ಕುರಿಗೆ ಟ್ರ್ಯಾಕ್ಟರ್‌ ಡಿಕ್ಕಿ ಪೊಲೀಸರ ಎಂಟ್ರಿ ಬಳಿಕ ನಿಂತ ಗಲಾಟೆ | ಕಾಲೇಜು ಬಳಿ ಕೇಳಿಸಿದ ಯುವತಿಯ ಕಿರುಚಾಟದ ಧ್ವನಿ | 112 ಸುದ್ದಿ

two incidents in Bhadravathi that required police intervention Newtown police station 

ಕುರಿಗೆ ಟ್ರ್ಯಾಕ್ಟರ್‌ ಡಿಕ್ಕಿ  ಪೊಲೀಸರ ಎಂಟ್ರಿ ಬಳಿಕ ನಿಂತ ಗಲಾಟೆ  | ಕಾಲೇಜು ಬಳಿ ಕೇಳಿಸಿದ ಯುವತಿಯ ಕಿರುಚಾಟದ ಧ್ವನಿ | 112 ಸುದ್ದಿ
Newtown police station 

SHIVAMOGGA | MALENADUTODAY NEWS | Jun 15, 2024  ಮಲೆನಾಡು ಟುಡೆ 

ಕುರಿಯೊಂದಕ್ಕೆ ಟ್ರ್ಯಾಕ್ಟರ್‌ ಡಿಕ್ಕಿಯಾದ ವಿಚಾರ ದೊಡ್ಡ ಗಲಾಟೆಗೆ ಕಾರಣವಾದ ಬಗ್ಗೆ ಭದ್ರಾವತಿ ಪೇಪರ್‌ ಟೌನ್‌ ವ್ಯಾಪ್ತಿಯಲ್ಲಿ ವರದಿಯಾಗಿದೆ.  ಪೇಪರ್ ಟೌನ್ ಠಾಣಾ ಲಿಮಿಟ್ಸ್‌ನಲ್ಲಿ ಟ್ರಾಕ್ಟರ್ ಒಂದು ಕುರಿಗೆ ಡಿಕ್ಕಿ ಹೊಡೆದಿದೆ ಈ ವಿಚಾರದಲ್ಲಿ ಕುರಿಯ ಮಾಲೀಕನ ಜೊತೆಗೆ ಗಲಾಟೆಯಾಗಿದೆ. ಗಲಾಟೆ ಕೈ ಮೀರುವ ಹಂತಕ್ಕೆ ಹೋದಾಗ ಸ್ಥಳೀಯರು ಪೊಲೀಸರಿಗೆ ಫೋನಾಯಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸ್‌ ಸಿಬ್ಬಂದಿ ಗಲಾಟೆ ನಿಲ್ಲಿಸಿ ಪೊಲೀಸ್‌ ಭಾಷೆಯಲ್ಲಿ ತಿಳುವಳಿಕೆ ಹೇಳಿದ್ದಾರೆ. 

ಅತ್ತ ಭದ್ರಾವತಿಯ ನ್ಯೂಟೌನ್‌ ಪೊಲೀಸ್‌ ಠಾಣೆ ಲಿಮಿಟ್ಸ್‌ನಲ್ಲಿ ಬರುವ ಐಟಿಐ ಕಾಲೇಜಿನ ಬಳಿಯಲ್ಲಿ ವಿದ್ಯಾರ್ಥಿಗಳಿಗೆ ಯುವತಿಯೊಬ್ಬಳು ಕೂಗು ಸದ್ದು ಕೇಳಿದೆ. ಜೋರಾಗಿ ಕೇಳುತ್ತಿದ್ದ ಸದ್ದಿನ ಬಗ್ಗೆ ಹುಡುಕಾಡಿದ ವಿದ್ಯಾರ್ಥಿಗಳು ಪೆಟ್ಟಿಗೆ ಅಂಗಡಿಯೊಂದರ ಬಳಿ ಸದ್ದು ಕೇಳುತ್ತಿರುವುದು ಖಚಿತಪಡಿಸಿಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಹಿಳಾ ಸಿಬ್ಬಂದಿಯ ಜೊತೆಗೆ ಬಂದ ಪೊಲೀಸರು ಹುಡುಗಿಯೊಬ್ಬಳು ಇರುವಿಕೆಯನ್ನ ಖಚಿತ ಪಡಿಸಿಕೊಂಡು ಅವರ ಪೋಷಕರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆಸಿ ಆಕೆಯನ್ನು ಅವರ ಸುಪರ್ಧಿಗೆ ಒಪ್ಪಿಸಿದ್ದಾರೆ.

There were two incidents in Bhadravathi that required police intervention. Newtown police station