ವಿಶಾಖಪಟ್ಟಣ ದಿಂದ ಶಿವಮೊಗ್ಗಕ್ಕೆ ಕೊಳೆತ ಮೀನುಗಳ ಜೊತೆಗೆ ಬರುತ್ತೆ ಮತ್ತಿನ ಮಾಲು! ಹೇಗೆ ಇದೆಲ್ಲಾ ಕಂಪ್ಲೀಟ್ ಸ್ಟೋರಿ!

MALENADU TODAY BIG EXCLUSIVE | Where's Visakhapatnam, where's Shimoga

ವಿಶಾಖಪಟ್ಟಣ ದಿಂದ ಶಿವಮೊಗ್ಗಕ್ಕೆ ಕೊಳೆತ ಮೀನುಗಳ ಜೊತೆಗೆ ಬರುತ್ತೆ ಮತ್ತಿನ ಮಾಲು! ಹೇಗೆ ಇದೆಲ್ಲಾ ಕಂಪ್ಲೀಟ್ ಸ್ಟೋರಿ!
MALENADU TODAY BIG EXCLUSIVE | Where's Visakhapatnam, where's Shimoga

MALENADU TODAY BIG EXCLUSIVE /Malenadu today story / SHIVAMOGGA  / 

ಶಿವಮೊಗ್ಗ ಜಿಲ್ಲೆಯಲ್ಲಿ ಎಗ್ಗಿಲ್ಲದೆ ಗಾಂಜಾ ಮಾಫೀಯ ತನ್ನ ಕಬಂಧ ಬಾಹುಗಳನ್ನು ವಿಸ್ತರಿಸುತ್ತಾ ಹೋಗುತ್ತಿದೆ. ಕಾಡಿನ ಮದ್ಯೆ ಶುಂಠಿ ಚೆಂಡು ಹೂವು ಬೆಳೆಗಳ ಮಧ್ಯೆ ಬೆಳೆಯಲಾಗುತ್ತಿರುವ ಮಲೆನಾಡಿನ ಗಾಂಜಾ ಹೊರಜಿಲ್ಲೆಹೊರ ರಾಜ್ಯಗಳಿಗೆ ಸಪ್ಲೆ ಆಗುತ್ತಿದೆ. ಆದರೆ ಇಲ್ಲಿನ ಗಾಂಜಾಕ್ಕೆ ಕೇಜಿಗೆ 15 ರಿಂದ 20 ಸಾವಿರ ಹಣಕೊಡಬೇಕು. ದುಬಾರಿ ಬೆಲೆಕೊಟ್ಟು ಅದನ್ನು ವ್ಯಸನಿಗಳಿಗೆ ನೀಡುವುದು ಪೆಡ್ಲರ್ ಗಳಿಗೂ ಕಷ್ಟವಾಗಿದೆ. ಹೀಗಾಗಿ ಶಿವಮೊಗ್ಗದ ಗಾಂಜಾ ಪೆಡ್ಲರ್ ಗಳು ಆಂದ್ರ ಪ್ರದೇಶದ ವಿಶಾಖಪಟ್ಟಣಂ ಗೆ ಮೊರೆಹೋಗಿದ್ದಾರೆ. ಅಲ್ಲಿ ಪ್ರತಿ ಕೇಜಿ ಗಾಂಜಾಕ್ಕೆ ಒಂದರಿಂದ ಒಂದುವರೆ ಸಾವಿರ ರೂಪಾಯಿ ಹಣ ಕೊಟ್ಟರೂ ಹೆಚ್ಚು. ಅಲ್ಲಿಂದ ತರುವ ಗಾಂಜಾವನ್ನು ಇಲ್ಲಿ ಹದಿನೈದರಿಂದ ಇಪ್ಪತ್ತು ಸಾವಿರ ರೂಪಾಯಿಗೆ ಮಾರಿ, ದಂಧೆಕೋರರು ದುಡ್ಡು ಮಾಡುತ್ತಿದ್ದಾರೆ.

ಮೀನು ಲಾರಿಗಳಲ್ಲಿ ಬರುತ್ತೆ ಗಾಂಜಾ !

ಇನ್ನು ವಿಶಾಖ ಪಟ್ಟಣಂ ನಿಂದ ಗಾಂಜಾ ಭದ್ರಾವತಿಗೆ ಅನಾಯಸವಾಗಿ ಪ್ರವೇಶಿಸುವಂತೆ ಡೀಲರ್ ಗಳು ಹೊಸ ತಂತ್ರವನ್ನೇ ರೂಪಿಸಿದ್ದಾರೆ. ವಿಶಾಖಪಟ್ಟಣಂ ನಿಂದ ಭದ್ರಾವತಿಗೆ ಬರುವ ಕೆಲವು ಮೀನು ಲಾರಿಗಳನ್ನು ಪೆಡ್ಲರ್ ಗಳು ಬುಕ್ ಮಾಡಿಕೊಂಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ಈಗ ಬಂಧನವಾಗಿರುವ ಮಧು ಶಿವಮೊಗ್ಗ ಭದ್ರಾವತಿಗೆ ಗಾಂಜಾ ನೀಡುವ ಪ್ರಮುಖ ಆರೋಪಿಯಾಗಿದ್ದಾನೆ. ಈತ ಮೀನು ಲಾರಿಗಳನ್ನೇ ಬುಕ್ ಮಾಡಿಕೊಂಡು ಲಾರಿಯಲ್ಲಿ 50 ರಿಂದ ಒಂದು ಕ್ವಿಂಟಾಲ್ ವರೆಗೂ ಏಕಕಾಲದಲ್ಲಿ ಗಾಂಜಾ ಈವರೆಗೂ ತರಿಸುತ್ತಿದ್ದ. ಕಳೆದ ಎರಡು ತಿಂಗಳ ಹಿಂದೆ ಅಂದರೆ 28-06-2021 ರಂದು ಈತನ ಮಾರುತಿ ಓನ್ಮಿ ಕಾರಿನಲ್ಲಿ ಪೆಡ್ಲರ್ ಗಳಿಗೆ ಸಪ್ಲೆ ಮಾಡಲು ಮಾರುತಿ ಓಮ್ನಿ ಕಾರಿನಲ್ಲಿ ಸಾಗಿಸುತ್ತಿದ್ದ 48 ಕೇಜಿ 656 ಗ್ರಾಂ ಒಣ ಗಾಂಜಾವನ್ನು ಭದ್ರಾವತಿ ಪೊಲೀಸರು ವಶಪಡಿಸಿಕೊಂಡಿದ್ದರು. ಅಲ್ಲದೆ ಇತ್ತಿಚ್ಚೆಗೆ ಈತನಿಗೆ ಸಂಬಂಧಿಸಿದ ವಾಹನದಲ್ಲಿಯೇ ಐದು ಕೇಜಿಯಷ್ಟು ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಆದರೆ ವಿಶಾಖಪಟ್ಟಣಂ ನಿಂದ ಭದ್ರಾವತಿವರೆಗೆ ಮೀನು ಲಾರಿಯಲ್ಲಿ ಬರುತ್ತಿದ್ದ ಗಾಂಜಾ ವನ್ನು ಪೊಲೀಸರು ಈವರೆಗೂ ಪತ್ತೆ ಹಚ್ಚಲು ಸಾಧ್ಯವಾಗದಿರುವುದೇ ವಿಪರ್ಯಾಸದ ಸಂಗತಿ.

ಕೊಳೆತ ಮೀನುಗಳ ಜೊತೆಯಲ್ಲಿ ಇಡಲಾಗುತ್ತೆ ಗಾಂಜಾ

ಲಾರಿಯಲ್ಲಿ ಮೀನು ಬಾಕ್ಸ್ ಗಳಿರುವ ಹಿಂಭಾಗದ ನಿರ್ಧಿಷ್ಟ ಜಾಗದಲ್ಲಿ ಒಣ ಗಾಂಜಾದ ಪ್ಯಾಕ್ ನ್ನು ಗೌಪ್ಯವಾಗಿ ಇಡಲಾಗುತ್ತದೆ.ಇದರ ಮೇಲೆ ಕೊಳೆತ ಮೀನುಗಳನ್ನು ವಾಸನೆ ಬರಲೆಂದು ಹಾಕಲಾಗುತ್ತದೆ. ಇದರಿಂದ ಇತರ ಮೀನು ಬಾಕ್ಸ್ ಗಳಿಗೆ ಹಾನಿಯಾಗಂತೆ ಗಾಂಜಾವನ್ನಿಟ್ಟು ಸಾಗಾಣಿಕೆ ಮಾಡಲಾಗುತ್ತದೆ. ಮೀನು ಸಾಗಾಣಿಕೆ ಲಾರಿಗಳನ್ನು ಯಾರು ಚೆಕ್ ಮಾಡಲು ಹೋಗುವುದಿಲ್ಲ. ಚೆಕ್ ಮಾಡಲು ಬಾಕ್ಸ್ ಹಿಂಬದಿ ಡೋರ್ ತೆಗೆದರೆ ಮೀನಿನ ವಾಸನೆ, ಐಸ್ ಗೆಡ್ಡೆಯ ನೀರು ಇರುತ್ತೆ. ಮೀನಿನ ಸ್ಮೆಲ್ ತೆಗೆದುಕೊಳ್ಳಲು ಹಾಗು ಬಾಕ್ಸ್ ಇಳಿಯಸಲು ಯಾರು ಮುಂದಾಗೋದಿಲ್ಲ. ಮೀನು ಲಾರಿಯೆಂದರೆ ಅನಾಯಸವಾಗಿ ಬಿಟ್ಟು ಕಳಿಸುತ್ತಾರೆ. ಇದನ್ನೆ ಲಾಭ ಮಾಡಿಕೊಂಡಿರುವ ಮಧು ಮತ್ತು ಇತರೆ ಗಾಂಜಾ ಡೀಲರ್ ಗಳು ತರೀಕೆರೆ ಭದ್ರಾವತಿ ಹೊರವಲಯದ ಗೌಪ್ಯ ಸ್ಥಳದಲ್ಲಿ ಗಾಂಜಾ ಮಾಲನ್ನು ಇಳಿಸಿಕೊಂಡು, ತಮ್ಮ ವಾಹನಗಳಲ್ಲಿ ಸಾಗಿಸುತ್ತಾರೆ. ಬಹಳ ವರ್ಷಗಳಿಂದಲೂ ಗಾಂಜಾ ಡೀಲರ್ ಗಳು ಮೀನು ಲಾರಿಗಳಲ್ಲಿಯೇ ತಮ್ಮ ವ್ಯವಹಾರ ನಡೆಸುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸುತ್ತಮುತ್ತಲ ಪ್ರದೇಶಗಳಿಗೆ ಮೀನು ವಿತರಣಾ ಕೆಂದ್ರವಾಗಿ ಗುರುತಿಸಿಕೊಂಡಿರುವ ಭದ್ರಾವತಿ ನಗರಕ್ಕೆ ಎಲ್ಲೆಡೆಯಿಂದ ಮೀನು ಲಾರಿಗಳು ಬರುತ್ತವೆ. ಇಲ್ಲಿಗೆ ಅಕ್ಕಪಕ್ಕದ ಜಿಲ್ಲೆಗಳಿಗೆ ತಾಲೂಕು ಕೇಂದ್ರಗಳಿಗೆ ಮೀನು ವಿತರಣೆಯಾಗುತ್ತೆ.ಅದರಂತೆ ಆಂದ್ರದಿಂದ ಮೀನುಗಳು ಲಾರಿಗಳಲ್ಲಿ ಭದ್ರಾವತಿಗೆ ಬರುವುದರಿಂದ ಇದು ಗಾಂಜಾ ಸಾಕಾಣಿಕೆಗೂ ರಹದಾರಿಯಾದಂತಾಗಿದೆ