ದೊಡ್ಡಪೇಟೆ ಪೊಲೀಸ್ ಸ್ಟೇಷನ್ ಲಿಮಿಟ್ಸ್​ನಲ್ಲಿ ವ್ಯಕ್ತಿಯೊಬ್ಬನಿಗೆ ಅಪರಿಚಿತರಿಂದ ಇರಿತ!

ಹಂಚಿಕೊಳ್ಳಿ
WhatsApp Facebook X Telegram

Shivamogga Mar 5, 2024 Man stabbed , Doddapete police station limits|  ಶಿವಮೊಗ್ಗದಲ್ಲಿ ಮಾರಿಹಬ್ಬದ ಸಂಭ್ರಮ ಮನೆ ಮಾಡುತ್ತಿದೆ. ಇದರ ನಡುವೆ ಸಲ್ಲದ ಘಟನೆಯೊಂದು ನಡೆದಿದೆ. ಮಿಳಘಟ್ಟದ ನಿವಾಸಿ ಎನ್ನಲಾದ ವ್ಯಕ್ತಿಯೊಬ್ಬರಿಗೆ ಇರಿದಿರುವ ಬಗ್ಗೆ ವರದಿಯಾಗಿದೆ. 48 ವರ್ಷದ ಕಾರ್ತಿಕ್ ಎಂಬವರಿಗೆ  ಹರಿತವಾದ ಆಯುಧದಿಂದ ಇರಿಯಲಾಗಿದೆ. 

ಅಪರಿಚಿತ ಇಬ್ಬರು ವ್ಯಕ್ತಿಗಳು ಶಿವಮೊಗ್ಗ ನಗರ ದ  ರಾಯಲ್ ಆರ್ಕೇಡ್ ಹೋಟೆಲ್ ಹಿಂಭಾಗದ ರಸ್ತೆಯಲ್ಲಿ  ಕಾರ್ತಿಕ್ ಎಂಬವರ  ಮೇಲೆ ಅಟ್ಯಾಕ್ ಮಾಡಿದ್ದಾರೆ ಎಂದು ಹೇಳಲಾಗಿದೆ. ಆ ಬಳಿಕ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಕಾರ್ತಿಕ್​ರವರ ಕೈಗೆ ಗಾಯವಾಗಿದೆ. ಅವರನ್ನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ  ಅಡ್ಮಿಟ್ ಮಾಡಲಾಗಿದೆ. ದೊಡ್ಡಪೇಟೆ ಪೊಲೀಸ್ ಸ್ಟೇಷನ್ ಲಿಮಿಟ್ಸ್​ನಲ್ಲಿ ಘಟನೆ ನಡೆದಿದ್ದು ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ. ಇನ್ನೂ ಘಟನೆಯ ನೈಜತೆ ಹಾಗೂ ಇನ್ನಷ್ಟು ವಿವರಗಳ ಲಭ್ಯವಾಗಿಲ್ಲ

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor