GST : ಉದ್ಯಮಿಗಳೇ ನಿಮ್ಮ ದಾಖಲೆಗಳ ಬಗ್ಗೆ ಇರಲಿ ಎಚ್ಚರ: ನಿಮ್ಮ ರೆಕಾರ್ಡ್ಸ್​ನಲ್ಲಿ ಬೇರೆಯವರು ಜಿಎಸ್​ಟಿ ಪಡೆದುಕೊಳ್ತಾರೆ

Shimoga District Chamber of Commerce and Industry President N Gopinath said in a press release. Since getting gst facility is an online system, There is a possibility of fraudsters getting GST using the land records of some other businessman.

GST :  ಉದ್ಯಮಿಗಳೇ ನಿಮ್ಮ ದಾಖಲೆಗಳ ಬಗ್ಗೆ ಇರಲಿ ಎಚ್ಚರ: ನಿಮ್ಮ ರೆಕಾರ್ಡ್ಸ್​ನಲ್ಲಿ ಬೇರೆಯವರು ಜಿಎಸ್​ಟಿ ಪಡೆದುಕೊಳ್ತಾರೆ
ಉದ್ಯಮಿಗಳೇ ನಿಮ್ಮ ದಾಖಲೆಗಳ ಬಗ್ಗೆ ಇರಲಿ ಎಚ್ಚರ: ನಿಮ್ಮ ರೆಕಾರ್ಡ್ಸ್​ನಲ್ಲಿ ಬೇರೆಯವರು ಜಿಎಸ್​ಟಿ ಪಡೆದುಕೊಳ್ತಾರೆ
GST :  ಉದ್ಯಮಿಗಳೇ ನಿಮ್ಮ ದಾಖಲೆಗಳ ಬಗ್ಗೆ ಇರಲಿ ಎಚ್ಚರ: ನಿಮ್ಮ ರೆಕಾರ್ಡ್ಸ್​ನಲ್ಲಿ ಬೇರೆಯವರು ಜಿಎಸ್​ಟಿ ಪಡೆದುಕೊಳ್ತಾರೆ

ಉದ್ಯಮದಾರರು ನಿವೇಶನ ಹಾಗೂ ಸ್ಥಳೀಯ ಸಂಸ್ಥೆಗಳ ದಾಖಲೆಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು ಹಾಗೂ ದಾಖಲೆಗಳ ದುರುಪಯೋಗ ಆಗದಂತೆ ಎಚ್ಚರ ವಹಿಸಬೇಕು ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ  (Shimoga District Chamber of Commerce & Industry) ಅಧ್ಯಕ್ಷ ಎನ್.ಗೋಪಿನಾಥ್  ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಗರ ಟೌನ್​ನಲ್ಲಿ ನಡೆದ ಹಲ್ಲೆ ಯತ್ನ ಕೇಸ್​ ಬಗ್ಗೆ ಸಮೀರ್ ಸಹೋದರಿ ಹೇಳಿದ್ದೇನು? ವಿಡಿಯೋ ವರದಿ

ಕಾರಣವೇನು? 

ಜಿಎಸ್‌ಟಿ ಸೌಲಭ್ಯ ಪಡೆಯುವುದು ಆನ್‌ಲೈನ್ ವ್ಯವಸ್ಥೆ ಆಗಿರುವುದರಿಂದ ಯಾವುದೋ ಉದ್ಯಮಿಗಳ ನಿವೇಶನ ದಾಖಲೆಗಳನ್ನು ಬಳಸಿ ವಂಚಕರು ಜಿಎಸ್‌ಟಿ ಪಡೆದುಕೊಳ್ಳುವ ಸಾಧ್ಯತೆ ಇರುತ್ತದೆ. ಉದ್ಯಮಿಗಳು ಹಾಗೂ ಮಾಲೀಕರಿಗೆ ತಿಳಿಯದಂತೆ ದಾಖಲೆ ಸಲ್ಲಿಸಿ ಜಿಎಸ್‌ಟಿ ಸಂಖ್ಯೆ ಪಡೆದುಕೊಂಡು ಮೋಸ, ವಂಚನೆ ಮಾಡುವುದು ವಿವಿಧ ಕಡೆಗಳಲ್ಲಿ ಕಂಡುಬಂದಿದೆ. 

ಸಾಗರ ಟೌನ್​ನಲ್ಲಿ ನಡೆದ ಹಲ್ಲೆ ಯತ್ನ ಕೇಸ್​ ಬಗ್ಗೆ ಸಮೀರ್ ಸಹೋದರಿ ಹೇಳಿದ್ದೇನು? ವಿಡಿಯೋ ವರದಿ

ದೇಶದ ವಿವಿಧ ಕಡೆಗಳಲ್ಲಿ ವಂಚನೆ ನಡೆಸುತ್ತಿರುವ ಮೋಸಗಾರರು ಯಾವುದೋ ಸ್ಥಳಗಳಲ್ಲಿ ಕುಳಿತು ನಿಮ್ಮ ದಾಖಲೆಗಳನ್ನು ಬಳಸಿಕೊಂಡು ಜಿಎಸ್‌ಟಿ ಪಡೆಯುತ್ತಾರೆ. ನಂತರ ತೆರಿಗೆ ಪಾವತಿಸದೇ ದೇಶದ ಆರ್ಥಿಕ ವ್ಯವಸ್ಥೆಗೆ ನಷ್ಟ ಉಂಟುಮಾಡುತ್ತಾರೆ. ಪರಿಶೀಲನೆಗೆ ಬಂದ ಸಂದರ್ಭದಲ್ಲಿ ವಂಚನೆ ಆಗಿರುವುದು ಬೆಳಕಿಗೆ ಬರುತ್ತಿದೆ. ಆದ್ದರಿಂದ ಸ್ಥಳೀಯ ಉದ್ಯಮಿಗಳು ನಿಮ್ಮ ದಾಖಲೆಗಳ ಬಗ್ಗೆ ಎಚ್ಚರ ವಹಿಸಬೇಕು. ಅಪರಿಚಿತರೊಂದಿಗೆ ದಾಖಲೆಗಳನ್ನು ಹಂಚಿಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.

ಸಾಗರ ಟೌನ್​ನಲ್ಲಿ ಹಲ್ಲೆಗೆ ಯತ್ನ ಕೇಸ್​/ ಆರೋಪಿಗಳ ಬಂಧನ/ ಶಾಸಕ ಹರತಾಳು ಹಾಲಪ್ಪ ಹೇಳಿದ್ದೇನು? ಇಲ್ಲಿದೆ ವಿಡಿಯೋ ವರದಿ

ಸ್ಥಳೀಯ ಸಂಸ್ಥೆಗಳು ನಿವೇಶನ ಮಾಹಿತಿಗಳನ್ನು ಎಲ್ಲರಿಗೂ ದೊರಕುವಂತೆ ಮಾಡದೇ ಸುರಕ್ಷತೆಗೆ ಕ್ರಮ ವಹಿಸಬೇಕು. ಮಾಹಿತಿ ಪಡೆಯುವ ನಿವೇಶನದಾರರು ಒಟಿಪಿ ಅಥವಾ ಸುರಕ್ಷತಾ ಪಾಸ್ ವರ್ಡ್ ಬಳಸಲು ಅನುವು ಮಾಡಬೇಕು. ಇದರಿಂದ ಎಲ್ಲೋ ಕುಳಿತಿರುವ ವಂಚಕ ಬೇರೆಯವರ ದಾಖಲೆಯ ಮಾಹಿತಿ ಪಡೆಯಲು ಅಸಾಧ್ಯವಾಗುತ್ತದೆ.

ವಿದ್ಯಾರ್ಥಿಗಳು ಹಾಗೂ ಪೋಷಕರ ಗಮನಕ್ಕೆ:  ಎಸ್ಸೆಸ್ಸೆಲ್ಸಿ, ಪಿಯುಸಿ ಹೊಸ ಪರೀಕ್ಷಾ ಮಂಡಳಿಗೆ ಇನ್ಮುಂದೆ ನೂತನ ವೆಬ್‌ಸೈಟ್

ತೆರಿಗೆ ಇಲಾಖೆ ಅಧಿಕಾರಿಗಳು ಯಾವುದೇ ವ್ಯಕ್ತಿ ಜಿಎಸ್‌ಟಿಗೆ ಅರ್ಜಿ ಸಲ್ಲಿಸಿದರೂ ಸ್ಥಳ ಪರಿಶೀಲನೆ ಮಾಡಿಯೇ ಜಿಎಸ್‌ಟಿ ನೀಡಬೇಕು. ಇಲ್ಲದಿದ್ದರೆ ಎಲ್ಲೋ ಕುಳಿತಿರುವ ವಂಚಕರು ಮತ್ತೊಬ್ಬರ ಹೆಸರಲ್ಲಿ ಜಿಎಸ್‌ಟಿ ಪಡೆದು ವಂಚಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಜಿಎಸ್ ಟಿ ತೆರಿಗೆ ಇಲಾಖೆ ಅಧಿಕಾರಿಗಳು ಜಿಎಸ್‌ಟಿ ನೀಡುವ ಮುನ್ನ ಪರಿಶೀಲಿಸಬೇಕು ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮನವಿ ಮಾಡಿದ್ದಾರೆ.

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com