KARNATAKA NEWS/ ONLINE / Malenadu today/ Sep 26, 2023 SHIVAMOGGA NEWS’
ಭದ್ರಾವತಿ ತಾಲ್ಲೂಕಿನ ಹಿಂದೂ ಮಹಾಸಭಾ ಗಣಪತಿಯ ಮೆರವಣಿಗೆ ಆರಂಭವಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿರುವ ಭಕ್ತರ ಜಯಘೋಷಗಳೊಂದಿಗೆ ವಿನಾಯಕ ರಾಜಬೀದಿ ಉತ್ಸವ ಸಾಗುತ್ತಿದೆ. ಈ ಮಧ್ಯೆ ಮೆರವಣಿಗೆಯಲ್ಲಿ ಹಿಂದೂ ಹರ್ಷನ ಫೋಟೋ ಕೂಡ ಪ್ರದರ್ಶನಗೊಂಡಿದೆ.
ಗಣಪತಿ ವಿಸರ್ಜನಾ ಮೆರವಣಿಗೆಯ ವೇಳೇ ವಾದ್ಯ ಮೇಳದ ಸದ್ದಿಗೆ ಕುಣಿಯುತ್ತಿರುವ ಭಕ್ತರು, ಹಿಂದೂ ಹರ್ಷನ ಫೋಟೋವನ್ನು ಪ್ರದರ್ಶಿಸಿದರು. ಕೇಸರಿ ಪೇಟ, ಕೇಸರಿ ಶಾಲು, ಕೇಸರಿ ಭಾವುಟಗಳನ್ನು ಹಿಡಿದು ಗುಂಪು ಗುಂಪಾಗಿ ಬರುತ್ತಿರುವ ಭಕ್ತರು, ನಿಗದಿತ ಜಾಗಗಳಲ್ಲಿ ಮೆರವಣಿಗೆಯನ್ನು ಸೇರಿಕೊಳ್ಳುತ್ತಿದ್ದಾರೆ.
ಕೇಸರಿ ಬಣ್ಣವನ್ನು ಎರಚಿಕೊಳ್ಳುತ್ತಿರುವ ಭಕ್ತರು ಓಕುಳಿಯ ಹಬ್ಬದಂತೆ ವಿನಾಯಕನ ಮೆರವಣಿಗೆಯಲ್ಲಿ ಸಂಭ್ರಮಿಸುತ್ತಿದೆ
ಮತ್ತೊಂದೆಡೆ ಭಕ್ತರು, ಗಣಪನಿಗೆ ಈಡುಗಾಯಿ ಒಡೆದರು, ಮೆರಣವಣಿಗೆ ಸಾಗುತ್ತಲೇ ರಸ್ತೆಯಲ್ಲಿ, ಅಲಂಕೃತ ವಾಹನದ ಎದುರು ಹಲವರು ಈಡುಗಾಯಿ ಒಡೆದು ಮೆರವಣಿಗೆ ಸಾಂಗವಾಗಿ ಸಾಗಲಿ ಎಂದು ಪ್ರಾರ್ಥಿಸಿದರು.
ಮುಖಂಡ ಬಿ.ಕೆ. ಮೋಹನ್ ಹಾಗೂ ವಿವಿಧ ಮುಖಂಡರು ಓಂ ಎಂದು ಬಿಡಿಸಿದ ಬೃಹತ್ ರಂಗೋಲಿಯ ನಡುವೆ ದೊಡ್ಡ ಗಾತ್ರದ ಕರ್ಪೂರವನ್ನು ಬೆಳಗಿ ವಿನಾಯಕನಿಗೆ ಕೈ ಮುಗಿದರು.
ಇನ್ನೂ ಭಕ್ತರಿಗೆಂದೇ ವಿಶೇಷ ಊಟ ಸಿದ್ದಪಡಿಸಲಾಗಿದ್ದು, ಮೆರವಣಿಗೆ ಸಾಗಿ ಬರುವ ಹೊತ್ತಿನಲ್ಲಿಯೇ ಭಕ್ತರಿಗೆ ಊಟೋಪಚಾರಕ್ಕೆ ವ್ಯವಸ್ಥೆ ಮಾಡಲಾಗ್ತಿದೆ
ಈ ನಡುವೆ ವಿನಾಯನಕನಿಗೆ ವಿಶೇಷವಾಗಿ ವಿವಿಧ ರೀತಿಯ ಹೂವು ಹಣ್ಣಿನ ಹಾರಗಳನ್ನು ಹಾಕಲಾಗುತ್ತಿದೆ. ಅದರಲ್ಲಿಯು ಭಕ್ತರೊಬ್ಬರು ನೋಟಿನ ಹಾರವನ್ನೆ ಗಣೇಶನಿಗೆ ಸಲ್ಲಿಸಿದರು.
ಇನ್ನಷ್ಟು ಸುದ್ದಿಗಳು
