ಕೆಎಸ್‌ ಈಶ್ವರಪ್ಪನವರ ನಾಮಪತ್ರ ಸಲ್ಲಿಕೆಯ ವೇಳೆ ಮೋದಿ ಹಾಜರ್!‌ ಇವರು ಅವರಲ್ಲ! ಹಾಗಾದರೆ ಯಾರು?

Pm Modi attends KS Eshwarappa's nomination papers These are not them! So who?

ಕೆಎಸ್‌ ಈಶ್ವರಪ್ಪನವರ ನಾಮಪತ್ರ ಸಲ್ಲಿಕೆಯ ವೇಳೆ ಮೋದಿ ಹಾಜರ್!‌ ಇವರು ಅವರಲ್ಲ! ಹಾಗಾದರೆ ಯಾರು?
KS Eshwarappa, modi

Shivamogga  Apr 12, 2024 ಶಿವಮೊಗ್ಗದಲ್ಲಿಂದು ಕೆಎಸ್‌ ಈಶ್ವರಪ್ಪ ನಾಮಪತ್ರ ಸಲ್ಲಿಕೆ ಮಾಡಿದ್ರು. ಅದೃಷ್ಟದ ಲೆಕ್ಕಾಚಾರದಲ್ಲಿ ಒಂದು ನಾಮಪತ್ರ ಸಲ್ಲಿಸಿದ್ದ ಅವರು ಮತ್ತೊಮ್ಮೆ ಮೆರವಣಿಗೆ ಮೂಲಕ ಬಂದು ನಾಮಪತ್ರ ಸಲ್ಲಿಸಿದ್ದರು. ಅದ್ದೂರಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ  ಕೆಎಸ್‌ ಈಶ್ವರಪ್ಪರವರ ಜೊತೆಗೆ ಕುತೂಹಲ ಹಾಗೂ ಗಮನ ಸೆಳೆದಿದ್ದು ಜೂನಿಯರ್‌ ಮೋದಿ.. 

modi

ಹೌದು, ಈಶ್ವರಪ್ಪನವರ ನಾಮಿನೇಷನ್‌ ಸಲ್ಲಿಕೆಯ ಮೆರವಣಿಗೆಯಲ್ಲಿ  ಪ್ರಧಾನಿ ನರೇಂದ್ರ ಮೋದಿಯವರ ಫೋಟೋಗಳೇ ಹೆಚ್ಚು ರಾರಾಜಿಸಿದವು. ಮೋದಿ ಸಾಹೇಬ್ರಿಗೆ ಜೈ ಈಶ್ವರಪ್ಪ ಸಾಹೇಬ್ರಿಗೆ ಜೈ ಎಂದು ಕಾರ್ಯಕರ್ತರು ಘೋಷಣೆ ಕೂಗುತ್ತಿದ್ದರೇ ಈಶ್ವರಪ್ಪನವರ ಜೊತೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನ ಹೋಲುವ ವ್ಯಕ್ತಿಯೊಬ್ಬರು ಜನರತ್ತ ಕೈ ಬೀಸುತ್ತಿದ್ದರು.. 

ಇಷ್ಟಕ್ಕೂ ಅವರ್ಯಾರು ಇರಬಹದು ಎಂದು ವಿಚಾರಿಸಿದಾಗ ತಿಳಿದುಬಂದಿದ್ದು, ಅವರು ಉಡುಪಿ ಜಿಲ್ಲೆ ಹಿರಿಯಡ್ಕದ ಸದಾನಂದ ನಾಯಕ್‌. ಈಶ್ವರಪ್ಪರ ಬೆಂಬಲಿಗರು ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸನ್ನ ಬಳಸಿಕೊಳ್ಳುವ ಉದ್ದೇಶದಿಂದಾಗಿ ಜ್ಯೂನಿಯರ್‌ ಮೋದಿಯವರನ್ನ ನಾಮಪತ್ರ ಸಲ್ಲಿಕೆಯ ಮೆರವಣಿಗೆಗಾಗಿ ಕರೆತಂದಿದ್ದರು. 

modi

ಚುನಾವಣಾ ಆಯೋಗದ ಮಧ್ಯ ಪ್ರವೇಶಕ್ಕೆ ಬಿಜೆಪಿ ವಿನಂತಿ ಮಾಡಿದ್ದು, ನರೇಂದ್ರ ಮೋದಿಯವರ ಫೋಟೋ ಬಳಕೆಗೆ ಅವಕಾಶ ನೀಡದಂತೆ ಕೋರಿದೆ. ಇತ್ತ ಕೋರ್ಟ್‌ನಲ್ಲಿ ಕೇವಿಯಟ್‌ ಸಲ್ಲಿಸಿರುವ ಕೆಎಸ್‌ ಈಶ್ವರಪ್ಪ ಮೋದಿಯವರ ಫೋಟೋ ಬಳಸುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸುತ್ತಿದ್ದಾರೆ. ಈ ಸಂಬಂಧ ನಡೆಯುತ್ತಿರುವ ವಾಕ್ಸಮರದ ವಿವರ ಇಲ್ಲಿದೆ ಓದಿ 

ಪ್ರಧಾನಿ ನರೇಂದ್ರ ಮೋದಿ ಫೋಟೋ ವಾರ್‌ |  ಈಶ್ವರಪ್ಪ ಕೌಂಟರ್‌,  ವಿಜಯೇಂದ್ರ, ರಾಘವೇಂದ್ರ ರಿಯಾಕ್ಷನ್‌ ಏನು?