ಗಾಂದಿ ಬಜಾರ್​ನಲ್ಲಿ ಕಳ್ಳರಿದ್ದಾರೆ ಎಚ್ಚರಿಕೆ! ಬಟ್ಟೆ ಮಾರ್ಕೆಟ್ ಹತ್ರ ಜ್ಯೂಸ್ ಕುಡಿದು ಬಿಲ್ ಕೊಡುವಷ್ಟರಲ್ಲಿ ಹೀಗಾಯ್ತು! ಓದಿ

Gold ornaments were reportedly stolen near a cloth market in Gandhi Bazar in Shivamogga

ಗಾಂದಿ ಬಜಾರ್​ನಲ್ಲಿ ಕಳ್ಳರಿದ್ದಾರೆ ಎಚ್ಚರಿಕೆ! ಬಟ್ಟೆ ಮಾರ್ಕೆಟ್ ಹತ್ರ ಜ್ಯೂಸ್ ಕುಡಿದು ಬಿಲ್ ಕೊಡುವಷ್ಟರಲ್ಲಿ  ಹೀಗಾಯ್ತು! ಓದಿ
Gold ornaments were reportedly stolen near a cloth market in Gandhi Bazar in Shivamogga

Shivamogga | Feb 11, 2024 |  ಶಿವಮೊಗ್ಗದಲ್ಲಿ ಕಳ್ಳತನ ಹೇಗೆ ನಡೆಯುತ್ತಿದೆ ಎಂದು ಹೇಳುವುದೇ ಕಷ್ಟವಾಗಿದೆ ಪೊಲೀಸ್ ಇಲಾಖೆಯ ಸಂಯಮ ಕಳ್ಳರಿಗೂ ವರವಾಗುತ್ತಿದೆ. ಇಷ್ಟು ದಿನ ಕೆಎಸ್​ಆರ್​ಟಿಸಿ ನಿಲ್ದಾಣದಲ್ಲಿ ನಡೆಯುತ್ತಿದ್ದ ಕಳ್ಳತನ ಇದೀಗ ಶಿವಮೊಗ್ಗದ ಗಾಂಧಿ ಬಜಾರ್ ​ಗೆ ಶಿಫ್ಟ್ ಆದಂತಿದೆ.  ಇದಕ್ಕೆ ಸಾಕ್ಷಿ ಎಂಬಂತಹ ಘಟನೆಯೊಂದು ಕಳೆದ ಏಳರಂದು ನಡೆದಿದ್ದು, ಈ ಸಂಬಂಧ ಇದೀಗ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ ನಲ್ಲಿ ಎಫ್​ಐಆರ್ ದಾಖಲಾಗಿದೆ 

ದೊಡ್ಡಪೇಟೆ ಪೊಲೀಸ್ ಸ್ಟೇಷನ್

ಶಿವಮೊಗ್ಗದ ಹಳ್ಳಿಯೊಂದರಿಂದ ಬಂದಿದ್ದ ಅಕ್ಕತಂಗಿಯರು ಹಳೆಯ ಶಿವಮೊಗ್ಗದ ಬಹುದೊಡ್ಡ ಭಾಗವಾದ ಗಾಂಧಿ ಬಜಾರ್​ನಲ್ಲಿ ಚಿನ್ನ ಖರೀದಿಸಿದ್ದಾರೆ. ಅಂಗಡಿಯೊಂದರಲ್ಲಿ ಚಿನ್ನ ಖರೀದಿಸಿ ಬಟ್ಟೆ ಮಾರ್ಕೆಟ್​ ಸಮೀಪ ತೆರಳಿದ್ದಾರೆ. ಅಲ್ಲಿಯು ಅಗತ್ಯದ ಚಿನ್ನಾಭರಣವನ್ನ ಖರೀದಿಸಿದ್ದಾರೆ. ಹೀಗೆ ಸುತ್ತಾಡಿದ ಅಕ್ಕ-ತಂಗಿಯರು ಆ ಬಳಿಕ ಮಾರ್ಕೆಟ್​ ಸಮೀಪದ ಕಬ್ಬಿನ ಜ್ಯೂಸ್ ಅಂಗಡಿಯಲ್ಲಿ ಜ್ಯೂಸ್ ಕೇಳಿ ತೆಗೆದುಕೊಂಡಿದ್ದಾರೆ. 

ಜ್ಯೂಸ್ ಕುಡಿದು ಹಣ ಕೊಡಲು ವ್ಯಾನಿಟಿ ಬ್ಯಾಗ್​ಗೆ ಕೈ ಹಾಕುವಾಗ ನೋಡಿದರೆ, ಅದರ ಜಿಪ್ ಅರ್ಧ ತೆಗೆದಿರುವುದು ಕಂಡಿದೆ. ತಕ್ಷಣ ಸಂಶಯ ಬಂದು ಬ್ಯಾಗ್ ಪೂರ್ತಿ ಓಪನ್ ಮಾಡಿದರೆ, ಅದರಲ್ಲಿ ಚಿನ್ನವಿದ್ದ ಪರ್ಸ್​ ಕಣ್ಮರೆಯಾಗಿದೆ. ಇದಕ್ಕೂ ಮೊದಲು ಪರೀಕ್ಷಿಸಿದಾಗ ಇದ್ದಿದ್ದ ಪರ್ಸ್​ ಜ್ಯೂಸ್​ ಕುಡಿದು ಬಿಲ್ ನೀಡುವಷ್ಟರಲ್ಲಿ ಮಾಯವಾಗಿತ್ತು. 

ಕೆಲವೇ ಕ್ಷಣದಲ್ಲಿ ಕೈ ಚಳಕ ತೋರಿದ ಕಳ್ಳ, ಚಿನ್ನ ಎಗರಿಸಿ ಮಾಯವಾಗಿದ್ದ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಅಕ್ಕತಂಗಿಯರ ಸುಮಾರು  37500/- ರೂ ಬೆಲೆ ಆಭರಣ ಪತ್ತೆ ಮಾಡಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.