ಅಧಿಕೃತವಾಗಿ ಸಾಗಿಸ್ತಿದ್ದ ಮರಳಿಗೆ ಅನಧಿಕೃತ 10 ಸಾವಿರ ರೂಪಾಯಿ ಫೈನ್! ಪೊಲೀಸರ ‘ಖಾಸಗಿ ದಂಡಕ್ಕೆ’ ಲಾರಿ ಮಾಲೀಕರು ಹೈರಾಣ

Rs 10,000 fine for sand being officially transported Police's 'private penalty' hurts lorry owners

ಅಧಿಕೃತವಾಗಿ ಸಾಗಿಸ್ತಿದ್ದ ಮರಳಿಗೆ ಅನಧಿಕೃತ 10 ಸಾವಿರ ರೂಪಾಯಿ ಫೈನ್!  ಪೊಲೀಸರ ‘ಖಾಸಗಿ ದಂಡಕ್ಕೆ’ ಲಾರಿ ಮಾಲೀಕರು ಹೈರಾಣ
ಅಧಿಕೃತವಾಗಿ ಸಾಗಿಸ್ತಿದ್ದ ಮರಳಿಗೆ ಅನಧಿಕೃತ 10 ಸಾವಿರ ರೂಪಾಯಿ ಫೈನ್! ಪೊಲೀಸರ ‘ಖಾಸಗಿ ದಂಡಕ್ಕೆ’ ಲಾರಿ ಮಾಲೀಕರು ಹೈರಾಣ

ಶಿವಮೊಗ್ಗದಲ್ಲಿ ಮರಳು ಸಾಗಾಣಿಕೆಗೆ ನಾನಾ ಮುಖಗಳಿವೆ ಎನ್ನುವುದು ಗೊತ್ತಿರುವಂತಹ ಸತ್ಯ. ಒಂದು ಕಡೆ ಪಾತಕ ಲೋಕದ ಮಾಫಿಯಾ ಇಡೀ ಮರಳು ದಂಧೆಯನ್ನು ನಿಯಂತ್ರಿಸಲು ಹೊಡೆದಾಡುತ್ತಿದ್ದರೆ, ಇನ್ನೊಂದು ಕಡೆ ರಾಜಕಾರಣದ ವೈರತ್ವಗಳು ಉಸುಕಿನ ಬಣಗಳ ಗುದ್ದಾಟಕ್ಕೆ ಸಾಕ್ಷಿಯಾಗುತ್ತಿದೆ. ಇದರ ನಡುವೆ ಪೊಲೀಸ್ ಇಲಾಖೆ , ಬಡಪಾಯಿ ಲಾರಿ ಮಾಲೀಕರನ್ನು ಹಿಡಿದು ಅನದಿಕೃತ ಫೀಜ್​ ವಸೂಲಿ ಮಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ನಿನ್ನೆ ಭದ್ರಾವತಿ ಮಿಲಿಟರಿ ಕ್ಯಾಂಪ್​ನಲ್ಲಿ ಘಟನೆಯೊಂದು ನಡೆದಿದೆ.  ನ್ಯೂಟೌನ್​ ಪೊಲೀಸರು, ಎರಡು ಮರಳು ಲಾರಿಗಳನ್ನು ತಡೆದು ಅದನ್ನ ಸ್ಟೇಷನ್​ಗೆ ತೆಗೆದುಕೊಂಡು ಹೋಗಿದ್ದಾರೆ. 

ಅಸಲಿಗೆ ಕಾಯಿದೆ ಕಾನೂನು ಉಲ್ಲಂಘಿಸಿದ್ದರೆ, ಪೊಲೀಸ್ ಇಲಾಖೆಯೇ ಅದಕ್ಕೆ ಫೈನ್ ಕಟ್ಟಿಸಿಕೊಂಡು ರಸೀದಿ ನೀಡುತ್ತದೆ. ಆದರೆ ಇಲ್ಲಿ ಫೈನ್​ ಕಟ್ಟಿಸಿಕೊಂಡಿಲ್ಲ. ಏಕೆಂದರೆ, ಮರಳು ಲಾರಿಗಳು ಅಧಿಕೃತ ಬಿಲ್​ನೊಂದಿಗೆ ಮಿಲಿಟರಿ ಕ್ಯಾಂಪ್​ಗೆ ಬಂದಿದ್ದವು. ಸಾಗಾಟದ ಅವಧಿಯ ಮಿತಿಯನ್ನು ಸಹ ದಾಟಿರಲಿಲ್ಲ. ಹಾಗಿದ್ದರೂ, ಲಾರಿಯನ್ನು ತಡೆದ ಪೊಲೀಸ್  ಸಿಬ್ಬಂದಿ ಮತ್ತು ಅಧಿಕಾರಿಯು, ಲಾರಿಯ ಮಾಲೀಕರ ಬಳಿಯಲ್ಲಿ 10 ಸಾವಿರ ರೂಪಾಯಿ ಫೈನ್ ಕಟ್ಟಿಸಿಕೊಂಡಿದ್ದಾರೆ. ಆದರೆ ಇದು ಅಧಿಕೃತವಾಗಿ ಅಲ್ಲ! ರಶೀದಿಯನ್ನು ನೀಡದೇ, 10 ಸಾವಿರ ಫೀಜ್​ ಪಡೆದಿದ್ದನ್ನ ಏನು ಎಂದು ಕರೆಯಬಹುದು ಎಲ್ಲರಿಗೂ ಗೊತ್ತಿರುವಂತದ್ದೆ. 

ಆಗುಂಬೆ ಆನೆ ಹಿಡಿಯಲು ಸಿಗದ ಪರ್ಮಿಶನ್ ತೀರ್ಥಹಳ್ಳಿ ಆನೆ ಸೆರೆಗೆ ಸಿಕ್ಕಿದ್ದೇಗೆ! 4 ದಿನದ ಆಪರೇಷನ್ ನಲ್ಲಿ ಉದ್ಭವವಾಗಿದೆ 5 ಪ್ರಶ್ನೆಗಳು! JP Story

ಲಾರಿ ಮಾಲೀಕರು ಹಾಗೂ ಚಾಲಕರು ಕಾನೂನು ಉಲ್ಲಂಘಿಸಿದ್ದರೇ, ಅದಕ್ಕೆ ತಕ್ಕದಾದ ಸೆಕ್ಷನ್​ನಲ್ಲಿ ಕೇಸ್ ಹಾಕಬಹುದಿತ್ತು. ಆದರೆ ಪ್ರಾಮಾಣಿಕ ಪೊಲೀಸ್ ಸಿಬ್ಬಂದಿ ಆ ನಿಟ್ಟಿನಲ್ಲಿ ಕೆಲಸ ಮಾಡಲಿಲ್ಲ. ಬದಲಾಗಿ ಮಾಲೀಕರ ಬಳಿಯಲ್ಲಿ 10 ಸಾವಿರ ರೂಪಾಯಿಯನ್ನು ಪಡೆದು , ಲಾರಿಯನ್ನು ಬಿಟ್ಟುಕಳುಹಿಸಿಕೊಡಲಾಗಿದೆ. ಇದು ಎಷ್ಟರಮಟ್ಟಿಗೆ ಸರಿ? ಎಂಬುದು ಲಾರಿ ಮಾಲೀಕರ ಪ್ರಶ್ನೆ. ದಿನವೊಂದಕ್ಕೆ ಸಿಗುವ ಬಿಲ್​ನಲ್ಲಿಯೇ ಲಾರಿ ಬಾಡಿಗೆ ಪಡೆದುಕೊಂಡು ಬದುಕುವ ಮಾಲೀಕರನ್ನ, ಸಿಕ್ಕಸಿಕ್ಕಲ್ಲಿ ಅಡ್ಡಗಟ್ಟಿ ನಿಲ್ಲಿಸಿ, ಖಾಸಗಿ ಫೈನ್ ಹಾಕುವ ಪ್ರವೃತ್ತಿಯ ಬಗ್ಗೆ ಶಿವಮೊಗ್ಗ ಎಸ್​ಪಿ ಮಿಥುನ್​ ಕುಮಾರ್​ರವರು ಗಮನ ಹರಿಸಬೇಕಿದೆ. 

ಮರಳು ಸಾಗಾಣಿಕೆಯ ವಿಚಾರದಲ್ಲಿ ಆರ್​ಟಿಒದಿಂದ ಹಿಡಿದು ಪೊಲೀಸರು, ಅರಣ್ಯ ಸಿಬ್ಬಂದಿ, ಭೂವಿಜ್ಞಾನ ಇಲಾಖೆಯವರೆಗೂ ಪ್ರತಿಯೊಂದು ಇಲಾಖೆಯ ಹದ್ದಿನ ಕಣ್ಣಿರುತ್ತದೆ. ಅಕ್ರಮವಾಗಿದ್ದರೇ, ಅದಕ್ಕೆ ತಕ್ಕ ಕೇಸು ಕಾನೂನಿನ ಮೂಲಕವೇ ಹಾಕಬೇಕು. ಅದು ನ್ಯಾಯ. ಆದರೆ,  ಖಾಸಗಿ ಫೈನು ಯಾರ ಲೆಕ್ಕದಲ್ಲಿ ಹಾಕಲಾಗುತ್ತದೆ. ಮತ್ತು ಯಾರ್ಯಾರಿಗೆ ವಿತರಿಸಲಾಗುತ್ತದೆ ಎಂಬುದನ್ನ  ಪೊಲೀಸ್ ಇಲಾಖೆಯ ಅಧಿಕಾರಿಗಳೇ ಹೇಳಬೇಕಿದೆ. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023, shivamogga,shivamogga accident,road ,shivamogga news,shivamogga,shivamogga airport,kannada news live,kannada news,shivamogga airport inauguration,shivamogga latest news,pm modi in shivamogga,latest kannada news,shivamogga mp,live news,shivamogga today news,shivamogga airport​,kannada live news,karnataka latest news,kannada latest news,pm modi inaugurate shivamogga airport,shivamogga new airport,latest news,karnataka news,breaking news,shivamogga news today