108 ವಿದ್ಯಾರ್ಥಿನಿಯರು ಏಕಕಾಲದಲ್ಲಿ ಅಸ್ವಸ್ಥರಾಗಿ ಮೆಗ್ಗಾನ್ ಆಸ್ಪತ್ರೆಗೆ ಬಂದಾಗ ಚಿತ್ರಣವೇ ಬದಲಾಗಿದ್ದು ಹೇಗೆ..? ವೈದ್ಯರು ಸಿಬ್ಬಂದಿಗಳು ಸಮರೋಪಾದಿಯಲ್ಲಿ ತೊಡಗಿಸಿಕೊಂಡ ರೀತಿಗೆ ಅಲ್ಲಿದ್ದವರೇ ಫಿದಾ....ಎಲ್ಲಾ ವಿದ್ಯಾರ್ಥಿನಿಯರು ಔಟ್ ಆಫ್ ಡೆಂಜರ್ ಆಗಿದ್ದೇಗೆ ಗೊತ್ತಾ?

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಎಂದರೆ ತಕ್ಷಣಕ್ಕೆ ಮೂಗುಮೂರಿಯುವವರೇ ಹೆಚ್ಚು. ಸರ್ಕಾರಿ ಆಸ್ಪತ್ರೆ ಎಂದರೆ..ಎಲ್ಲವೂ ಎಲ್ಲಾ ಕಾಲಕ್ಕೂ ಸರಿಯಾಗಿರೊಲ್ಲ ಎಂಬುದು ನಿರ್ವಿವಾದ. ಸದಾ ಒಂದಿಲ್ಲೊಂದು ವಿವಾದದಿಂದ ಸುದ್ದಿಯಾಗುತ್ತಿದ್ದ ಮೆಗ್ಗಾನ್ ಆಸ್ಪತ್ರೆ ನೆನ್ನೆಯ ಆ ಒಂದು ಘಟನೆ ಎಲ್ಲಾ ಅಪವಾಧಗಳ ಪೊರೆಯನ್ನು ಕಳಚುವಂತೆ ಮಾಡಿತು.

ಸದಾ ಹೊಳ ಮತ್ತು ಹೊರ ರೋಗಿಗಳಿಂದ ಗಿಜಿಗುಡುತ್ತಿದ್ದ ಮೆಗ್ಗಾನ್ ಆಸ್ಪತ್ರೆಗೆ ನೆನ್ನೆ ಸಂಜೆ ಸುಮಾರು 8 ಗಂಟೆ ಹೊತ್ತಿಗೆ ಅಂಬುಲೆನ್ಸ್ ನಲ್ಲಿ ಸರಣಿ ರೂಪದಲ್ಲಿ ಅಸ್ವಸ್ಥಗೊಂಡು ಬಂದ ವಿದ್ಯಾರ್ಥಿನಿಯರ ಗೋಳು ಹೇಳತೀರದು. ಶಿವಮೊಗ್ಗ ಹೊರವಲಯದ ಮೇಲಿನ ಹನಸವಾಡಿ ಮೊರಾರ್ಜಿ ಅಲ್ಪಸಂಖ್ಯಾತ ವಸತಿ ಶಾಲೆಯ 108 ವಿದ್ಯಾರ್ಥಿನಿಯರು ಫುಡ್ ಪಾಯಿಸನಿಂಗ್ ನಿಂದ ವಾಂತಿ ಮಾಡಿಕೊಂಡು ಬಳಲಿ ಬೆಂಡಾಗಿದ್ದರು. ಹತ್ತರಿಂದ ಪಿಯು ಕಾಲೇಜಿನ ವಿದ್ಯಾರ್ಥಿನಿಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಅಂಬುಲೆನ್ಸ್ ನಲ್ಲಿ ಮಕ್ಕಳನ್ನು ಸರಣಿ ರೂಪದಲ್ಲಿ ಸ್ಟ್ರೆಚ್ಚರ್ ನಲ್ಲಿ ತರುವಾಗ ಮಕ್ಕಳ ಕೂಗು ಮುಗಿಲು ಮುಟ್ಟಿತ್ತು. ಅಪ್ಪಅಮ್ಮ ರಿಂದ ದೂರ ಉಳಿದು ವ್ಯಾಸಂಗ ಮಾಡುತ್ತಿರುವ ಈ ಮಕ್ಕಳು ಅಪ್ಪಾ ಅಮ್ಮಾ ಎನ್ನುವಾರ ಅಲ್ಲಿ ನೆರೆದಿದ್ದವರ ಕರಳು ಚುರ್ ಎನ್ನುವಂತಿತ್ತು.

ಹೈ ಅಲರ್ಟ್ ಆದ ಪಿಜಿ ವೈದ್ಯರು                                                          

ಮಕ್ಕಳು ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಅಲ್ಲಿದ್ದ ಪಿಜಿ ವೈದ್ಯರ ತಂಡ ತಕ್ಷಣವೇ ಎಚ್ಚೆತ್ತುಕೊಂಡಿತು...ಇಡೀ ಆಸ್ಪತ್ರೆಯ ವಾತಾವರಣವೇ ಸಿನಿಮೀಯ ರೀತಿಯಲ್ಲಿ ಬದಲಾಯಿತು. ತಕ್ಷಣಕ್ಕೆ ಜ್ಯೂನಿಯರ್ ವೈದ್ಯರ ತಂಡ ಸಮರೋಪಾದಿಯಲ್ಲಿ ವಿದ್ಯಾರ್ಥಿನಿಯರ ಚಿಕಿತ್ಸೆಗೆ ಮುಂದಾಯಿತು. ವಾರ್ಡ್ ನ ಇನ್ ಚಾರ್ಚ್ ನರ್ಸ್ ಗಳು, ಆಯಗಳು ಮತ್ತು ಇತರೆ ಸಿಬ್ಬಂದಿಗಳು ಮಕ್ಕಳನ್ನು ತಕ್ಷಣಕ್ಕೆ ಬೆಡ್ ಗೆ ಶಿಫ್ಟ್ ಮಾಡುವ ಕಾರ್ಯದಲ್ಲಿ ತೊಡಗಿದರು.

 ಒಂದೊಂದು ಸ್ಟ್ರೆಚ್ಚರ್ ನಲ್ಲಿ ನಾಲ್ಕೈದು ಮಕ್ಕಳು

ಒಂದೊಂದು ಅಂಬುಲೆನ್ಸ್ ಗಳು ಮೆಗ್ಗಾನ್ ಆವರಣದಲ್ಲಿ ಬಂದು ನಿಂತಾಗ ಎಲ್ಲರಲ್ಲೂ ಭಯ ಆವರಿಸಿತ್ತು. ಮಕ್ಕಳು ಸುಸ್ತಾಗಿ ಈ ರೀತಿ ಒಂದೊಂದಾಗಿ ಬರುತ್ತಿರುವುದನ್ನು ಕಂಡ ಯುವ ವೈದ್ಯರ ತಂಡ ಕೂಡಲೇ ಆಸ್ಪತ್ರೆಯ ಎಲ್ಲಾ ಸ್ಟ್ರೇಚ್ಚರ್ ಗಳನ್ನು ತರುವಂತೆ ಸೂಚಿಸಿತು. ಎಲ್ಲಾ ಸಿಬ್ಬಂದಿಗಳು ಇದ್ದ ಎಲ್ಲಾ ಸ್ಪ್ಟೆಚ್ಚರ್ ಗಳನ್ನು ತಂದು ಮಕ್ಕಳನ್ನು ಕರೆದೊಯ್ಯಲು ಅಣಿಯಾದ್ರು.ಒಂದೊಂದು ಸ್ಟ್ರೆಚ್ಚರ್ ನಲ್ಲಿ ನಾಲ್ಕೈದು ಮಕ್ಕಳನ್ನು ಕರೆದೊಯ್ದು ವಾರ್ಡ್ ಗೆ ಶಿಫ್ಟ್ ಮಾಡಲಾಯಿತು.

