ಸೀಗೆಹಟ್ಟಿ ಮಹಿಳೆ ಮಿಸ್ಸಿಂಗ್! ಶಿವಮೊಗ್ಗ ಬಸ್​ ನಿಲ್ದಾಣದಲ್ಲಿ ಭದ್ರಾವತಿ ನಿವಾಸಿ ನಾಪತ್ತೆ! ರೈಲ್ವೆ ಹಳಿ ಮೇಲೆ ಅಪರಿಚಿತನ ನಿಗೂಢ ಸಾವು!

Missing the woman of Seegehatti! Bhadravathi resident goes missing from Shivamogga bus stand Mysterious death of stranger on railway track!

ಸೀಗೆಹಟ್ಟಿ ಮಹಿಳೆ ಮಿಸ್ಸಿಂಗ್!  ಶಿವಮೊಗ್ಗ ಬಸ್​ ನಿಲ್ದಾಣದಲ್ಲಿ ಭದ್ರಾವತಿ ನಿವಾಸಿ ನಾಪತ್ತೆ! ರೈಲ್ವೆ ಹಳಿ ಮೇಲೆ ಅಪರಿಚಿತನ ನಿಗೂಢ ಸಾವು!

Chikkamagaluru | Jan 31, 2024 |  ಮಾತು ಬಾರದ ಪುರುಷ ಕಾಣೆ

ಗಂಗಪ್ಪ ಹತ್ತಿ, ಸುಮಾರು 60 ವರ್ಷ, ಜನ್ನಾಪುರ, ಭದ್ರಾವತಿ ಇವರು 2023 ರ ಡಿ.9 ರಂದು ಶಿವಮೊಗ್ಗ ಕೆ. ಎಸ್. ಆರ್. ಟಿ. ಸಿ ಬಸ್ ನಿಲ್ದಾಣದಿಂದ  ಕಾಣೆಯಾಗಿದ್ದಾರೆ.   

ದೊಡ್ಡಪೇಟೆ ಪೊಲೀಸ್  ಠಾಣೆ

ಕಾಣೆಯಾದ ಗಂಗಪ್ಪ ಸುಮಾರು 4 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಬಣ್ಣ, ಕೋಲು ಮುಖ, ಬಿಳಿ ಮತ್ತು ಕಪ್ಪು ಬಣ್ಣದ ಗಡ್ಡ, ತಲೆಯಲ್ಲಿ ಕೆಂಪು ಟೋಪಿ, ಬ್ರೌನ್ ಕಲರ್ ಶರ್ಟ್, ಗ್ರೇ ಕಲರ್ ಪ್ಯಾಂಟ್ ಧರಿಸಿದ್ದು, ಮಾತನಾಡಲು ಬರುವುದಿಲ್ಲ. ಕೈ ಸನ್ನೆ ಮಾಡುತ್ತಾರೆ. ಈ ವ್ಯಕ್ತಿಯ ಸುಳಿವು ಯಾರಿಗಾದರೂ ಪತ್ತೆಯಾದರೆ ನಗರದ ದೊಡ್ಡಪೇಟೆ ಪೊಲೀಸ್  ಠಾಣೆಗೆ ತಿಳಿಸಬಹುದುದೆಂದು ಪ್ರಕಟಣೆ ತಿಳಿಸಿದೆ.

ಶಿವಮೊಗ್ಗ- ಭದ್ರಾವತಿ ರೈಲ್ವೆ ಮಧ್ಯೆ ಅಪರಿಚಿತ ಶವ ಪತ್ತೆ

ಶಿವಮೊಗ್ಗ-ಭದ್ರಾವತಿ ರೈಲು ನಿಲ್ದಾಣಗಳ  ಮಧ್ಯೆ ರೈಲ್ವೆ ಕಿಮಿ ನಂ 44/500-600 ರ ಭದ್ರಾವತಿ ರೈಲು ನಿಲ್ದಾಣದ ವೇದಿಕೆ ನಂ 1 ರ ರೈಲ್ವೆ ಹಳಿಗಳಲ್ಲಿ ಸುಮಾರು 60 ವರ್ಷದ ಗಂಡಸಿನ ಶವ ಪತ್ತೆಯಾಗಿದೆ. ಜ.29 ರಂದು ರಾತ್ರಿ ಈ ಘಟನೆ ನೆಡೆದಿದು ಮೃತ ದೇಹವನ್ನು ವಾರಸುದಾರರ  ಪತ್ತೆ ಕುರಿತು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲಾಗಿದೆ.

ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ

ಮೃತನು ಸುಮಾರು 55 ರಿಂದ 60 ವರ್ಷ, 5.8 ಅಡಿ ಎತ್ತರ, ದೃಢಕಾಯ ಶರೀರ, ಗೋಧಿ ಮೈಬಣ್ಣ, ದುಂಡನೆಯ ಮುಖ, ಅಗಲವಾದ ಹಣೆ ದಪ್ಪ ಬಿಳಿ ಮೀಸೆ ತಲೆಯಲ್ಲಿ 2 ಇಂಚು ಬಿಳಿ ಮಿಶ್ರಿತ ಕಪ್ಪು ಕೂದಲು, ಸುಮಾರು 1 ಇಂಚು ಉದ್ದದ ಬಿಳಿ ಮೀಸೆ ಗಡ್ಡ ಬಿಟ್ಟಿದ್ದು, ಕಣ್ಣುಗಳು ಅರೆತೆರೆದಿರುತ್ತವೆ. 

ಆಕಾಶ ನೀಲಿ ಬಣ್ಣದ ತುಂಬು ತೋಳಿನ ಶರ್ಟ್ ಹರಿದು ರಕ್ತಮಯವಾಗಿರುತ್ತದೆ, ಕಪ್ಪು ಬಣ್ಣದ ಪ್ಯಾಂಟ್ ಹಾಗೂ ನೀಲಿ ಕೆಂಪು ಬಣ್ಣದ ಚಪ್ಪಲಿ ಧರಿಸಿರುತ್ತಾನೆ. ಮೃತರ ವಾರಸುದಾರರು ಯಾರಾದರೂ ಇದ್ದಲ್ಲಿ ಶಿವಮೊಗ್ಗ ರೈಲ್ವೆ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ದೂ.ಸಂ: 08182 222974, 9480802124 ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

ಮಹಿಳೆ ಕಾಣೆ

ಮಂಜುಳಮ್ಮ, ಸುಮಾರು 65 ವರ್ಷ, ಸೀಗೆಹಟ್ಟಿ, ಶಿವಮೊಗ್ಗ ಇವರು ಜ.22 ರಂದು ಮನೆಯಿಂದ ಕಾಣೆಯಾಗಿರುತ್ತಾರೆ. ಕಾಣೆಯಾದ ಮಂಜುಳಮ್ಮ ಸುಮಾರು 5 ಅಡಿ ಎತ್ತರ, ಕೋಲು ಮುಖ, ಸಾಧಾರಾಣ ಮೈಕಟ್ಟು, ಗೋಧಿ ಮೈಬಣ್ಣವಿದ್ದು ತಲೆಯಲ್ಲಿ 8 ಇಂಚು ಉದ್ದದ ಕಪ್ಪು ಕೂದಲು ಇರುತ್ತದೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ ಜಾಕೆಟ್ ಮತ್ತು ಸೀರೆ ಧರಿಸಿರುತ್ತಾರೆ. ಕನ್ನಡ ಭಾಷೆ ಮಾತನಾಡುತ್ತಾರೆ.    ಈ ಮಹಿಳೆಯ ಸುಳಿವು ಯಾರಿಗಾದರೂ ಪತ್ತೆಯಾದಲ್ಲಿ ನಗರದ ದೊಡ್ಡಪೇಟ ಪೊಲೀಸ್ ಠಾಣೆಗೆ ತಿಳಿಸಬಹುದುದೆಂದು ಪ್ರಕಟಣೆ ತಿಳಿಸಿದೆ.