ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಖಾಸಗಿ ಲಾಡ್ಜ್ ವೊಂದರಲ್ಲಿ ಮರ್ಡರ್ ಆಗಿದೆ. ಹಾಸನ (hassan) ಮೂಲದ ಪರ್ವೇಜ್ ಖಾನ್ ಎಂಬಾತನ ಕೊಲೆಯಾಗಿದೆ. ಪ್ರೇಯಸಿಯೇ ಈ ಕೊಲೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ.
Shivmogga : ಶಿವಮೊಗ್ಗದಲ್ಲಿ ಒಂದೇ ಕುಟುಂಬದ ಮೂವರ ಆತ್ಮಹತ್ಯೆ! ಕಾರಣವೇನು?
ಹಾಸನದ ಚೆನ್ನರಾಯಪಟ್ಟಣದ ಮೂಲದ ಆಯೇಶಾ ಎಂಬಾಕೆ ಮತ್ತು ಪರ್ವೇಜ್ ಖಾನ್ ಎಂಬ ಜಾವಗಲ್ ಮೂಲದ ಇಬ್ಬರು ಕಳೆದ ಮೂರುನಾಲ್ಕು ವರ್ಷಗಳಿಂದ ಸಂಬಂಧ ಹೊಂದಿದ್ದರು ಎನ್ನಲಾಗಿದೆ.
ಇದೇ ವಿಚಾರಕ್ಕೆ ಪತಿ ಆಯೇಶಾರನ್ನು ಬಿಟ್ಟಿದ್ದ ಎನ್ನಲಾಗಿದೆ. ಈ ನಡುವೆ ನಿನ್ನೆ ಪರ್ವೇಜ್ ಹಾಗೂ ಆಯೇಶಾ ಭದ್ರಾವತಿಗೆ ಬಂದಿದ್ದಾರೆ. ಅಲ್ಲಿನ ಲಾಡ್ಜ್ ವೊಂದರಲ್ಲಿ ರೂಮ್ ಮಾಡಿಕೊಂಡಿದ್ದಾರೆ.
ರೂಮ್ನಲ್ಲಿ ಆಯೇಶಾ ಹಾಗೂ ಪರ್ವೇಜ್ ನಡುವೆ ಜಗಳವಾಗಿದೆ ಎನ್ನಲಾಗಿದ್ದು, ಈ ವೇಳೆ ಪರ್ವೇಜ್ ಕುತ್ತಿಗೆ ಕೊಯ್ದು ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಬಳಿಕ ರೂಮಿನಿಂದ ಆಯೇಶಾ ವಾಪಸ್ ತೆರಳಿ, ಹಾಸನ ಪೊಲೀಸರ ಬಳಿ ಹಾಜರಾಗಿದ್ದಾಳೆ.
thirthahalli | ಪೊಲೀಸರ ಹುಡುಕಾಟದ ನಡುವೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಗೆ ಬಂದು ಹೋಗಿದ್ದನಾ ಸ್ಯಾಂಟ್ರೋ ರವಿ!?
ಸದ್ಯ ಅಲ್ಲಿಂದ ಮಾಹಿತಿ ಪಡೆದಿರುವ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಓಲ್ಡ್ಟೌನ್ ಠಾಣೆಯ ಪೊಲೀಸರು, (old town police station bhadravathi) ಆಯೇಶಾಳನ್ನು ಕರೆತಂದು, ಸ್ಥಳಮಹಜರ್ ನಡೆಸಲು ಸಿದ್ಧತೆ ನಡೆಸಿದ್ದಾರೆ.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com