ಖುದ್ದು ಕಾರ್ಯಾಚರಣೆಗಿಳಿದ ವೈದ್ಯಕೀಯ ಅಧೀಕ್ಷಕ ಶ್ರೀಧರ್

ಮಕ್ಕಳು ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಸಕಾಲಕ್ಕೆ ಬಂದ ಆಸ್ಪತ್ರೆಯ ವೈದ್ಯಕೀಯ ಮುಖ್ಯ ಅಧೀಕ್ಷಕ ಶ್ರೀಧರ್ ರವರು ಖುದ್ದು ಮಕ್ಕಳ ಚಿಕಿತ್ಸೆಗೆ ಮುಂದಾದ್ರು. ಮಕ್ಕಳಿಗ ಏನು ಆಗುವುದಿಲ್ಲ ಎಂದು ಧೈರ್ಯ ತುಂಬಿದರು. ಯುವ ವೈದ್ಯರ ತಂಡದೊಂದಿಗೆ ಕಾರ್ಯಾಚರಣೆಗಿಳಿದ ಶ್ರೀಧರ್ ಎಲ್ಲಾ ಸಿಬ್ಬಂದಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚಿಕಿತ್ಸೆ ಕೊಡಿಸುವಲ್ಲಿ ಯಶಸ್ವಿಯಾದ್ರು. ಅಲ್ಲದೆ ವೈರಲ್ ವಾರ್ಡ್ ನ್ನು ಅಸ್ವಸ್ಥ ಮಕ್ಕಳಿಗಾಗಿ ಮೀಸಲಿಡಲಾಗಿತ್ತು. ಹೀಗಾಗಿ ಸರಣಿ ರೂಪದಲ್ಲಿ ಅಸ್ವಸ್ಥಗೊಂಡು ಬಂದ ವದ್ಯಾರ್ಥಿನಿಯರನ್ನು ತಕ್ಷಣ ವಾರ್ಡ್ ಗೆ ಶಿಫ್ಟ್ ಮಾಡಲು ಅನುಕೂಲವಾಯ್ತು.

 ಇನ್ನು ವಿದ್ಯಾರ್ಥಿನಿಯರು ವಾಂತಿ ಮಾಡಿಕೊಳ್ಳುತ್ತಿದ್ದಾಗ ಅದನ್ನು ಬಾಚಿ ಬಳಿದು ತಕ್ಷಣ ಶೌಚಾಲಯವನ್ನು ಶುಚಿತ್ವಗೊಳಿಸುತ್ತಿದ್ದ ಸಹಾಯಕಿಯರ ಆಯಗಳ ಕೆಲಸ ನೋಡಲು ಯಾತನೆಯಂತಿದ್ದರೂ, ಅವರ ಕಾರ್ಯವೈಖರಿಗೆ  ಮೆಚ್ಚುಗೆ ವ್ಯಕ್ತಪಡಿಸಲೇಬೇಕು. ಸರಣಿ ಸಾಲಿನಲ್ಲಿ ಬಂದ 108 ವಿದ್ಯಾರ್ಥಿನಿಯರಿಗೆ ಉತ್ತಮ ಚಿಕಿತ್ಸೆ ನೀಡಿ ಅವರೆಲ್ಲರ ಅರೋಗ್ಯವನ್ನು ಸುಧಾರಣೆಯತ್ತ ತರುವಲ್ಲಿ ಎಲ್ಲರ ಶ್ರಮ ಅಡಗಿದೆ.

 ಜಿಲ್ಲಾ ಸರ್ಜನ್ ಸಿದ್ದನಗೌಡ, ಪಿಜಿ ವೈದ್ಯರು ಮತ್ತು ನರ್ಸಿಂಗ್ ಸ್ಟಾಫ್, ವಾರ್ಡ್ ಸೂಪರ್ ವೈಸರ್ ಮಂಜುಳಾ, ನರ್ಸಿಂಗ್ ಅಧೀಕ್ಷಕಿ ರಾಜಮ್ಮ  ವಾರ್ಡ್ ಗ್ರೂಪ್ ಡಿ ನೌಕರರು, ಹಾಗು ಆರೋಗ್ಯ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಲ್ಲಾ ಸರ್ವೇಕ್ಷಣಾಧಿಕಾರಿ ಕಛೇರಿಯ ಡಾಕ್ಟರ್ ಮಲ್ಲಪ್ಪ ಓ, ಜಿಲ್ಲಾ ಎಪಿಡಮಾಲಾಜಿಸ್ಟ್ ಕೃಷ್ಣಮೂರ್ತಿ, ಸಿನಿಯರ್ ಲ್ಯಾಬ್ ಟೆಕ್ನಿಕಲ್ ಅಧಿಕಾರಿ ನರಸಿಂಹ ಕೆ ಅಹೋರಾತ್ರಿ ಮಕ್ಕಳ ಹಾರೈಕೆಯಲ್ಲಿ ಪ್ರಮುಖ ಪಾತ್ರವಹಿಸಿದವರಾಗಿದ್ದಾರೆ.ಇವರೆಲ್ಲರು ವಾರ್ ಫೂಟ್ ನಲ್ಲಿ ಕೆಲಸ ಮಾಡಿದ ಪರಿಣಾಮ 108 ವಿದ್ಯಾರ್ಥಿನಿಯರು ಈಗ ಆರೋಗ್ಯವಾಗಿದ್ದಾರೆ.