ಮಾಲ್‌ನಂತೆ ಸಿನಿಪ್ರಿಯರನ್ನ ಸ್ವಾಗತಿಸಲು ಹೈಟೆಕ್‌ ಆಗುತ್ತಿದೆ ಮಲ್ಲಿಕಾರ್ಜುನ್‌ ಥಿಯೇಟರ್‌! ಯಾವಾಗ ರೀ ಓಪನ್‌?

Mallikarjun Theater in Shivamogga is being renovated and transformed into a mall-like theater. Mallikarjun Theater and HPC Theater

ಮಾಲ್‌ನಂತೆ ಸಿನಿಪ್ರಿಯರನ್ನ ಸ್ವಾಗತಿಸಲು ಹೈಟೆಕ್‌ ಆಗುತ್ತಿದೆ ಮಲ್ಲಿಕಾರ್ಜುನ್‌ ಥಿಯೇಟರ್‌! ಯಾವಾಗ ರೀ ಓಪನ್‌?
Mallikarjun Theater in Shivamogga

SHIVAMOGGA | MALENADUTODAY NEWS | Jun 15, 2024  ಮಲೆನಾಡು ಟುಡೆ 

ಶಿವಮೊಗ್ಗದ ಮಲ್ಲಿಕಾರ್ಜುನ್‌ ಟಾಕೀಸ್‌ಗೆ ಹೊಸಲುಕ್‌ ಬರುತ್ತಿದೆ. ರಿನೋವೇಷನ್‌ಗಾಗಿ ಕೆಲದಿನಗಳಿಂದ ನಗರದ ಹೃದಯ ಭಾಗದಲ್ಲಿರುವ ಮಲ್ಲಿಕಾರ್ಜುನ ಟಾಕೀಸ್‌ನ್ನ ಬಂದ್‌ ಮಾಡಲಾಗಿತ್ತು. ಇದೀಗ ಮಲ್ಲಿಕಾರ್ಜುನ ಥಿಯೇಟರ್‌ ಮಾಲ್‌ ಸ್ವರೂಪದಲ್ಲಿ ಬದಲಾಗುತ್ತಿದ್ದು, ಮಾಲ್‌ಗಳಲ್ಲಿನ ಎಕ್ಸಪೀರಿಯನ್ಸ್‌ನ್ನ ತನ್ನ ಥಿಯೇಟರ್‌ನಲ್ಲಿ ನೀಡಲು ಮಾಲೀಕರು ಶ್ರಮಿಸುತ್ತಿದ್ದಾರೆ. 

ಸೀನಪ್ಪ ಶೆಟ್ಟಿ ಸರ್ಕಲ್‌ (ಗೋಪಿ ಸರ್ಕಲ್)‌ ಬಳಿ ಮಲ್ಲಿಕಾರ್ಜುನ್‌ ಹಾಗೂ ಹೆಚ್‌ಪಿಸಿ ಥಿಯೇಟರ್‌ಗಳು ಶಿವಮೊಗ್ಗದ ಐಕಾನ್‌ಗಳಾಗಿ ಮೆರೆದ ಥಿಯೇಟರ್‌ಗಳು. ಈ ಮಾಲ್‌ ಕಾಲದಲ್ಲಿ ಥಿಯೇಟರ್‌ಗಳು ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿವೆ. ಈ ಸನ್ನಿವೇಶದಲ್ಲಿ ಮಲ್ಲಿಕಾರ್ಜುನ ಥಿಯೇಟರ್‌ ಸಹ ಬದಲಾವಣೆಗೆ ಒಗ್ಗಿಕೊಳ್ಳುವ ಅನಿವಾರ್ಯತೆ ಎದುರಾಗಿತ್ತು. ಹೀಗಾಗಿ ಆದುನಿಕ ಟೆಕ್ನಾಲಿಜಿಗೆ ತಕ್ಕಂತೆ ಮಲ್ಲಿಕಾರ್ಜುನ ಚಿತ್ರಮಂದಿರವನ್ನ ಇದೇ ತಿಂಗಳ ಜೂನ್‌ ಆರಂಭದಲ್ಲಿ ಬಂದ್‌ ಮಾಡಲಾಗಿತ್ತು. 

ಇದೀಗ ಥಿಯೇಟರ್‌ಗೆ ಹೈಟೆಕ್‌ ಸ್ಪರ್ಶ ನೀಡುವ ಎಲ್ಲಾ ಕೆಲಸಗಳು ನಡೆಯುತ್ತಿದ್ದು, ವಿಶೇಷವಾಗಿ ಕುರ್ಚಿ ಹಾಗೂ ಸ್ಕ್ರೀನ್‌ ಹೊಸದಾಗಿ ಅಳವಡಿಸಲಾಗುತ್ತಿದೆ. ಅಲ್ಲದೆ ಇಡೀ ಥಿಯೇಟರ್‌ ಗೆ ಏಸಿ ಅಳವಡಿಸಲಾಗುತ್ತಿದೆ. ಬಹುತೇಕ ಬರುವ ಆಗಸ್ಟ್‌ನಲ್ಲಿ ಥಿಯೇಟರ್‌ ರಿಓಪನ್‌ ಆಗುವ ಸಾಧ್ಯತೆ ಇದೆ. ಈ ಬಗ್ಗೆ ಎಕ್ಸ್‌ ಖಾತೆಯಲ್ಲಿ ವ್ಯಕ್ತಿಯೊಬ್ಬರು ಮಲ್ಲಿಕಾರ್ಜುನ ಥಿಯೇಟರ್‌ ಬದಲಾಗುತ್ತಿರುವ ಫೋಟೋಗಳನ್ನ ಪೋಸ್ಟ್‌ ಮಾಡಿದ್ದಾರೆ.  

Mallikarjun Theater in Shivamogga is being renovated and transformed into a mall-like theater. Mallikarjun Theater and HPC Theater, both iconic landmarks in Shivamogga, are adapting to the changing times and the rise of malls. Photos of the ongoing renovation have been shared on social media.