ಮನೆಗೆ ಬಂದು ಮಕ್ಕಳಾಡಿಸುತ್ತಿದ್ದ ಎದುರುಮನೆ ಯುವಕನ ವಿರುದ್ಧ ₹15 ಲಕ್ಷ ಮೌಲ್ಯದ ಚಿನ್ನ ಕದ್ದ ಆರೋಪ
case has been registered at Tunganagar police station against a youth for allegedly stealing gold worth Rs 15 lakh from the opposite house
Shivamogga Feb 12, 2024 | ಎದುರು ಮನೆಯ ಯುವಕನೇ ಕಳ್ಳತನ ಮಾಡಿರುವ ಆರೋಪ ಸಂಬಂಧ ಶಿವಮೊಗ್ಗದ ತುಂಗಾನಗರ ಪೊಲೀಸ್ ಸ್ಟೇಷನ್ ನಲ್ಲಿ ಕಂಪ್ಲೆಂಟ್ ಆಗಿದ್ದು, ಈ ಕುರಿತಾಗಿ ಎಫ್ಐಆರ್ ಸಹ ದಾಖಲಾಗಿದೆ.
ತುಂಗಾನಗರ ಪೊಲೀಸ್ ಸ್ಟೇಷನ್
ಶಿವಮೊಗ್ಗ ನಗರದ ಹೊರವಲಯದ ಮಲವಗೊಪ್ಪದಲ್ಲಿ ಈ ಘಟನೆ ನಡೆದಿದೆ. ಎದುರು ಮನೆಯ ಯುವಕನ ಮೇಲೆ ಬರೋಬ್ಬರಿ 15.83 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ಕಳವು ಮಾಡಿರುವ ಆರೋಪ ಹೊರಿಸಲಾಗಿದೆ.
ಕಳೆದ ಫೆಬ್ರವರಿ 8ರಂದು ಕಳ್ಳತನ ನಡೆದಿದೆ. ಇಲ್ಲಿನ ನಿವಾಸಿಯೊಬ್ಬರ ಮನೆಯಲ್ಲಿ ಅವರ ಸಂಬಂಧಿಕರು ಚಿನ್ನಾಭರಣಗಳನ್ನು ಇಟ್ಟಿದ್ದಾರೆ ಎನ್ನಲಾಗಿದೆ. ಬೀರುವಿನಲ್ಲಿದ್ದ ಆಭರಣವನ್ನು ಎದುರು ಮನೆ ಯುವಕ ಕದ್ದಿದ್ದಾನೆ ಎಂದು ಆರೋಪಿಸಲಾಗಿದ.ಎ
ಆಗಾಗ ಮನೆಗೆ ಬರುತ್ತಿದ್ದ ಯುವಕ ಮನೆಯವರಿಗೆ ಆತ್ಮೀಯನಾಗಿದ್ದ. ಆತನಿಂದ ಸಣ್ಣಪುಟ್ಟ ಕೆಲಸಗಳನ್ನ ಮಾಡಿಸಿಕೊಳ್ಳುತ್ತಿದ್ದ ಯುವಕ ಫೆಬ್ರವರಿ 8 ರಂದು ಬೀರುವಿನ ಬಳಿ ನಿಂತಿರುವುದನ್ನ ಮಾಲೀಕರು ನೋಡಿದ್ದಾರೆ. ಆತ ಏನೋ ಕದಿಯುತ್ತಿದ್ದಾನೆ ಎಂದು ಎಣಿಸಿ ಪ್ರಶ್ನಿಸಿದ್ದಾರೆ. ಆ ವೇಳೆ ಅಲ್ಲಿಂದ ಆತ ಪರಾರಿಯಾಗಿದ್ದಾನೆ. ಆನಂತರ ಪರಿಶೀಲಿಸಿದಾಗ ಬೀರುವಿನಲ್ಲಿದ್ದ 286 ಗ್ರಾಂ ಚಿನ್ನಾಭರಣ ಮತ್ತು 10 ಸಾವಿರ ರೂ. ನಗದು ಕಳವು ಆಗಿರುವುದು ಗಮನಕ್ಕೆ ಬಂದಿದೆ.
ಈ ಸಂಬಂಧ ಯುವಕನ ವಿರುದ್ಧ ಮನೆಯ ಮಾಲೀಕರು ತುಂಗಾನಗರ ಪೊಲೀಸ್ ಸ್ಟೇಷನ್ಗೆ ದೂರು ನೀಡಿದ್ದು ಎಫ್ಐಆರ್ ಸಹ ದಾಖಲಾಗಿದೆ. +