ಈ ವಿದ್ಯಾರ್ಥಿನಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಪೊಲೀಸರಿಗೆ ಮಾಹಿತಿ ನೀಡಿ!

If you get any clue about this student, inform the police! ಈ ವಿದ್ಯಾರ್ಥಿನಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಪೊಲೀಸರಿಗೆ ಮಾಹಿತಿ ನೀಡಿ!

ಈ ವಿದ್ಯಾರ್ಥಿನಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಪೊಲೀಸರಿಗೆ ಮಾಹಿತಿ ನೀಡಿ!

KARNATAKA NEWS/ ONLINE / Malenadu today/ Aug 18, 2023 SHIVAMOGGA NEWS  

ಭದ್ರಾವತಿ: ನಗರದ ಹಳೇ ನಗರ ಪೊಲೀಸ್ ಠಾಣೆ (Old Nagar Police Station) ವ್ಯಾಪ್ತಿಯ ಭೋವಿ ಕಾಲೋನಿ 3ನೇ ಕ್ರಾಸ್ ಬಲಭಾಗ ನಿವಾಸಿ, ಸ‌ರ್​ಎಂವಿ ಕಾಲೇಜಿನ ಡಿಪ್ಲೊಮಾ ವಿದ್ಯಾರ್ಥಿನಿ ಯಾಗಿದ್ದ ಲೀಲಾವತಿ (18) ನಾಪತ್ತೆಯಾಗಿದ್ದಾಳೆ. 

ಈ ಸಂಬಂಧ ಪ್ರಕರಣ ದಾಖಲಾಗಿದೆ. ಲೀಲಾವತಿ ಕಳೆದ ಆಗಸ್ಟ್14 ರಿಂದ ಕಾಣೆಯಾಗಿದ್ದು,   ಗೋಧಿ ಮೈ ಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಎಡಗೈಯಲ್ಲಿ 'ಎಲ್' ಆಕಾರದ ಹಚ್ಚೆ ಗುರುತು ಇದೆ. 

ಲೀಲಾವತಿಯು ಬೋವಿ ಕಾಲೋನಿ ಲೋಕೇಶ್ ಅವರ ಪುತ್ರಿಯಾಗಿದ್ದು, ಕಾಣೆಯಾದಾಗ ಸರ್ ಎಂವಿ ಕಾಲೇಜಿನ ಸಮವಸ್ತ್ರ, ನೀಲಿ ಬಣ್ಣದ ಪ್ಯಾಂಟ್ ಮತ್ತು ಕೋಟು, ತೆಳು ನೀಲಿ ಬಣ್ಣದ ಟಾಪ್ ಧರಿಸಿದ್ದರು. ಈ ವಿದ್ಯಾರ್ಥಿನಿ ಮಾಹಿತಿ ಯಾರಿಗಾದರೂ ಸಿಕ್ಕಲ್ಲಿ ತಕ್ಷಣ ಹಳೇನಗರ ಪೊಲೀಸ್‌ ಠಾಣೆಗೆ ಮಾಹಿತಿ ನೀಡುವಂತೆ (ಮೊ: 7619260761) ಕೋರಲಾಗಿದೆ.

ಶಿವಮೊಗ್ಗ ಜಿಲ್ಲೆಯ ವಿವಿದೆಡೆ ಇಂದು ಪವರ್​ ಕಟ್ ಜಾರಿ! ಎಲ್ಲೆಲ್ಲಿ? ಪೂರ್ತಿ ವಿವರ ಇಲ್ಲಿದೆ!

ಶಿರಾಳಕೊಪ್ಪದಲ್ಲಿಂದು ವಿದ್ಯುತ್ ವ್ಯತ್ಯಯ

ತೊಗರ್ಸಿಯ 110/11 ಕೆ.ವಿ. ಮತ್ತು ಕೊರಟಗೇರಿಯ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಶಿವಮೊಗ್ಗದ ಬೃಹತ್ ಕಾಮಗಾರಿ ವಿಭಾಗದಿಂದ ದುರಸ್ತಿ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆ ಆ.18ರಂದು ವಿದ್ಯುತ್‌ ವ್ಯತ್ಯಯವಾಗಲಿದೆ.ಬೃಹತ್‌ ಕಾಮಗಾರಿ ವಿಭಾಗದವರು ತಾಲೂಕಿನ ಬಳ್ಳಿಗಾವಿ ಲಿಮಿಟ್‌ನಿಂದ ಹಾಲಿಯಿರುವ 110 ಕೆವಿ ಜೋಡಿ ಪ್ರಸರಣ ಮಾರ್ಗದ ಗೋಪುರದ ಖಾಲಿ ಯಿರುವ ಕ್ರಾಸ್ ಬಳಸಿಕೊಂಡು 2ನೇ ಮಾರ್ಗ ಎನ್ನು 26.67 ಕಿ.ಮೀ. ಉದ್ದದ 110/11 ಕೆವಿ ಉಪಕೇಂದ್ರ ಕೋಟಿಪುರದವರೆಗೆ ವಿಸ್ತರಿಸಿ, 110 ಕೆವಿ ಟಿ, ಬಿ.ಯನ್ನು ನಿರ್ಮಿಸಲು ಮಾರ್ಗಮುಕ್ತತೆ ಪಡೆಯಲು ಉದ್ದೇಶಿಸ ಲಾಗಿದೆ, ಆದ್ದರಿಂದ 18ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ವಿವಿಧೆಡೆ ವಿದ್ಯುತ್‌ ಫೀಡರ್‌ಗಳಿಗೆ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.ತೊಗರ್ಸಿ ಕೇಂದ್ರ ವ್ಯಾಪ್ತಿಯ ತೊಗರ್ಸಿ, ಕಣಸೋಗಿ, ಕವಲಿ, ಕೋಡಿಹಳ್ಳಿ, ಹುಣಸೆಕಟ್ಟೆ, ಹೊಸಕೊಪ್ಪ, ಹರಗಿ ಮತ್ತು ಯಳಗೇರಿ ಮತ್ತು ಕೊರಟಿಗೇರೆ ಕೇಂದ್ರ ವ್ಯಾಪ್ತಿಯ ಸುಣ್ಣದಕೊಪ್ಪ, ಕೊರಟಗೇರೆ ಕಡೇನಂದಿಹಳ್ಳಿ, ರಾಗಿಕೊಪ್ಪ, ಮಲ್ಲೇನ ಹಳ್ಳಿ, ಮಾಯತಮ್ಮನ ಮುಚಡಿ ಗ್ರಾಮಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ವಿದ್ಯುತ್ ವ್ಯತ್ಯಯ

ವಿದ್ಯುತ್‌ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ನಾ ಎ.ಎಫ್ - 5 ರಲ್ಲಿ ತುರ್ತು * ಕಾಮಗಾರಿ ಹಮ್ಮಿಕೊಂಡಿರುವ ಕಾರಣ ಆ.18 ರ ಬೆಳಗ್ಗೆ 10 ರಿಂದ - ಮಧ್ಯಾಹ್ನ 03 ಗಂಟೆಯವರೆಗೆ ಗೋಪಾಳ ಬಡಾವಣೆ, ಬಿ.ಸಿ.ಡಿ. ಕ ಇ.ಎಫ್ ಬ್ಲಾಕ್ ಸುತ್ತ ಮುತ್ತಲಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ವಾಗಲಿದೆ' ಎಂದು ಮೆಸ್ಕಾಂ ತಿಳಿಸಿದೆ.

ಇನ್ನಷ್ಟು ಸುದ್ದಿಗಳು


 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು