಿರಾಳಕೊಪ್ಪ-ಚಿತ್ರದಹಳ್ಳಿ ರಸ್ತೆ ಮಧ್ಯೆ ವಾಹನ ತಪಾಸಣೆ ಮಾಡುವ ವೇಳೆ ಸೊರಬ ವಾಸಿ ಮುನ್ನೀರ್ ಎಂಬವವರು ದಾಖಲೆ ಇಲ್ಲದೆ ವಾಹನದಲ್ಲಿ ರೂ.1,50,000 ಗಳನ್ನು ಸಾಗಿಸುತ್ತಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಇನ್ನೊಂದೆಡೆ ಲೋಕಸಭಾ ಚುನಾವಣೆ ಹಿನ್ನೆಲೆ ಮತಕ್ಷೇತ್ರವಾರು ಚೆಕ್‍ಪೋಸ್ಟ್‌ಗಳನ್ನು ಸ್ಥಾಪಿಸಿದ್ದು, ಮಾ.27 ರಂದು ಶಿಕಾರಿಪುರ-115 ಮತ ಕ್ಷೇತ್ರ ವ್ಯಾಪ್ತಿಯ ಕವಾಸ್‍ಪುರ ಚೆಕ್‍ಪೋಸ್ಟ್‌ ನಲ್ಲಿ ಹನುಮಂತಪ್ಪ ಎಂಬುವವರು ದಾಖಲೆ ಇಲ್ಲದೆ ಹೊಂದಿದ್ದ ರೂ.73,736 ಗಳನ್ನು ಎಸ್‍ಎಸ್‍ಟಿ ತಂಡ ವಶಪಡಿಸಿಕೊಂಡಿದೆ.

ಭದ್ರಾವತಿ-112 ಮತಕ್ಷೇತ್ರ ವ್ಯಾಪ್ತಿಯ ಹಳ್ಳಿಕೆರೆ ಚೆಕ್‍ಪೋಸ್ಟ್‍ನಲ್ಲಿ ರಾಮು ಮತ್ತು ಕೆ.ತೀರ್ಥಕುಮಾರ್ ಎಂಬುವವರು ಹೊಂದಿದ್ದ ರೂ.1,25,000 ಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಸಲ್ಲಿಸಲಾಗಿದೆ.

ಅನುಮತಿ ಪಡೆಯದೆ ಊಟ ವ್ಯವಸ್ಥೆ : ಪ್ರಕರಣ ದಾಖಲು

ಇತ್ತ ಸಾಗರ-117 ವ್ಯಾಪ್ತಿಯಲ್ಲಿ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯದೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಊಟವನ್ನು ಸರಬರಾಜು ಮಾಡುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಪಕ್ಷದ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

ಅಕ್ರಮ ಮದ್ಯ ವಶ

ಇತ್ತ ಮಾ.27 ರಂದು ಪೊಲೀಸ್ ಇಲಾಖೆ ವತಿಯಿಂದ ರೂ.1336.38 ಮೊತ್ತದ 3.81 ಲೀ., ಅಬಕಾರಿ ಇಲಾಖೆಯಿಂದ ರೂ.9487 ಮೊತ್ತದ 21.14 ಲೀ ಒಟ್ಟು ರೂ. 10823.68 ಮೌಲ್ಯದ 24.95 ಲೀ ಅಕ್ರಮ ಮದ್ಯವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.